ಹಾಸ್ಟೆಲ್ ಛಾವಣಿಯಿಂದ ಬಿದ್ದು ಎಂಬಿಬಿಎಸ್ ವಿದ್ಯಾರ್ಥಿ ಸಾವು

Spread the love

ಭುವನೇಶ್ವರ್, ಅ 23- ಒಡಿಶಾದ ಬೋಲಂಗಿರ್ ಜಿಲ್ಲಾಯ ಭೀಮಾ ಭೋಯ್ ವೈದ್ಯಕೀಯ ಕಾಲೇಜಿನ ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಹಾಸ್ಟೆಲ್ ಮೇಲ್ಛಾವಣಿಯಿಂದ ಬಿದ್ದು ಸಾವನ್ನಪ್ಪಿದ್ದಾನೆ.  ಮೃತ ವಿದ್ಯಾರ್ಥಿಯನ್ನು ಹರಿಯಾಣ ಮೂಲದ ನಿಶಾಂತ್ ಕುಮಾರ್ ಎಂದು ಗುರುತಿಸಲಾಗಿದೆ. ಅತ ನಾಲ್ಕು ಅಂತಸ್ತಿನ ನ್ಯೂ ಬಾಯ್ಸ ಹಾಸ್ಟೆಲ್‍ನಲ್ಲಿ ವಾಸಿಸುತ್ತಿದ್ದ.

ಶುಕ್ರವಾರ ಮಧ್ಯಾಹ್ನ 2 ರಿಂದ 2.30 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅತ ಆತ್ಮಹತ್ಯೆ ಮಾಡಿಕೊಂಡಿಲ್ಲ ಯಾರೋಕೆಳಗೆ ತಳ್ಳಿದ್ದಾರೆ ಎಂದು ಮೃತ ವಿದ್ಯಾರ್ಥಿಯ ಸಂಬಂಧಿ ಆರೋಪಿಸಿದ್ದಾರೆ.

ವೈದ್ಯಕೀಯ ಕಾಲೇಜಿನ ಡೀನ್ ಸಬಿತಾ ಮಹಾಪಾತ್ರ ಮಾತನಾಡಿ, ನಾವು ವೈದ್ಯಕೀಯ ಕಾಲೇಜಿನಲ್ಲಿ 10 ಸದಸ್ಯರ ರ್ಯಾಗಿಂಗ್ ವಿರೋಧಿ ಸಮಿತಿಯನ್ನು ರಚಿಸಿದ್ದೇವೆ. ಪ್ರತಿದಿನ ಅಧ್ಯಾಪಕರ ತಂಡವು ಪ್ರಥಮ ವರ್ಷದ ಹಾಸ್ಟೆಲ್ ಕೊಠಡಿಗಳಲ್ಲಿನ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಬಾಲಕ ಮತ್ತು ಬಾಲಕಿಯರ ಹಾಸ್ಟೆಲ್‍ಗೆ ಭೇಟಿ ನೀಡುತ್ತಿದೆ. ಹಾಸ್ಟೆಲ್‍ನಲ್ಲಿ ರ್ಯಾಗಿಂಗ್ ಬಗ್ಗೆ ನಾನು ಕೇಳಿಲ್ಲ.

ಘಟನೆಯ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದು, ಮೃತ ವಿದ್ಯಾರ್ಥಿಯ ಕೊಠಡಿಯನ್ನು ಶೋಧಿಸಿದ್ದು, ಆತನ ಸಾವಿನ ಸುಳಿವು ಸಿಗುತ್ತಿಲ್ಲ. ಕಳೆದ ವರ್ಷ ಇದೇ ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಳು.

Facebook Comments