ಇರಾನ್‌ನ ಮಾರ್ಕೆಟ್‌ನಲ್ಲಿ ಗುಂಡಿನ ದಾಳಿ, ಐವರ ಸಾವು

Social Share

ಟೆಹರಾನ್ ನ.17 ಮೋಟಾರ್‍ಸೈಕಲ್‍ಗಳಲ್ಲಿ ಬಂದ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ ಪರಿಣಾಮ ಯುವತಿ ಸೇರಿದಂತೆ ಐವರು ಸಾವನ್ನಪ್ಪಿರುವ ಘಟನೆ ನೈಋತ್ಯ ಇರಾನ್‍ನ ಇಝೆಹ್ ನಗರದಲ್ಲಿ ನಡೆದಿದೆ.
ಘಟನೆಯಲ್ಲಿ ಹಲವು ನಾಗರಿಕರು ಮತ್ತು ಭದ್ರತಾ ಪಡೆಯ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.

ಇದಲ್ಲದೆ ಇಸಹಾನ್‍ನಲ್ಲಿ ಇರಾನ್‍ನ ಅರೆಸೈನಿಕ ಪಡೆಯ ಇಬ್ಬರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಸರ್ಕಾರಿ ಐಆರ್‍ಎನ್‍ಎ ಸುದ್ದಿ ಸಂಸ್ಥೆ ತಿಳಿಸಿದೆ.ಕಳೆದ ಎರಡು ತಿಂಗಳಿನಿಂದ ಹಿಜಾಬ್ ಮತ್ತು ಮಹಿಳಾ ಹಕ್ಕಿಗಾಗಿ ರಾಷ್ಟ್ರವ್ಯಾಪಿ ಪ್ರತಿಭಟನೆಗಲು ನಡೆಯುತ್ತಿರುವ ನಡುವೆ ಈ ಘಟನೆ ನಡೆದಿರುವುದು ಆತಂಕ ಮೂಡಿಸಿದೆ.

ಪ್ರತಿಭಟನಾಕಾರರ ಗುಂಪುಗಳು ತಡರಾತ್ರಿ ಇಝೆಹ್‍ನ ವಿವಿಧ ಭಾಗಗಳಲ್ಲಿ ಜಮಾಯಿಸಿ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ ಅವರನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದರು,ಕೆಲ ಕಿಡಿಗೇಡಿಗಳು ದಾರ್ಮಿಕ ಕೇಂದ್ರಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ಮೂಲಗಳು ತಿಳಿಸಿವೆ. ಭದ್ರತಾ ಪಡೆಗಳು ಪ್ರತಿಭಟನೆಗಳನ್ನು ಹತ್ತಕ್ಕಲು ಪ್ರಯತ್ನಿಸಿದಾಗಲೆಲ್ಲಾ ಹಿಂಸಾಚಾರ ಭುಗಿಲೆದ್ದಿದೆ.

ಇತ್ತೀಚಿನ ಪ್ರತಿಭಟನೆಯ ಅಲೆಯಲ್ಲಿ ಕನಿಷ್ಠ 344 ಜನರು ಸಾವನ್ನಪ್ಪಿದ್ದಾರೆ ಮತ್ತು ಪೊಲೀಸರು ಸುಮಾರು 15,820 ಮಂದಿಯನ್ನು ಬಂಧಿಸಲಾಗಿದೆ ಎಂದು ಹೇಳಲಾಗುತ್ತಿದೆ

Articles You Might Like

Share This Article