ಬೆಂಗಳೂರಿನ ಮೀನು ಪ್ರಿಯರಿಗೆ ಸರ್ಕಾರದಿಂದ ಸಿಹಿಸುದ್ದಿ

Social Share

ಬೆಂಗಳೂರು,ಅ.16- ರಾಜಧಾನಿ ಬೆಂಗಳೂರಿನಲ್ಲಿ ಸಾಕಷ್ಟು ಮೀನಿನ ಬೇಡಿಕೆ ಇರುವುದರಿಂದ ಬಿಬಿಎಂಪಿ ವ್ಯಾಪ್ತಿಯ ಎಲ್ಲ ವಾರ್ಡ್‍ಗಳಲ್ಲಿ ಮೀನು ಮಾರಾಟ ಮಾಡುವ ಮಳಿಗೆಗಳನ್ನು ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಿಸಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ಬಂದರು ಮತ್ತು ಮೀನುಗಾರಿಕೆ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಒಳನಾಡು ಮೀನುಗಾರರ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಬಿಎಂಪಿಯ ಎಲ್ಲಾ ವಾರ್ಡ್‍ಗಳಲ್ಲಿ ಮೀನು ಮಾರಾಟ ಮಾಡುವ ಮಳಿಗೆಗಳನ್ನು ಪ್ರಾರಂಭ ಮಾಡುವುದರಿಂದ ಈ ಉದ್ಯೋಗಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಗಲಿದೆ ಎಂದು ಅಭಿಪ್ರಾಯಪಟ್ಟರು.

ಖಾಸಗಿಯವರು ಮಳಿಗೆ ಪ್ರಾರಂಭಿಸಲು ಬಿಬಿಎಂಪಿಯಿಂದ ಜಾಗದ ವ್ಯವಸ್ಥೆಯನ್ನು ಕಲ್ಪಿಸಲಾಗುವುದು.
ಉದ್ಯಮವನ್ನು ಪ್ರೋತ್ಸಾಹಿಸುವುದರ ಜೊತೆಗೆ ನಿರುದ್ಯೋಗಿಗಳನ್ನು ಉದ್ಯೋಗದತ್ತ ಸೆಳೆಯಲು ಇದು ಅನುಕೂಲವಾಗಲಿದೆ ಎಂದು ತಿಳಿಸಿದರು.

ಖಾಸಗಿಯವರು ಮೀನುಗಾರಿಕೆ ಮಾಡಲು ಮುಂದಾದರೆ ನಮ್ಮ ಸರ್ಕಾರ ಅಗತ್ಯವಾದ ನೆರವು ಹಾಗೂ ಸಹಕಾರವನ್ನು ಕೊಡಲಿದೆ. ಮೀನುಗಾರಿಕೆಗೆ ಪ್ರೋತ್ಸಾಹ ನೀಡಬೇಕೆಂಬುದು ನಮ್ಮ ಸರ್ಕಾರದ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ ಎಂದರು.

ಮೀನುಗಾರರಿಗೆ ನಮ್ಮ ಸರ್ಕಾರ ನೀಡಿದಷ್ಟು ಬೆಂಬಲ ಹಾಗೂ ಜಾರಿಗೆ ತಂದಿರುವ ಕಾರ್ಯಕ್ರಮಗಳನ್ನು ಯಾವುದೇ ಸರ್ಕಾರವು ಅನುಷ್ಠಾನ ಮಾಡಲು ಸಾಧ್ಯವಿಲ್ಲ. ಒಂದು ಲಕ್ಷ ಮೀನುಗಾರ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯನ್ನು ಅನುಷ್ಠಾನ ಮಾಡಿದ್ದೇವೆ ಎಂದು ವಿವರಿಸಿದರು.

ವಿದ್ಯಾನಿಧಿ ಯೋಜನೆಗೆ 40 ಕೋಟಿ ರೂ. ವೆಚ್ಚವಾಗಲಿದ್ದು, ವಿದ್ಯಾರ್ಥಿಗಳ ಪಟ್ಟಿಯನ್ನು ಸಿದ್ದಪಡಿಸಿ ನೇರವಾಗಿ ಡಿಬಿಟಿ ಮೂಲಕ ಅವರ ಖಾತೆಗಳಿಗೆ ವರ್ಗಾವಣೆ ಮಾಡಲಾಗುವುದು. ಇದು ಮೀನುಗಾರರನ್ನು ಸಬಲೀಕರಣ ಮಾಡಲು ನಮ್ಮ ಸರ್ಕಾರ ತೆಗೆದುಕೊಂಡಿರುವ ದಿಟ್ಟ ಕ್ರಮ ಎಂದು ಪ್ರಶಂಸಿದರು.

