ದೀಪಾವಳಿ ಮುಗಿದರೂ ನಿಲ್ಲದ ಪಟಾಕಿ ಹಾವಳಿ

Social Share

ಬೆಂಗಳೂರು,ನ.7- ಬೆಳಕಿನ ಹಬ್ಬ ದೀಪಾವಳಿ ಮುಗಿದರೂ ಪಟಾಕಿ ಹಾವಳಿ ಮಾತ್ರ ನಿಲ್ಲುತ್ತಿಲ್ಲ.
ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ, ಇದುವರೆಗೂ ಸರಿ ಸುಮಾರು 150ಕ್ಕೂ ಹೆಚ್ಚು ಮಂದಿ ಬೆಳಕಿನ ಹಬ್ಬದ ಸಂದರ್ಭದಲ್ಲಿ ತಮ್ಮ ಕಣ್ಣುಗಳಿಗೆ ಹಾನಿ ಮಾಡಿಕೊಂಡಿದ್ದಾರೆ.

ದೀಪಾವಳಿ ಹಬ್ಬ ಮುಗಿದು ಹಲವು ದಿನಗಳೇ ಕಳೆದುಹೋಗಿದ್ದರೂ ಕಳೆದ ಒಂದು ವಾರದಲ್ಲೇ 11ಪ್ರಕರಣಗಳು ದಾಖಲಾಗಿರುವುದು ವಿಶೇಷವಾಗಿದೆ. ತುಳಸಿ ಪೂಜೆ, ಕಿರು ದೀಪಾವಳಿ, ಕ್ರಿಕೆಟ್ ಹೆಸರಿನಲ್ಲಿ ಇನ್ನು ಕೂಡ ಜನ ಪಟಾಕಿ ಸಿಡಿಸುತ್ತಿರುವುದರಿಂದ ಇಂತಹ ಅನಾಹುತಗಳು ಹೆಚ್ಚಾಗಲು ಪ್ರಮುಖ ಕಾರಣವಾಗಿದೆ.

ರಾಜ್ಯದಲ್ಲಿ ಉಪಚುನಾವಣೆ ನಡೆಸದಿರಲು ಆಯೋಗ ನಿರ್ಧಾರ ..?

ಅಕ್ಟೋಬರ್ 29 ರಿಂದ ಈ ವರೆಗೆ ಮಿಂಟೋ ಆಸ್ಪತ್ರೆಯಲ್ಲಿ 6, ನಾರಾಯಣ ನೇತ್ರಾಲಯದಲ್ಲಿ 4 ಹಾಗೂ ನೇತ್ರಧಾಮದಲ್ಲಿ 1 ಪ್ರಕರಣ ಬೆಳೆಕಿಗೆ ಬಂದಿವೆ. ಕಳೆದ ಮೂರು ವರ್ಷಕ್ಕೆ ಹೋಲಿಸಿದರೆ, ಈ ವರ್ಷವೆ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿರುವುದು ವಿಶೇಷವಾಗಿದೆ.

ಚಳಿಗಾಲದ ಅಲರ್ಜಿಯಿಂದ ಪಾರಾಗಬೇಕಾದರೆ ಈ 6 ಆಹಾರ ಸೇವಿಸಿ

ಇತ್ತಿಚೆಗೆ ಜನ ಪಟಾಕಿ ಸಿಡಿಸುವುದರ ಬಗ್ಗೆ ಹೆಚ್ಚು ಜಾಗೃತೆ ವಹಿಸಿದ್ದಾರೆ. ಅದರಲ್ಲೂ ಕೆಲವರು ಹಸಿರು ಪಟಾಕಿಗಳನ್ನು ಮಾತ್ರ ಸಿಡಿಸಿ ಸಂಭ್ರಮಿಸಿದ್ದಾರೆ. ಆದರೂ ಈ ವರ್ಷವೇ ಅತಿ ಹೆಚ್ಚು ದುರ್ಘಟನೆ ನಡೆದಿರುವುದು ಅಚ್ಚರಿ ಮೂಡಿಸಿದೆ.

Articles You Might Like

Share This Article