ಬೆಂಗಳೂರು,ಡಿ.18- ಸುಮಾರು 200 ವರ್ಷಗಳ ಪ್ರಾಚೀನ ಬುದ್ದನ ವಿಗ್ರಹವನ್ನು ವಿದೇಶಕ್ಕೆ ರಫ್ತು ಮಾಡಲು ಯತ್ನಿಸಿದ್ದ ತೆಲಂಗಾಣ ಮೂಲದ ಆರೋಪಿ ಸೇರಿದಂತೆ ಐವರನ್ನು ಸಂಪಂಗಿರಾಮನಗರ ಠಾಣೆ ಪೊಲೀಸರು ಬಂಸಿದ್ದಾರೆ.
ಹೈದರಾಬಾದ್ನ ಕೋಂಪಲ್ಲಿ ನಿವಾಸಿ ಪಂಚಮರ್ತಿ ರಘುರಾಮ ಚೌಧರಿ ಅಲಿಯಾಸ್ ಪಿ.ರಘು(45), ಬೆಂಗಳೂರಿನ ಹೊರಮಾವು ಫ್ಲೋರೊ ಅಪಾರ್ಟ್ಮೆಂಟ್ ನಿವಾಸಿ ಉದಯ್ಕುಮಾರ್(37), ವಿವೇಕನಗರದ ಫ್ರೆಡ್ಡಿ ಡಿಸೋಜ(44), ಹೆಣ್ಣೂರು ಬಂಡೆ, ಮಂತ್ರಿ ಆಸ್ಟ್ರಾ ಅಪಾರ್ಟ್ಮೆಂಟ್ನ ಶರಣ್ ನಾಯರ್ ಹಾಗೂ ಕೊತ್ತನೂರಿನ ಮಂತ್ರಿ ವೆಬ್ಸಿಟಿಯ ಪ್ರಸನ್ನ.ಎಂ.ಕೆ ಬಂತ ಆರೋಪಿಗಳು.
ಬಂತ ಆರೋಪಿಗಳ ಪೈಕಿ ರಘುರಾಮನಿಗೆ ಶ್ರೀಕಾಂತ್ ಎಂಬುವನಿಂದ 30 ಲಕ್ಷ ರೂ.ಗಳಿಗೆ ಖರೀದಿಸಿದ್ದ. ಈ ವಿಗ್ರಹವನ್ನು ವಿದೇಶಕ್ಕೆ ರಫ್ತು ಮಾಡಿ ಮಾರಾಟ ಮಾಡಿದರೆ ಕೋಟ್ಯಂತರ ರೂ. ಗಳಿಸಬಹುದೆಂಬ ಉದ್ದೇಶದಿಂದ ಆರೋಪಿಗಳು ಸಂಚು ರೂಪಿಸಿದ್ದರು.
ಬಿಲ್ಡರ್ ಮನೆಗೆ ನುಗ್ಗಿ ಕೆಲಸಗಾರನನ್ನು ಕೊಂದು ಹಣ-ಚಿನ್ನಾಭರಣ ದೋಚಿದ ದುಷ್ಕರ್ಮಿಗಳು
ಅದರಂತೆ ರಾಜರಾಮ್ ಮೋಹನ್ರಾಯ್ ರಸ್ತೆಯಲ್ಲಿರುವ ವುಡ್ಲ್ಯಾಂಡ್ ಹೋಟೆಲ್ ಬಳಿ 38 ಸೆ.ಮೀ ಉದ್ದದ ಪ್ರಾಚೀನ ಕಾಲದ ಬುದ್ದನ ವಿಗ್ರಹವನ್ನು ಭ್ರೀಫ್ಕೇಸ್ನಲ್ಲಿಟ್ಟುಕೊಂಡು ಮಾರಾಟ ಮಾಡುವ ಉದ್ದೇಶದಿಂದ ತಂದಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಈ ಪುರಾತನ ವಿಗ್ರಹವನ್ನು ಎಲ್ಲಿಂದಲೋ ಕಳ್ಳತನ ಮಾಡಿಕೊಂಡು ಬಂದಿರಬಹುದೆಂದು ತನಿಖೆಯಿಂದ ತಿಳಿದುಬಂದಿದೆ. ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲಸೂರು ಗೇಟ್ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ನಾರಾಯಣಸ್ವಾಮಿ ಮಾರ್ಗದರ್ಶನದಲ್ಲಿ ಸಂಪಂಗಿರಾಮ ಠಾಣೆ ಇನ್ಸ್ಪೆಕ್ಟರ್ ಹರೀಶ್ಕುಮಾರ್ ನೇತೃತ್ವದಲ್ಲಿ, ಪಿಎಸ್ಐ ಶಿವಕುಮಾರ್, ಕೆ.ವಿ.ತಿರುಪತಿ ಮತ್ತವರ ತಂಡ ಆರೋಪಿಗಳನ್ನು ಬಂಧಿಸಿ ಬುದ್ದನ ವಿಗ್ರಹ ಹಾಗೂ 5 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
#FiveArrested, #TryingtoExport, #200yearold, #BuddhaIdol,