ಮೀನುಗಾರರಿಗೆ ಸೀಮೆಎಣ್ಣೆ ಬಿಡುಗಡೆಗೆ ಆಗ್ರಹಸಿ ಸರ್ಕಾರದ ಮೇಲೆ ಮುಗಿಬಿದ್ದ ಪ್ರತಿಪಕ್ಷ

Social Share

ಬೆಳಗಾವಿ,ಡಿ.26- ನಾಡದೋಣಿ ಮೀನುಗಾರಿಕೆ ಪರಾವನಗಿ ಇರುವವರಿಗೆ ತಕ್ಷಣವೇ ರಿಯಾಯ್ತಿ ದರದಲ್ಲಿ ಸೀಮೆಎಣ್ಣೆ ಬಿಡುಗಡೆ ಮಾಡಬೇಕೆಂದು ವಿಧಾನಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರು ಸರ್ಕಾರಕ್ಕೆ ಛಾಟಿ ಬೀಸಿದರು.

ಪ್ರಶ್ನೋತ್ತರ ಅವಧಿಯಲ್ಲಿ ಶಾಸಕ ಶಿವಕುಮಾರ್ ಶೆಟ್ಟಿ ಪರವಾಗಿ ಸಂಜೀವ್ ಮಠಂದೂರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಂದರು ಮತ್ತು ಮೀನುಗಾರಿಕೆ ಸಚಿವ ಅಂಗಾರ ಅವರು, ಕೇಂದ್ರ ಸರ್ಕಾರ ನಮಗೆ ಸಬ್ಸಿಡಿ ರೂಪದಲ್ಲಿ ಸೀಮೆಎಣ್ಣೆ ನೀಡುವಲ್ಲಿ ವಿಳಂಬವಾಗಿದೆ. ಆದಷ್ಟು ಶೀಘ್ರ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಳೆದ 10 ತಿಂಗಳಿನಿಂದ ನಾಡದೋಣಿ ಮೀನುಗಾರಿಕೆ ಪರವಾನಗಿದಾರರಿಗೆ ಸರ್ಕಾರ ಸೀಮೆಎಣ್ಣೆ ನೀಡಿಲ್ಲ. ಸರ್ಕಾರ ನಿದ್ದೆ ಮಾಡುತ್ತಿದೆಯೇ ಎಂದು ಪ್ರಶ್ನಿಸಿದರು.

ಕರಾವಳಿ ತೀರಾಪ್ರದೇಶದಲ್ಲಿ ಜನರು ಮೀನುಗಾರಿಕೆ ನಂಬಿ ಜೀವನ ನಡೆಸುತ್ತಿದ್ದಾರೆ. ಅವರಿಗೆ 10 ತಿಂಗಳಿನಿಂದ ಸೀಮೆಎಣ್ಣೆ ನೀಡಿಲ್ಲ ಎಂದರೆ ಹೇಗೆ? ಕೇಂದ್ರ ಸಚಿವರ ಜೊತೆಗೆ ನೀವು ಮಾತುಕತೆಯಾದರೂ ನಡೆಸಿ ಇನ್ನೇನಾದರೂ ಮಾಡಿ ಈ ಮೊದಲು ಸೀಮೆಎಣ್ಣೆ ಖರೀದಿಗೆ ಮಾಡಿಕೊಡಿ ಎಂದು ಆಗ್ರಹಿಸಿದರು.

ಶ್ರದ್ಧಾ ಹತ್ಯೆ ಬಳಿಕ ಹೆದರಿ ತುನಿಶಾಳಿಂದ ದೂರವಾಗಿದ್ದೆ : ಆರೋಪಿ ಹೇಳಿಕೆ

4,514 ನಾಡದೋಣಿಗಳಿಗೆ ಕೇವಲ 2,472 ಲೀಟರ್ ಬಿಡುಗಡೆ ಮಾಡಲಾಗಿದೆ ಪ್ರತಿ ತಿಂಗಳು 300 ಲೀಟರ್ ಸೀಮೆಣ್ಣೆ ಕೊಡಬೇಕು. ಸರ್ಕಾರ ಸಂಕಷ್ಟದಲ್ಲಿರುವ ಮೀನುಗಾರರ ರಕ್ಷಣೆ ಮಾಡಬೇಕೆಂದು ಒತ್ತಾಯಿಸಿದರು. ಇದಕ್ಕೆ ದನಿಗೂಡಿಸಿದ ಯು.ಟಿ.ಖಾದರ್, ಆರ್.ವಿ.ದೇಶಪಾಂಡೆ, ಕೇಂದ್ರ ಸರ್ಕಾರ ಸೀಮೆಣ್ಣೆಗೆ ಸಬ್ಸಿಡಿ ಕೊಡುತ್ತಿಲ್ಲ.

ಕೊಡುವುದೂ ಇಲ್ಲ. ಸಚಿವರು ಸದನಕ್ಕೆ ಸುಳ್ಳು ಮಾಹಿತಿ ನೀಡಬಾರದು. ಇದಕ್ಕೆ ಹೆಚ್ಚೆಂದರೆ 50 ಕೋಟಿ ಅನುದಾನ ಬೇಕು. ಸಿಎಂ ಜೊತೆ ಚರ್ಚಿಸಿ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಳ್ಳಲಿ ಎಂದು ಯು.ಟಿ.ಖಾದರ್ ಆಗ್ರಹಿಸಿದರು.

ಆಗ ಅಂಗಾರ ಅವರು, ಈಗಾಗಲೇ ಇಲಾಖೆ ವತಿಯಿಂದಲೇ ಸೀಮೆಣ್ಣೆಯನ್ನು ವಿತರಣೆ ಮಾಡುವ ಕುರಿತು ಚಿಂತನೆ ನಡೆಸಲಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಜೊತೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಜೊತೆಗೆ ರಾಜ್ಯಕ್ಕೆ ಬೇಕಾಗಿರುವ ಸೀಮೆಣ್ಣೆಯನ್ನು ವಿತರಿಸಲು ಕೇಂದ್ರಕ್ಕೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದರು.

ಅಧಿವೇಶನ ಆರಂಭವಾಗಿ ವಾರಕಳೆದರೂ ನಿಲ್ಲದ ಸಾಲು ಸಾಲು ಪ್ರತಿಭಟನೆಗಳು

ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಡ ಮೀನುಗಾರರಿಗೆ ಮನೆ ಕಟ್ಟಲು 1.20 ಲಕ್ಷ ಹಣವನ್ನು ನೀಡುತ್ತಿದ್ದೇವೆ. ಇದನ್ನು ಹೆಚ್ಚಳ ಮಾಡಬೇಕೆಂದು ಸದಸ್ಯರು ಮನವಿ ಮಾಡಿದ್ದಾರೆ. ಸಿಎಂ ಜೊತೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಭರವಸೆ ಕೊಟ್ಟರು.

fishermen, kerosene, release, demanding,

Articles You Might Like

Share This Article