ಮತಾಂತರ ನಿಷೇಧ ಕಾಯ್ದೆ ಜಾರಿ ನಂತರ ಮೊದಲ ಕೇಸ್ ದಾಖಲು

Social Share

ಬೆಂಗಳೂರು, ಅ.14- ಮತಾಂತರ ನಿಷೇಧ ಕಾಯ್ದೆ ಜಾರಿ ನಂತರ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಮೊದಲ ಪ್ರಕರಣ ದಾಖಲಾಗಿದೆ.
ಕರ್ನಾಟಕ ಮತಾಂತರ ನಿಷೇಧ ಕಾಯ್ದೆಯಡಿ ಯಶವಂತಪುರದ ಬಿಕೆ ನಗರ ನಿವಾಸಿ ಸೈಯದ್ ಮೊಹಿನ್ (23) ಎಂಬ ಯುವಕನನ್ನು ಬಂಧಿಸಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ವಿನಾಯಕ ಪಾಟೀಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಉತ್ತರ ಪ್ರದೇಶ ಮೂಲದ 19 ವರ್ಷದ ಯುವತಿಯನ್ನು ಕರೆದೊಯ್ದು ಮೊಹಿನ್ ಆಂಧ್ರಪ್ರದೇಶದಲ್ಲಿ ಮತಾಂತರ ಮಾಡಿದ್ದ ಎಂಬ ದೂರಿನ ಹಿನ್ನೆಲೆಯಲ್ಲಿ ಇದೀಗ ಆತನನ್ನು ಬಂಸಿ ವಿಚಾರಣೆಗೊಳಪಡಿಸಲಾಗಿದೆ.
ಈ ಯುವತಿ ಆತನಿಗೆ ಹೇಗೆ ಪರಿಚಯವಾದರು ಹಾಗೂ ಈ ಪ್ರಕರಣದಲ್ಲಿ ಇನ್ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆಯೂ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

Articles You Might Like

Share This Article