ಪಾಲ್ಘರ್, ಜ. 4- ಅರಬ್ಬಿ ಸಮುದ್ರದಲ್ಲಿ ಬಂಡೆಗೆ ಡಿಕ್ಕಿ ಹೊಡೆದು ಮೀನುಗಾರಿಕಾ ದೋಣಿ ಮಗುಚಿ ಬಿದ್ದಿದ್ದು,ಅದೃಷ್ಠವಷಾತ್ ಅದರಲ್ಲಿದ್ದ ಎಲ್ಲಾ 15 ಜನರನ್ನು ರಕ್ಷಿಸಲಾಗಿದೆ.
ಪಾಲ್ಘರ್ ಜಿಲ್ಲೆಯ ಕರಾವಳಿಯಲ್ಲಿ ಬೋಯಿಸರ್ ಮುರ್ಬೆ ಗ್ರಾಮದ ಬಳಿ ಕಳೆದ ರಾತ್ರಿ ಈ ಘಟನೆ ನಡೆದಿದೆ ಎಂದು ಜಿಲ್ಲಾ ವಿಪತ್ತು ನಿಯಂತ್ರಣ ಕೊಠಡಿ ಮುಖ್ಯಸ್ಥ ವಿವೇಕಾನಂದ ಕದಂ ತಿಳಿಸಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ಮುಗಿಯದ ಕಾಮಗಾರಿ, ಪಾದಚಾರಿಗಳಿಗೆ ಕಿರಿಕಿರಿ
ಕರಾವಳಿಯಿಂದ 55 ನಾಟಿಕಲ್ ಮೈಲಿ ದೂರದಲ್ಲಿ ಮೀನುಗಾರಿಕಾ ದೋಣಿ ಜಯ್ ಸಾಗರಿಕಾ ಬಂಡೆಗೆ ಅಪ್ಪಳಿಸಿ ಮುಳುಗುವಾಗ ವೈರ್ಲೆಸ್ ಮೂಲಕ ಸಂದೇಶ ಕಳುಹಿಸಲಾಯಿತು, ನಂತರ ಹತ್ತಿರದಲ್ಲೇ ಸಂಚರಿಸುತ್ತಿದ್ದ ಮೀನುಗಾರರು ದೋಣಿಗಳು ಅಲ್ಲಿಗೆ ಧಾವಿಸಿ 15 ಜನರನ್ನು ರಕ್ಷಿಸಿ ದಡಕ್ಕೆ ಕರೆತಂದರು ಎಂದು ಅಧಿಕಾರಿ ತಿಳಿಸಿದ್ದಾರೆ.
ಡ್ರಗ್ ಪೆಡ್ಲಿಂಗ್ : ರೌಡಿ ಸೇರಿ ಮೂವರು ವಶಕ್ಕೆ
ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ ,ದೋಣಿ ಪ್ರವೀಣ್ ತಾರೆ ಎಂಬವರಿಗೆ ಸೇರಿದ್ದು, ದುರಂತದ ಬಗ್ಗೆ ಜಿಲ್ಲಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
#FishingBoat, #Capsizes, #Palghar, #Coast, #Maharashtra,