36 ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ರೌಡಿಗೆ ಗುಂಡೇಟು

Social Share

ಬೆಂಗಳೂರು, ಜ.11- ಸುಮಾರು 36 ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ರೌಡಿಯನ್ನು ಬಂಧಿಸಲು ಹೋದ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದಾಗ ಆತ್ಮರಕ್ಷಣೆಗಾಗಿ ಗಿರಿನಗರ ಠಾಣೆ ಸಬ್‍ಇನ್ಸ್‍ಪೆಕ್ಟರ್ ಹಾರಿಸಿದ ಗುಂಡು ರೌಡಿ ಕಾಲಿಗೆ ತಗುಲಿ ಸಿಕ್ಕಿಬಿದ್ದಿದ್ದಾನೆ.
ನರಸಿಂಹ ಅಲಿಯಾಸ್ ನರಸಿಂಹರೆಡ್ಡಿ (32) ಪೊಲೀಸರ ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೌಡಿ. ಗಿರಿನಗರ ಪೊಲೀಸ್ ಠಾಣೆಯ ರೌಡಿ ನರಸಿಂಹರೆಡ್ಡಿ ವಿರುದ್ಧ ಕೊಲೆ, ಕೊಲೆ ಯತ್ನ, ದರೋಡೆ, ಸರ ಅಪಹರಣ, ಮನೆಗಳ್ಳತನ ಅಪಹರಣ ಪ್ರಕರಣಗಳು ಸೇರಿದಂತೆ 36ಕ್ಕೂ ಹೆಚ್ಚು ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದು, ಈತನ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು.
ಹಲವಾರು ಬಾರಿ ನ್ಯಾಯಾಲಯದಿಂದ ರೌಡಿ ನರಸಿಂಹರೆಡ್ಡಿಗೆ ವಾರೆಂಟ್ ಜಾರಿಯಾಗಿದ್ದರೂ ನ್ಯಾಯಾಲಯಕ್ಕೂ ಹಾಜರಾಗದೆ ತಲೆಮರೆಸಿಕೊಂಡಿದ್ದರು. ಗಿರಿನಗರ ಠಾಣೆ ಪೆÇಲೀಸರು ಈತನಿಗಾಗಿ ಶೋಧ ಕೈಗೊಂಡಿದ್ದರು. ಹೊಸಕೆರೆಹಳ್ಳಿಯಲ್ಲಿ ಈತನ ಮನೆಯಿದೆ. ಕೆಲವೊಂದು ಬಾರಿ ಮಾಗಡಿ ತಾಲ್ಲೂಕಿನ ಗುಡೇಮಾರನಹಳ್ಳಿಯಲ್ಲಿಯೂ ಇರುತ್ತಾನೆ, ಅಲ್ಲದೆ ತಮಿಳುನಾಡಿನ ಸಂಬಂಧಿಕರ ಮನೆಗೂ ಹೋಗಿ ಬರುತ್ತಿದ್ದನು.
ಈತನ ವಿರುದ್ಧ ಎಲೆಕ್ಟ್ರಾನಿಕ್ ಸಿಟಿ, ರಾಜರಾಜೇಶ್ವರಿನಗರ, ಸಿಕೆ ಅಚ್ಚುಕಟ್ಟು, ಹುಳಿಮಾವು, ಬನಶಂಕರಿ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ನಗರ ಅಲ್ಲದೆ ತಮಿಳುನಾಡಿನಲ್ಲೂ ಈತನ ವಿರುದ್ಧ ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂದು ಬೆಳಗ್ಗಿನ ಜಾವ 6.30ರ ಸುಮಾರಿನಲ್ಲಿ ರೌಡಿ ನರಸಿಂಹರೆಡ್ಡಿ ಹೊಸಕೆರೆ ಹಳ್ಳಿಯ ಕೆರೆ ಏರಿ ಬಳಿ ಬರುತ್ತಾನೆಂಬ ಬಗ್ಗೆ ಗಿರಿನಗರ ಪೊಲೀಸರಿಗೆ ಖಚಿತ ಮಾಹಿತಿ ಬಂದಿದೆ. ತಕ್ಷಣ ಸಬ್‍ಇನ್‍ಸ್ಪೆಕ್ಟರ್ ಸುನೀಲ್ ನೇತೃತ್ವದ ತಂಡ ಬಂಸಲು ಹೋಗಿದೆ. ಪೊಲೀಸರನ್ನು ಕಂಡು ರೌಡಿ ನರಸಿಂಹರೆಡ್ಡಿ ತನ್ನ ಕಾರನ್ನು ತೆಗೆದುಕೊಂಡು ಪರಾರಿಯಾಗಲು ಯತ್ನಿಸಿದ್ದಾನೆ. ತಕ್ಷಣ ಬೆನ್ನಟ್ಟಿ ಕಾರನ್ನು ಅಡ್ಡಗಟ್ಟಿ ಶರಣಾಗುವಂತೆ ತಿಳಿಸಿದ್ದಾರೆ.
ಕಾರಿನಿಂದ ಹೊರಬಂದು ಏಕಾಏಕಿ ಲಾಂಗ್‍ನಿಂದ ಕಾನ್‍ಸ್ಟೇಬಲ್ ಮೋಹನ್ ಅವರ ಮೇಲೆ ಹಲ್ಲೆ ಮಾಡಿದ್ದಾನೆ. ಆ ಸಂದರ್ಭದಲ್ಲಿ ಸಬ್‍ಇನ್ಸ್‍ಪೆಕ್ಟರ್ ಸುನೀಲ್ ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಎಚ್ಚರಿಸಿದ್ದಾರೆ.
ಸಬ್‍ಇನ್ಸ್‍ಪೆಕ್ಟರ್ ಮಾತನ್ನು ಲೆಕ್ಕಿಸದೆ ಮತ್ತೆ ಹಲ್ಲೆಗೆ ಮುಂದಾದಾಗ ಆತ್ಮರಕ್ಷಣೆಗಾಗಿ ಹಾರಿಸಿದ ಗುಂಡು ರೌಡಿ ನರಸಿಂಹರೆಡ್ಡಿ ಬಲಗಾಲಿಗೆ ತಗುಲಿ ಕುಸಿದುಬಿದ್ದಿದ್ದಾನೆ. ತಕ್ಷಣ ಪೊಲೀಸರು ರೌಡಿ ನರಸಿಂಹರೆಡ್ಡಿಯನ್ನು ಸುತ್ತುವರಿದು ವಶಕ್ಕೆ ಪಡೆದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಾರ್ಯಾಚರಣೆ ವೇಳೆ ಗಾಯಗೊಂಡಿರುವ ಕಾನ್‍ಸ್ಟೇಬಲ್ ಮೋಹನ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಿರಿನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

Articles You Might Like

Share This Article