ಕಾನ್ಪುರ,ಮಾ.12- ಗುಡಿಸಲಿಗೆ ಬೆಂಕಿ ಬಿದ್ದು ಮೂವರು ಮಕ್ಕಳು ಸೇರಿದಂತೆ ಐವರು ಸಜೀವ ದಹನಗೊಂಡಿರುವ ಘಟನೆ ಕಾನ್ಪುರ ಜಿಲ್ಲೆಯ ಹಮರ್ ಬಂಜಾರದೇರಾ ಗ್ರಾಮದಲ್ಲಿ ಕಳೆದ ಮುಂಜಾನೆ ನಡೆದಿದೆ.
ಮೃತರನ್ನು ಸತೀಶ್ ಕುಮಾರ್, ಅವರ ಪತ್ನಿ ಕಾಜಲ್ ಮತ್ತು ಅವರ ಮೂವರು ಮಕ್ಕಳು ಎಂದು ರೂರಾ ಪೊಲೀಸ್ ತಿಳಿಸಿದ್ದಾರೆ.
ರಾಜ್ಯದ ಮತದಾರರಿಗೆ ನ್ಯಾ.ಸಂತೋಷ್ ಹೆಗ್ಡೆ ಸಂದೇಶ : ವಿಶೇರ್ಷ ಸಂದರ್ಶನ
ಕಳೆದ ರಾತ್ರಿ ಊಟ ಮಾಡಿ ಮಲಗಿದ ಕುಟುಂಬ ಬೆಳಗಾಗುವಷ್ಟರಲ್ಲಿ ಶವವಾಗಿರುವುದರಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಬೆಂಕಿ ತಗುಲಿದಾಗ ಎಲ್ಲರೂ ಗಾಢ ನಿದ್ದೆಯಲ್ಲಿದರೂ ಗುಡಿಸಲಿನ ಭದ್ರತೆಯ ಹಲಿಗೆ ಇವರ ಮೇಲೆ ಬಿದ್ದು ಎಲ್ಲರೂ ಗಾಯಗೊಂಡಿದ್ದಾರೆ ಬೆಂಕಿ ಬಿದ್ದಿರುವುದು ತಿಳಿದ ಮೇಲೂ ತೀವ್ರ ಗಾಯಗೊಂಡು ಹರಬರಲಾಗದೆ ಎಲ್ಲರೂ ಸಜೀವ ದಹನಗೊಂಡಿದ್ದಾರೆ.
ಅಕ್ರಮ ಸಿಲಿಂಡರ್ ದಾಸ್ತಾನು- ರೀಫಿಲ್ಲಿಂಗ್ ಮಾಡುತ್ತಿದ್ದ ಮನೆಮೇಲೆ ಸಿಸಿಬಿ ದಾಳಿ
ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿರುವು ಭಾರಿ ಅನುಮಾನ ಮೂಡಿಸಿದೆ. ರೂರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.
Five, charred, death, fire, Uttar Pradesh, village,