5 ಮಂದಿ ಬಂಧನ, 1.4 ಟನ್ ರಕ್ತಚಂದನ ಜಪ್ತಿ

Social Share

ಬೆಂಗಳೂರು,ಅ.13- ಅರಣ್ಯದಿಂದ ರಕ್ತಚಂದನ ಕಳ್ಳತನ ಮಾಡಿ ಸಾಗಿಸುತ್ತಿದ್ದ ಐದು ಮಂದಿಯನ್ನು ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿ 1.4 ಟನ್ ರಕ್ತಚಂದನ ಹಾಗೂ ಬೊಲೆರೊ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ಪೊಲೀಸರ ಕಣ್ತಪ್ಪಿಸಲು ರಕ್ತಚಂದನ ತುಂಡುಗಳನ್ನು ಗೋಣಿ ಚೀಲದಲ್ಲಿ ತುಂಬಿ ಅದರ ಮೇಲೆ ಟೊಮೊಟೊ ಬಾಕ್ಸ್ ಇಟ್ಟು ಬೊಲೆರೊ ವಾಹನದಲ್ಲಿ ಸಾಗಾಟ ಮಾಡುತ್ತಿದ್ದರು.

ಮಂಡ್ಯದ ದೇವಲಾಪುರ ಅರಣ್ಯದಿಂದ ರಕ್ತಚಂದನ ಮರಗಳನ್ನು ಕಳ್ಳತನ ಮಾಡಿ ತಮಿಳುನಾಡಿಗೆ ಸಾಗಿಸುವ ವೇಳೆ ಆರೋಪಿಗಳು ಸಿಕ್ಕಿ ಬಿದ್ದಿದ್ದು, ಬಂಧಿತರಿಂದ 1.4 ಟನ್ ರಕ್ತಚಂದನದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

ಸಿದ್ದರಾಜು, ಪ್ರಜ್ವಲ, ಲೋಕೇಶ, ದೇವರಾಜ್, ಗೋವಿಂದಸ್ವಾಮಿ, ಬಂಧಿತ ಆರೋಪಿಗಳಾಗಿದ್ದು, ಇವರ ಪೈಕಿ ಗೋವಿಂದ ಸ್ವಾಮಿ ಮೇಲೆ ಆಂಧ್ರಪ್ರದೇಶ, ತಮಿಳುನಾಡು ಭಾಗದಲ್ಲಿ ರಕ್ತಚಂದನ ಕಳ್ಳತನ ಪ್ರಕರಣಗಳು ದಾಖಲಾಗಿರುವುದು ತನಿಖೆಯಿಂದ ಗೊತ್ತಾಗಿದೆ.

Articles You Might Like

Share This Article