ಇರಾಕ್‍ನಲ್ಲಿ ರಾಜಕೀಯ ಕೈದಿಗಳ ಸಂಘರ್ಷ, ಜೈಲಿನಲ್ಲಿ ಬೆಂಕಿ

Social Share

ಬಾಗ್ದಾದ್. ಅ, 16 – ಇರಾನ್ ರಾಜಧಾನಿಯಲ್ಲಿ ರಾಜಕೀಯ ಕೈದಿಗಳು ಮತ್ತು ಸರ್ಕಾರಿ ವಿರೋಧಿ ಕಾರ್ಯಕರ್ತರನ್ನು ಇರಿಸಲಾಗಿರುವ ಜೈಲಿನಲ್ಲಿ ಕಳೆದ ರಾತ್ರಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಗುಂಡೇಟಿನ ಸದ್ದು ಕೂಡ ಕೇಳಿಸಿದೆ.

ಒಂದು ವಾರ್ಡ್‍ನಲ್ಲಿದ್ದ ಕೈದಿಗಳು ಮತ್ತು ಜೈಲು ಸಿಬ್ಬಂದಿ ನಡುವೆ ಘರ್ಷಣೆಗಳು ನಡೆದಿವೆ ಎಂದು ಹಿರಿಯ ಭದ್ರತಾ ಅಧಿಕಾರಿಯನ್ನು ಉಲ್ಲೇಖಿಸಿ ಇರಾನ್‍ನ ಸರ್ಕಾರಿ ಐಆರ್‍ಎನ್‍ಎ ವರದಿ ಮಾಡಿದೆ.

ಜೈಲು ಸಮವಸ್ತ್ರ ತುಂಬಿದ್ದ ಗೋದಾಮಿಗೆ ಕೈದಿಗಳು ಬೆಂಕಿ ಹಚ್ಚಿದ್ದು,ಸಂಘರ್ಷವನ್ನು ಉಲ್ಬಣಗೊಳ್ಳದಂತೆ ಕೈದಿಗಳನ್ನು ಪ್ರತ್ಯೇಕಿಸಲಾಗಿದೆ ಎಂದು ಟೆಹ್ರಾನ್‍ನ ಕಾನೂನು ಸಚಿವಾಲಯದ ಅಲಿ ಸಲೇಹಿ ತಿಳಿಸಿದ್ದಾರೆ. ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣದಲ್ಲಿದೆ ಮತ್ತು ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಬೆಂಕಿಯ ಹೊತ್ತಿ ಉರಿಯುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿವೆ. ಟೆಹ್ರಾನ್‍ನಲ್ಲಿ ಎಚ್ಚರಿಕೆಯ ಶಬ್ದದ ನಡುವೆ ದಟ್ಟ ಹೊಗೆ ಆಕಾಶವನ್ನು ಆವರಿಸಿದೆ ಆದರೆ ಸಾವು ನೋವು ಬಗ್ಗೆ ಮಾಹಿತಿ ಬಹಿರಂಗವಾಗಿಲ್ಲ.

ಎವಿನ್ ಜೈಲಿಗೆ ಹೋಗುವ ರಸ್ತೆಗಳು ಮತ್ತು ಹೆದ್ದಾರಿಗಳನ್ನು ಪೊಲೀಸರು ನಿರ್ಬಂಧಿಸಿದ್ದಾರೆ ಮತ್ತು ಕನಿಷ್ಠ ಮೂರು ಬಲವಾದ ಸ್ಪೋಟಗಳು ಆ ಪ್ರದೇಶದಲ್ಲಿ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ಮೊಬೈಲ್ ಮೂಲಕ ಇತರರಿಗೆ ಕಳುಹಿಸಿದ್ದಾರೆ.

ರಾಜಧಾನಿಯ ಉತ್ತರದಲ್ಲಿರುವ ಜೈಲಿನ ಸಮೀಪವಿರುವ ಪ್ರಮುಖ ವಾಹನ ಸಂಜಾರ ಮಾರ್ಗಗಳಲ್ಲಿ ದಟ್ಟಣೆಯು ಅಧಿಕವಾಗಿತ್ತು ಮತ್ತು ಅನೇಕ ಜನರು ಪ್ರತಿಭಟನೆಯೊಂದಿಗೆ ತಮ್ಮ ಒಗ್ಗಟ್ಟನ್ನು ತೋರಿಸಲು ಹಾರ್ನ್ ಮಾಡಿದರು.
ಈ ಪ್ರದೇಶದಲ್ಲಿ ಇಂಟರ್ನೆಟ್ ಅನ್ನು ನಿರ್ಬಂಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಇರಾನ್‍ನಲ್ಲಿರುವ ವಿಶ್ವಸಂಸ್ಥೆ ಮೂಲದ ಮಾನವ ಹಕ್ಕುಗಳ ಕೇಂದ್ರವು ಜೈಲಿನ ಗೋಡೆಗಳೊಳಗೆ ಸಶಸ್ತ್ರ ಸಂಘರ್ಷ ಪ್ರಾರಂಭವಾಯಿತು ಎಂದು ವರದಿ ಮಾಡಿದೆ. ಇರಾನ್‍ನಾದ್ಯಂತ ಕೆಲವು ನಗರಗಳಲ್ಲಿನ ಪ್ರಮುಖ ಬೀದಿಗಳಲ್ಲಿ ಮತ್ತು ವಿಶ್ವವಿದ್ಯಾಲಯಗಳಲ್ಲಿ ಪ್ರತಿಭಟನಾಕಾರರು ಸರ್ಕಾರದ ವಿರೋಧಿ ಪ್ರದರ್ಶನಗಳನ್ನು ತೀವ್ರಗೊಳಿಸಿದ್ದರಿಂದ ಜೈಲು ಬೆಂಕಿ ಸಂಭವಿಸಿದೆ.

ಆಂದೋಲನವು ನಾಲ್ಕನೇ ವಾರವನ್ನು ಮುಕ್ತಾಯಗೊಳಿಸುತ್ತಿದ್ದಂತೆ ಮಾನವ ಹಕ್ಕುಗಳ ಪರಿವೀಕ್ಷಕರು ಮಕ್ಕಳು ಸೇರಿದಂತೆ ನೂರಾರು ಮಂದಿ ಸತ್ತಿದ್ದಾರೆ ಎಂದು ವರದಿ ಮಾಡಿದ್ದಾರೆ. ಸರ್ಕಾರ ಇದನ್ನು ಅಲ್ಲಗೆಳೆದಿದೆ.

Articles You Might Like

Share This Article