ಮಂಡೋಲಿ ಜೈಲಿನ ಐವರು ಅಧಿಕಾರಿಗಳ ಅಮಾನತು

Social Share

ನವದೆಹಲಿ, ಜ.6-ಮಂಡೋಲಿ ಜೈಲಿನಲ್ಲಿ ಮೊಬೈಲ್ ಫೋನ್ ಪತ್ತೆಯಾದ ಹಿನ್ನೆಲೆಯಲ್ಲಿ ದೆಹಲಿಯ ಕಾರಾಗೃಹ ಇಲಾಖೆ ಮೂವರು ಅಧಿಕಾರಿಗಳು ಇಬ್ಬರು ಸಿಬ್ಭಂದಿಯನ್ನು ಅಮಾನತುಗೊಳಿಸಲಾಗಿದೆ.

ಇತ್ತೀಚೆಗೆ ಪೊಲೀಸರ ದಾಳಿವೇಲೆ ಮಂಡೋಲಿ ಜೈಲಿನಲ್ಲಿ ಮೊಬೈಲ್ ಫೋನ್‍ಗಳು ಹಾಗು ಇತರೆ ವಸ್ತುಗಲನ್ನು ವಶಪಡಿಸಿಕೊಳ್ಳಲಾಗಿತ್ತು ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಉಪ ಅೀಧಿಕ್ಷಕರಾದ ಪ್ರದೀಪ್ ಶರ್ಮಾ ಮತ್ತು ಧರ್ಮೇಂದರ್ ಮೌರ್ಯ, ಸಹಾಯಕ ಸೂಪರಿಂಟೆಂಡೆಂಟ್ ಸನ್ನಿ ಚಂದ್ರ, ಹೆಡ್ ವಾರ್ಡರ್ ಲೋಕೇಶ್ ಧಾಮ ಮತ್ತು ವಾರ್ಡರ್ ಹಂಸರಾಜ್ ಮೀನಾ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಹಿರಿಯ ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

ಈ ನಡುವೆ ಪೊಲೀಸ್ ಮಹಾನಿರ್ದೇಶಕ (ಜೈಲುಗಳು) ಸಂಜಯ್ ಬನಿವಾಲ್ ಅವರು ಎಲ್ಲಾ ಜೈಲು ಸೂಪರಿಂಟೆಂಡೆಂಟ್‍ಗಳಿಗೆ ಶೋಧ ತಂಡಗಳನ್ನು ರಚಿಸುವಂತೆ ಮತ್ತು ಅವರ ಜೈಲುಗಳಲ್ಲಿ ಮೊಬೈಲ್ ಫೋಗಳು ಮತ್ತು ಇತರ ನಿಷೇಧಿತ ಲೇಖನಗಳನ್ನು ಪತ್ತೆಹಚ್ಚಲು ಸೂಚಿಸಿದ್ದಾರೆ.

ಗುಜರಿ ಸೇರಲಿವೆ 990 ಬಿಎಂಟಿಸಿ ಬಸ್‍ಗಳು..!

ಕಳೆದ ಹದಿನೈದು ದಿನಗಳಲ್ಲಿ, ಎಲ್ಲಾ ಕಾರಾಗೃಹಗಳಲ್ಲಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ 117 ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಬನಿವಾಲ್ ಅವರು ಜೈಲುಗಳಲ್ಲಿ ನಡೆಯುವ ಅಕ್ರಮ ಕುರಿತು ಶಿಸ್ತುಕ್ರಮಕ್ಕಾಗಿ ಕಾರಾಗೃಹದ ಪ್ರಧಾನ ಕಛೇರಿಯಲ್ಲಿ ವಿಶೇಷ ವಿಜಿಲೆನ್ಸ ತಂಡವನ್ನು ರಚಿಸಿದ್ದರು.

ಭಾರತ-ನೇಪಾಳ ಗಡಿಯಲ್ಲಿ ನಾಲ್ವರು ಡ್ರಗ್ಸ್ ಕಳ್ಳಸಾಗಣೆದಾರರ ಬಂಧನ

ಮಂಡೋಲಿ ಜೈಲಿನಲ್ಲಿ 104 ತಮಿಳುನಾಡು ವಿಶೇಷ ಪೊಲೀಸ್ ಸಿಬ್ಬಂದಿ ತಂಡವು ಡಿಸೆಂಬರ್ 18 ರಂದು ದಾಳಿ ನಡೆಸಲಾಗಿತ್ತು.

Five officials, suspended, mobile phones, recovered, Mandoli jail,

Articles You Might Like

Share This Article