ಇಂಗ್ಲೆಂಡ್‍ನಲ್ಲಿ ರಾಜ ಕಿಂಗ್ ಚಾರ್ಲ್ಸ್ ಭಾವಚಿತ್ರವಿರುವ ಹೊಸ ನೋಟುಗಳ ಅನಾವರಣ

Social Share

ಲಂಡನ್,ಡಿ.20- ಇಂಗ್ಲೆಂಡ್‍ನಲ್ಲಿ ಹೊಸ ವಿನ್ಯಾಸದ ನೋಟುಗಳನ್ನು ಅನಾವರಣಗೊಳಿಸಲಾಗಿದೆ. ಮೂರನೇ ಕಿಂಗ್ ಚಾರ್ಲ್ಸ್ ಚಿತ್ರವನ್ನು ಹೊಂದಿರುವ ಹೊಸ ನೋಟುಗಳ ವಿನ್ಯಾಸಗಳನ್ನು ಬ್ಯಾಂಕ್ ಆಫ್ ಇಂಗ್ಲೆಂಡ್ ಅನಾವರಣಗೊಳಿಸಿದ್ದು, ಹೊಸ ನೋಟುಗಳ ಚಲಾವಣೆ 2024ರ ಜೂನ್‍ನಂತರ ಆರಂಭವಾಗಲಿದೆ ಎಂದು ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರಾಣಿ ಎಲಿಜಬೆತ್ ಈ ವರ್ಷದ ಸೆಪ್ಟೆಂಬರ್‍ನಲ್ಲಿ ನಿಧನರಾದ ನಂತರ ಅವರ ಉತ್ತರಾಧಿಕಾರಿಯಾಗಿ ಚಾಲ್ರ್ಸ್ ಆಯ್ಕೆಯಾಗಿದ್ದಾರೆ. ಐದು, ಹತ್ತು, 20 ಮತ್ತು 50 ಡಾಲರ್‍ನ ಪಾಲಿಮರ್ ನೋಟುಗಳ ಮೇಲೆ ರಾಜನ ಭಾವಚಿತ್ರ ಪ್ರಕಟಿಸಲಾಗಿದೆ. ಉಳಿದಂತೆ ನೋಟಿನ ಇತರ ವಿನ್ಯಾಸಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಬ್ಯಾಂಕ್ ಹೇಳಿದೆ.

ಇಂಗ್ಲೆಂಡ್ ರಾಜನ ಚಿತ್ರವಿರುವ ನಾಣ್ಯಗಳು ಈ ತಿಂಗಳಿನಿಂದ ಚಲಾವಣೆಗೆ ತರಲಾಗಿದೆ ಎಂದು ರಾಯಲ್ ಮಿಂಟ್ ಘೋಷಣೆ ಮಾಡಿರುವ ಬೆನ್ನಲ್ಲೇ ಹೊಸ ನೋಟುಗಳು ಮಾರುಕಟ್ಟೆಗೆ ಬರಲು ರೆಡಿಯಾಗಿವೆ.

ಎನ್‍ಕೌಂಟರ್‌ನಲ್ಲಿ ಮೂವರು ಎಲ್‍ಇಟಿ ಉಗ್ರರ ಹತ್ಯೆ

ನೋಟಿನ ಮೇಲೆ ತಮ್ಮ ಭಾವಚಿತ್ರವಿರುವ ಭಂಗಿಗೆ ರಾಜ ಅನುಮೋದನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಹೊಸ ವರ್ಷದ ಆರಂಭದಲ್ಲಿ ಹೊಸ ನೋಟುಗಳ ಮುದ್ರಣ ಕಾರ್ಯ ಆರಂಭಗೊಳ್ಳಲಿದೆ. ರಾಣಿಯ ಭಾವಚಿತ್ರವಿರುವ ನೋಟುಗಳು ಕಾನೂನುಬದ್ಧವಾಗಿ ಉಳಿಯುತ್ತವೆ ಮತ್ತು ಬಳಕೆ ಮಾಡಲು ಅನುಮತಿ ನೀಡಲಾಗಿದೆ.

ರಾಜ ಚಾಲ್ಸರ್ï ಅವರ ಭಾವಚಿತ್ರವನ್ನು ಹೊಂದಿರುವ ನಮ್ಮ ಹೊಸ ನೋಟುಗಳ ವಿನ್ಯಾಸವನ್ನು ಬ್ಯಾಂಕ್ ಬಿಡುಗಡೆ ಮಾಡುತ್ತಿರುವುದಕ್ಕೆ ನನಗೆ ತುಂಬಾ ಹೆಮ್ಮೆ ಇದೆ ಎಂದು ಬ್ಯಾಂಕಿನ ಗವರ್ನರ್ ಆಂಡ್ರ್ಯೂ ಬೈಲಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮನೆ ಕೆಲಸಕ್ಕೆಂದು ಕರೆಸಿಕೊಂಡು ಯುವತಿ ಮೇಲೆ ಅತ್ಯಾಚಾರ

ಇದುವರೆಗೂ ಇಂಗ್ಲೆಂಡ್‍ನಲ್ಲಿ ರಾಣಿಯರದ್ದೆ ದರ್ಬಾರ್ ಆಗಿತ್ತು. ಇದುವರೆಗೂ ಕೇವಲ ಇಬ್ಬರು ರಾಜರು ಮಾತ್ರ ಇಂಗ್ಲೆಂಡ್‍ನಲ್ಲಿ ಆಳ್ವಿಕೆ ನಡೆಸಿದ್ದಾರೆ. ಎರಡನೆ ರಾಜನಾಗಿರುವ ಚಾಲ್ರ್ಸ್ ಅವರ ಭಾವಚಿತ್ರವಿರುವ ನೋಟು ಇದೀಗ ಮುದ್ರಣಕ್ಕೆ ಅಣಿಯಾಗುತ್ತಿದೆ.

#Firstpictures, #KingCharles, #banknotes, #revealed,

Articles You Might Like

Share This Article