ಜರ್ಮನಿ, ಸೆ.10- ಇಲ್ಲಿ ನಡೆದ ಕುಬ್ಜರ ಕ್ರೀಡಾಕೂಟದಲ್ಲಿ ಭಾರತದ ಮಾರ್ಕ್ ಧರ್ಮಯ್ ಅವರು ಬೊಕ್ಷಾ ಕ್ರೀಡಾಕೂಟ ದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಕ್ರೀಡಾಪಟು ಎಂಬ ದಾಖಲೆ ಬರೆದು ಇತಿಹಾಸ ಸೃಷ್ಟಿಸಿದ್ದಾರೆ. ವಿಶ್ವ ಡ್ವಾರ್ಫ್ ಗೇಮ್ಸ್ ನಲ್ಲಿ 22 ದೇಶಗಳಿಂದ 505 ಅಥ್ಲಿಟ್‍ಗಳು ಪಾಲ್ಗೊಂಡಿದ್ದು, ತಾನು ಭಾಗವಹಿಸಿದ್ದ ಎಲ್ಲ ಕ್ರೀಡೆಗಳಲ್ಲೂ ಪ್ರಬಲ ಪೈಪೋಟಿ ಎದುರಿಸಿದ ಮುಂಬೈನ ಬಂದ್ರಾ ಮೂಲದ ಮಾರ್ಕ್ ಧರ್ಮಯ್ ಅವರು ಒಟ್ಟು 4 ಪದಗಳನ್ನು ಕೊರಳಿಸಿಗೇರಿಸಿಕೊಂಡು ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಖಾಸಗಿ ಸಮರ : ನಾಳೆ ಬೆಂಗಳೂರು ಬಂದ್
ಡಿಸ್ಕಸ್ ಹಾಗೂ ಬ್ಯಾಡ್ಮಿಂಟನ್ (ಡಬಲ್ಸ್)ನಲ್ಲಿ ಬೆಳ್ಳಿ ಪದಕ ಗೆದ್ದು ನಗು ಚೆಲ್ಲಿದ್ದ ಮಾರ್ಕ್ ಧರ್ಮಯ್, ಜಾವೆಲಿಯನ್ ಎಸೆತ ಹಾಗೂ ಬ್ಯಾಡ್ಮಿಂಟನ್ (ಸಿಂಗಲ್ಸ್)ನಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.
ಮಾರ್ಕ್ ಧರ್ಮಯ್ ಅವರ ಯಶಸ್ಸನ್ನು ಪರಿಗಣಿಸಿರುವ ಬಾಂದ್ರಾ ಜಿಮ್ಖಾನಾದಲ್ಲಿ ವಿಶೇಷ ಗೌರವ ಸಲ್ಲಿಸುವ ಜೊತೆಗೆ ಗೌರವ ಅಜೀವ ಸದಸ್ಯತ್ವವನ್ನು ನೀಡಿ ಗೌರವಿಸಲಾಗಿದೆ.
ಬಾಲ್ಯದಿಂದ ಕ್ರೀಡಾಸಕ್ತಿ ಬೆಳೆಸಿಕೊಂಡಿದ್ದ ಮಾರ್ಕ್ ಧರ್ಮಯ್ 2004ರಲ್ಲಿ ನಡೆದ ಪ್ಯಾರಾಲಿಂಪಿಕ್‍ನಲ್ಲಿ ಮೊದಲ ಬಾರಿ ಪಾಲ್ಗೊಂಡು 400 ಮೀಟರ್ ಓಟದಲ್ಲಿ ಕಂಚಿನ ಪದಕ ಗೆದ್ದ ನಂತರ 2010ರ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ 200 ಮೀಟರ್ ಓಟದಲ್ಲಿ ಚಿನ್ನ ಹಾಗೂ 2012ರ ಲಂಡನ್ ಒಲಿಂಪಿಕ್ಸ್‍ನಲ್ಲಿ 4 ಗಿ400 ರಿಲೇಯಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.
#First, #Indian, #paraathlete, #win, #gold, #WorldDwarfGames,