ಪಟಾಕಿ ಸಿಡಿತ : 100ಕ್ಕೂ ಅಧಿಕ ಮಂದಿ ಕಣ್ಣಿಗೆ ಹಾನಿ

Social Share

ಬೆಂಗಳೂರು,ಅ.27- ನಗರದಲ್ಲಿ ಪಟಾಕಿ ಅವಾಂತರಗಳಿಗೆ ಕಡಿವಾಣ ಬೀಳುತ್ತಲೆ ಇಲ್ಲ. ದಿನೇ ದಿನೇ ಕಣ್ಣಿಗೆ ಹಾನಿ ಮಾಡಿಕೊಳ್ಳುವವರ ಸಂಖ್ಯೆ ದ್ವಿಗುಣಗೊಳ್ಳುತ್ತಲೆ ಇದೆ. ಇದುವರೆಗೂ 100ಕ್ಕೂ ಅಧಿಕ ಮಂದಿ ಪಟಾಕಿ ಸಿಡಿಸಲು ಹೋಗಿ ತಮ್ಮ ಕಣ್ಣುಗಳಿಗೆ ಹಾನಿ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ.

ಹಿರಿಯರು ಹಾಗೂ ಸಣ್ಣ ವಯಸ್ಸಿನ ಮಕ್ಕಳು ಪಟಾಕಿ ಹಚ್ಚಲು ಹೋಗಿ ಇಲ್ಲವೇ ಯಾರೋ ಸಿಡಿಸಿದ ಪಟಾಕಿ ಸಿಡಿತದಿಂದ ತಮ್ಮ ಕಣ್ಣುಗಳಿಗೆ ಹಾನಿ ಮಾಡಿಕೊಂಡು ನಗರದ ಹಲವಾರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಗರದ ಮಿಂಟೋ ಕಣ್ಣಿನ ಆಸ್ಪತ್ರೆ ಒಂದರಲ್ಲೆ ಇಲ್ಲಿಯವರೆಗೆ 27 ಮಂದಿ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ, ಈಗಾಗಲೇ ಕೆಲವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಕಳುಹಿಸಿದ್ದರೆ, ಇನ್ನು ಕೆಲವರು ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆನ್‍ಲೈನ್‍ನಲ್ಲಿ ಭೂ ಪರಿವರ್ತನೆ ಪೋಡಿ ಸೌಲಭ್ಯ

ಅದೇ ರೀತಿ ನಾರಾಯಣ ನೇತ್ರಾಲಯ ಸೇರಿದಂತೆ ಹಲವಾರು ಖಾಸಗಿ ಆಸ್ಪತ್ರೆಗಳಲ್ಲಿ ನೂರಕ್ಕೂ ಅಧಿಕ ಮಂದಿ ಕಣ್ಣುಗಳಿಗೆ ಹಾನಿ ಮಾಡಿಕೊಂಡು ಚಿಕಿತ್ಸೆ ಪಡೆಯುತ್ತಿರುವುದು ಕಂಡು ಬಂದಿದೆ.

Articles You Might Like

Share This Article