ಬೆಂಗಳೂರು : ನಗರದಲ್ಲಿ ಅಳವಡಿಸಿರುವ ಎಲ್ಲ ಅನಧಿಕೃತ ಫ್ಲೆಕ್ಸ್, ಬಂಟಿಂಗ್ಸ್ ಮತ್ತು ಬ್ಯಾನರ್‍ಗಳನ್ನು ತೆರವು ಮಾಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‍ಗುಪ್ತ ತಿಳಿಸಿದ್ದಾರೆ. ಎಂಟು ವಲಯಗಳಲ್ಲಿ ಅಳವಡಿಸಿರುವ ಅನಧಿಕೃತ ಬ್ಯಾನರ್‍ಗಳನ್ನು ತೆರವುಗೊಳಿಸುವಂತೆ ಆಯುಕ್ತರು ಎಲ್ಲಾ ವಲಯ ಮುಖ್ಯ ಎಂಜಿನಿಯರ್‍ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಆಯುಕ್ತರ ಸೂಚನೆ ಮೇರೆಗೆ ಕಾರ್ಯಚರಣೆಗೆ ಇಳಿದಿರುವ ಬಿಬಿಎಂಪಿ ಸಿಬ್ಬಂದಿಗಳು ಅನಧಿಕೃತ ಜಾಹೀರಾತು ಫಲಕಗಳ ತೆರವು ಕಾರ್ಯಚರಣೆ ತೀವ್ರಗೊಳಿಸಿದ್ದಾರೆ. ರಸ್ತೆ ಬದಿ ವಿದ್ಯುತ್ ಕಂಬಗಳು, ಪಾದಚಾರಿ ಮಾರ್ಗಗಳು, ರಾಜಕಾಲುವೆಗಳ ಮೇಲೆ ಅಳವಡಿಸಿರುವ ಜಾಹೀರಾತು ಫಲಕಗಳನ್ನು ಮುಲಾಜಿಲ್ಲದೆ ತೆರವುಗೊಳಿಸಲಾಗುತ್ತಿದೆ.
ರಾಜÁಜಿನಗರ, ಮಾರತ್‍ಹಳ್ಳಿ, ವೈಟ್‍ಫೀಲ್ಡ್, ಹೂಡಿ ಹೆಚ್‍ಬಿಆರ್ ಬಡಾವಣೆ, ಯಲಹಂಕ, ಥಣಿಸಂದ್ರ, ಬೇಗೂರು, ಅಂಜನಾಪುರ್, ಜ್ಞಾನಭಾರತಿ, ದಾಸರಹಳ್ಳಿ, ಯಶವಂತಪುರ ಮತ್ತಿತರ ಪ್ರದೇಶಗಳಲ್ಲಿ ಅಳವಡಿಸಲಾಗಿದ್ದ ಸಾವಿರಾರು ಅನಕೃತ ಜಾಹೀರಾತು ಫಲಕಗಳನ್ನು ತೆರವುಗೊಳಿಸಲಾಗಿದ್ದು, ತೆರವು ಕಾರ್ಯಚರಣೆಯನ್ನು ಮುಂದುವರೆಸಲಾಗಿದೆ.
