ಬೆಂಗಳೂರು,ಮಾ.18- ಬೆಂಗಳೂರು-ಮೈಸೂರು ಎಕ್ಸ್‍ಪ್ರೆಸ್ ಹೆದ್ದಾರಿಯಲ್ಲಿ ಸರ್ವಿಸ್ ರಸ್ತೆಗಳನ್ನು ಸಮರ್ಪಕವಾಗಿ ನಿರ್ಮಿಸದೆ ಟೋಲ್ ಸಂಗ್ರಹಿಸುತ್ತಿರುವುದು ಸರಿಯಲ್ಲ ಎಂದು ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಆಕ್ಷೇಪ ವ್ಯಕ್ತ ಪಡಿಸಿದೆ.
ಈ ಕುರಿತು ಪ್ರತಿಕಾ ಹೇಳಿಕೆ ನೀಡಿರುವ ಎಫ್‍ಕೆಸಿಸಿಐ ಅಧ್ಯಕ್ಷ ಬಿ.ವಿ.ಗೋಪಾಲ್‍ರೆಡ್ಡಿ, ಬೆಂಗಳೂರು ಮತ್ತು ಮೈಸೂರು ನಡುವೆ ವಿಶ್ವ ದರ್ಜೆಯ ಎಕ್ಸ್‍ಪ್ರೆಸ್ ಹೆದ್ದಾರಿಯನ್ನು ನಿರ್ಮಿಸಿದ್ದಕ್ಕಾಗಿ ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಕಾರವನ್ನು ಅಭಿನಂದಿಸುತ್ತವೆ.
ಇದು ಶ್ಲಾಘನೀಯ ಕಾರ್ಯ, ಈ ಮೂಲಕ ಬೆಂಗಳೂರು-ಮೈಸೂರು ನಡುವಿನ ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಲಾಗಿದೆ. ಇದರಿಂದ ವ್ಯಾಪಾರ ಮತ್ತು ಕೈಗಾರಿಕೆಗಳಿಗೆ ಹಾಗು ಸಾರ್ವಜನಿಕರಿಗೆ ಪ್ರಯೋಜನಕಾರಿಯಾಗಿದೆ. ನಮ್ಮ ರಾಜ್ಯದಲ್ಲಿ ಇಂತಹ ಇನ್ನೂ ಹಲವು ಎಕ್ಸ್‍ಪ್ರೆಸ್ ಹೆದ್ದಾರಿಗಳ ಅಗತ್ಯವಿದೆ ಎಂದಿದ್ದಾರೆ.
ಆದರೆ ಹೆದ್ಧಾರಿಯಲ್ಲಿ ತೀರಾ ಅಗತ್ಯವಾಗಿರುವ ಸರ್ವಿಸ್ ರಸ್ತೆಗಳನ್ನು ಸಮರ್ಪಕವಾಗಿ ಅಭಿವೃದ್ಧಿಪಡಿಸದೆ ಟೋಲ್ ಸಂಗ್ರಹ ಆರಂಭಿಸಿರುವುದು ಸೂಕ್ತವಲ್ಲ. ಬೆಂಗಳೂರು-ಮೈಸೂರು ನಡುವಿನ ಜಿಲ್ಲೆಗಳು ಮತ್ತು ಟೌನ್‍ಶಿಪ್‍ಗಳ ಮಾರ್ಗವನ್ನು ಸುಗಮಗೊಳಿಸಿದ ನಂತರವೇ ಟೋಲ್ ಶುಲ್ಕವನ್ನು ಸಂಗ್ರಹಿಸಬೇಕು, ಎಕ್ಸ್‍ಪ್ರೆಸ್ ಹೆದ್ದಾರಿಯ ಸಂಪೂರ್ಣ ವಿಸ್ತರಣೆಗೆ ಟೋಲ್ ಸಂಗ್ರಹಿಸಲಾಗುತ್ತಿದೆ. ಅದರ ಬದಲು ಪ್ರಯಾಣಿಸುವ ದೂರವನ್ನು ಅವಲಂಬಿಸಿ ಕಿಲೋಮೀಟರ್‍ಗೆ ಅನುಗುಣವಾಗಿ ಅನುಪಾತದ ಟೋಲ್ ಸಂಗ್ರಹಿಸುವುದು ಸೂಕ್ತ ಎಂದು ಎಫ್‍ಕೆಸಿಸಿಐ ಸಲಹೆ ನೀಡಿದೆ.
ಹೌರಾ-ನವದೆಹಲಿ ಎಕ್ಸ್ ಪ್ರೆಸ್ ರೈಲು ಹರಿದು ಮೂವರ ದೇಹ ಛಿದ್ರ
ಸರ್ವಿಸ್ ರಸ್ತೆಗಳನ್ನು ಪೂರ್ಣಗೊಳಿಸದೆ ಟೋಲ್ ಪಾವತಿ ಆರಂಭಿಸುವುದರಿಂದ ಕೈಗಾರಿಕಾ ವಲಯ, ಸಾರಿಗೆ ವಲಯ ಮತ್ತು ಸುತ್ತಮುತ್ತಲಿನ ಗ್ರಾಮಗಳು ತೊಂದರೆ ಎದುರಿಸುತ್ತಿವೆ. ಸಾಮಾನ್ಯ ಜನರೊಂದಿಗಿನ ವ್ಯವಹಾರ, ಕೈಗಾರಿಕೆ ಮತ್ತು ವ್ಯಾಪಾರ ವಲಯಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದು ಬೆಲೆ ಹೆಚ್ಚಳಕ್ಕೂ ಕಾರಣವಾಗಲಿದೆ ಎಂದು ಎಫ್‍ಕೆಸಿಸಿಐ ಕಳವಳ ವ್ಯಕ್ತಪಡಿಸಿದೆ.
FKCCI, objects, bangalore, mysore, expressway, toll,