ಮೀನುಗಾರರ ಕುಟುಂಬಕ್ಕೆ 5000 ಮನೆಗಳನ್ನು ನೀಡಲಾಗಿದೆ. ಜನವರಿ ಅಂತ್ಯದೊಳಗೆ ಮನೆ ನಿರ್ಮಾಣ ಮಾಡಬೇಕು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೂ ಸೂಚಿಸಿದರು. ಕರ್ನಾಟಕ ಮೀನುಗಾರಿಕೆಯಲ್ಲಿ ಇನ್ನು ಸಾಕಷ್ಟು ಸ್ಕೇಲ್ ಅಪ್ ಆಗಬೇಕಿದೆ. ಪಕ್ಕದ ಮ ಆಂಧ್ರ ಪ್ರದೇಶ ಸಾಕಷ್ಟು ಮುಂದುವರೆದಿದೆ. ಅಲ್ಲಿಗೆ ನಿಯೋಗ ಹೋಗಿ ಅಧ್ಯಯನ ಮಾಡಿ, ರಾಜ್ಯದಲ್ಲಿ ಮಿನುಗಾರಿಕೆ ಪ್ರಮಾಣ ಎರಡು ಪಟ್ಟು ಹೆಚ್ಚಾಗಬೇಕು.

ಬೆಂಗಳೂರಿನಲ್ಲಿ ಮೀನಿಗೆ ಸಾಕಷ್ಟು ಬೇಡಿಕೆ ಇದೆ. ಬಿಬಿಎಂಪಿ ವ್ಯಾಪ್ತಿಯ ಎಲ್ಲ ವಾರ್ಡ್ ಗಳಲ್ಲಿ ಮೀನು ಮಾರಾಟ ಔಟ್ ಲೆಟ್ ತೆರೆಯಲು ಸರ್ಕಾರ ನಿರ್ಧರಿಸಿದೆ. ಖಾಸಗಿಯವರು ಅಂಗಡಿ ತೆರೆಯಲು ಬಿಬಿಎಂಪಿಯಿಂದ ಜಾಗದ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಪ್ರಧಾನಮಂತ್ರಿಗಳ ಮೀನುಗಾರರ ಯೋಜನೆಯಿಂದ ರಾಜ್ಯದಲ್ಲಿ 100 ಡೀಪ್ ಸಿ ಮೀನಿಗಾರಿಕೆಯ ಹಡಗು ನೀಡಲು ತೀರ್ಮಾನ ಮಾಡಿದ್ದೇವೆ. ಅದರಲ್ಲಿ 40% ಸಬ್ಸಿಡಿ ಇದೆ ಎಂದು ತಿಳಿಸಿದರು. ಮೀನುಗಾರರಿಗೆ ಡಿಸೆಲ್ ಜೊತೆಗೆ ಸಿಮೆ ಎಣ್ಣೆಯನ್ನು ಅವರು ಕೇಳಿದಷ್ಟು ಕೊಡಲು ತೀರ್ಮಾನಿಸಿದ್ದೇನೆ. ಪ್ರವಾಹದಲ್ಲಿ ಹಡಗು ಹಾನಿಯಾಗಿದ್ದು, ಅವುಗಳ ರಿಪೇರಿಗೆ ಅನುದಾನ ನಿಡಲಾಗುವುದು ಎಂದು ಹೇಳಿದರು.

ಪ್ರತಿ ಗ್ರಾಮ ಪಂಚಾಯತಿಯಲ್ಲಿ ಒಂದು ಕೆರೆಯನ್ನು ಮಿನುಗಾರಿಕೆಗೆ ನೀಡಲಾಗುವುದು. ಒಳನಾಡು ಮೀನುಗಾರಿಕೆಗೆ ಹಚ್ಚಿನ ಅನುದಾನ ನೀಡಲಾಗುವುದು ಎಂದರ. ನೆಟ್ ಮೀನುಗಾರಿಕೆಗೆ 300 ಜನರಿಗೆ ನೀಡಲಾಗುತ್ತಿದೆ ಅದನ್ನು 1000ಕ್ಕೆ ಹೆಚ್ಚಿಸಬೇಕು. ಸ್ತ್ರೀ ಸಾಮಥ್ರ್ಯ ಹಾಗೂ ವಿವೇಕಾನಂದ ಯುವ ಶಕ್ತಿ ಸಂಘಗಳಿಗೆ ಮೀನುಗಾರಿಕೆಗೆ ಅವಕಾಶ ನೀಡಬೇಕು.

ಈ ಸಂದರ್ಭದಲ್ಲಿ ಮೀನುಗಾರಿಕೆ ಹಾಗೂ ಬಂದರು ಸಚಿವರಾದ ಎಸ್. ಅಂಗಾರ, ಸಚಿವರಾದ ಡಾ. ಸಿ. ಎನ್. ಅಶ್ವತ್ಥ್ ನಾರಾಯಣ್, ಬೈರತಿ ಬಸವರಾಜ, ಕೋಟ ಶ್ರೀನಿವಾಸ ಪೂಜಾರಿ, ಬಿ.ಸಿ. ನಾಗೇಶ, ಶಾಸಕ ಸಂಜೀವ ಮಟಂದೂರು, ಫ್ರೀಡಂ ಆ್ಯಪ್ ಸಂಸ್ಥಾಪಕ ಸಿ.ಎಸ್. ಸುೀರ್ , ಮೀನುಗಾರಿಕೆ ಇಲಾಖೆ ಕಾರ್ಯದರ್ಶಿ ಸಲ್ಮಾ.ಕೆ. ಫಹೀಮ್ ಸೇರಿದಂತೆ ಮತ್ತಿತರರು ಹಾಜರಿದ್ದರು.

Articles You Might Like

Share This Article