ಪಟಾಕಿ ಅಂಗಡಿ ಮಾಲೀಕನ ಕಾರು ಅಡ್ಡಗಟ್ಟಿ 20 ಲಕ್ಷ ದರೋಡೆ

Social Share

ಆನೇಕಲ್, ಅ.24- ಪಟಾಕಿ ಅಂಗಡಿ ಮಾಲೀಕನ ಕಾರನ್ನು ಅಡ್ಡಗಟ್ಟಿದ ದರೋಡೆಕೋರರು ಲಾಂಗ್‍ನಿಂದ ಮಾಲೀಕನ ಮೇಲೆ ಹಲ್ಲೆ ನಡೆಸಿ 20 ಲಕ್ಷ ಹಣ ದೋಚಿ ಪರಾರಿಯಾಗಿ ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬೆಂಗಳೂರು ಹೊರ ವಲಯದ ಆನೇಕಲ್ ತಾಲೂಕು ಹೊಸೂರು ಮುಖ್ಯ ರಸ್ತೆಯ ಅತ್ತಿಬೆಲೆ ಟೋಲ್ ಸಮೀಪದ ಕಾವೇರಮ್ಮನ ಗುಡಿ ಬಳಿ ಕಳೆದೆರಡು ದಿನಗಳ ಹಿಂದೆ ಈ ಘಟನೆ ನಡೆದಿದೆ. ತಮಿಳು ನಾಡಿನ ಹೊಸೂರು ರಸ್ತೆ ಸಮೀಪದ ನಿವಾಸಿ ಚಂದ್ರಶೇಖರ್ ರೆಡ್ಡಿ ಎಂಬುವರು ಹೆಬ್ಬಗೋಡಿಯಲ್ಲಿ ಪಟಾಕಿ ಅಂಗಡಿ ಇಟ್ಟುಕೊಂಡಿದ್ದಾರೆ.

ಮೊನ್ನೆ ಬೆಳಗಿನ ಜಾವ 1.30ರ ಸುಮಾರಿನಲ್ಲಿ ಪಟಾಕಿ ಮಾರಿ ಹಣ ಸಂಗ್ರಹಿಸಿಕೊಂಡು 20 ಲಕ್ಷ ಹಣವನ್ನು ತಮ್ಮ ಕಾರಿನಲ್ಲಿಟ್ಟುಕೊಂಡು ಮನೆಗೆ ವಾಪಾಸ್ಸಾಗುತ್ತಿದ್ದಾಗ ಇಬ್ಬರು ದರೋಡೆಕೋರರು ಬೈಕ್‍ನಲ್ಲಿ ಹಿಂಬಾಲಿಸಿಕೊಂಡು ಬಂದು ಮಾರ್ಗಮಧ್ಯೆ ಅತ್ತಿಬೆಲೆ ಸಮೀಪ ಕಾರಿಗೆ ಬೈಕನ್ನು ಡಿಕ್ಕಿ ಹೊಡೆಸಿ ಅಡ್ಡಗಟ್ಟಿ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹಣವನ್ನು ದರೋಡೆ ಮಾಡಿಕೊಂಡು ಪರಾರಿಯಾಗಿದ್ದಾರೆ.

ಶಿಂಧೆ ಬಣದ 22ಕ್ಕೂ ಹೆಚ್ಚು ಶಾಸಕರು ಬಿಜೆಪಿಗೆ..?

ಹಲ್ಲೆಗೊಳಗಾದ ಚಂದ್ರಶೇಖರ್ ರೆಡ್ಡಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಅತ್ತಿಬೆಲೆ ಠಾಣೆ ಪೊಲೀಸರಿಗೆ ಇದೀಗ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದರೋಡೆಕೋರರಿಗಾಗಿ ಶೋಧ ನಡೆಸುತ್ತಿದ್ದಾರೆ.

Articles You Might Like

Share This Article