ಬೆಂಗಳೂರು,ಮಾ.15- ಮಾಡೋ ಕೆಲ್ಸ ಬಿಟ್ಟು ಆಡೋ ದಾಸಯ್ಯನ ಹಿಂದೆ ಹೋದರೂ ಅನ್ನೊ ಹಾಗೇ ಬಿಬಿಎಂಪಿಯವರು ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡೋಕೆ ಹೊಸ ಐಡಿಯಾ ಕಂಡುಕೊಂಡಿದ್ದಾರೆ.
ತಾನು ಮಾಡಬೇಕಾದ ಕೆಲಸ ಮಾಡದೆ ಅದೇ ಕೆಲಸವನ್ನು ಖಾಸಗಿ ಸಂಸ್ಥೆ ಹೆಗಲಿಗೆ ವಹಿಸಲು ಬಿಬಿಎಂಪಿ ಅಧಿಕಾರಿಗಳು ಮುಂದಾಗಿದ್ದಾರೆ.
ನಗರದಲ್ಲಿ ಅನಧಿಕೃತವಾಗಿ ತಲೆ ಎತ್ತುತ್ತಿರುವ ಫ್ಲೆಕ್ಸ್, ಬ್ಯಾನರ್ ತೆರವು ಕಾರ್ಯಚರಣೆಯನ್ನು ಖಾಸಗಿ ಕಂಪನಿಗಳಿಗೆ ವಹಿಸಲು ಈಗಾಗಲೇ ಟೆಂಡರ್ ಕರೆಯಲಾಗಿದೆ.
ನಗರದ ಸೌಂದರ್ಯ ಹಾಳು ಮಾಡಿ ಎಲ್ಲೇಂದರಲ್ಲಿ ಫ್ಲೆಕ್ಸ್, ಬ್ಯಾನರ್ ಅಳವಡಿಸುವವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕ್ತೇವೆ ಎಂದು ಎಚ್ಚರಿಸಿದರೂ ಯಾವುದೇ ಉಪಯೋಗವಾಗದ ಹಿನ್ನೆಲಯಲ್ಲಿ ಬಿಬಿಎಂಪಿ ಈ ತೀರ್ಮಾನ ಕೈಗೊಂಡಿದೆ.
ಯುಗಾದಿಗೆ ಊರಿಗೆ ಹೋಗಲು ಬೆಂಗಳೂರಿಗರು ಪರದಾಡುವುದು ಗ್ಯಾರಂಟಿ
ಝೋನ್ ವೈಸ್ ಟಾರ್ಗೆಟ್ ಕೊಟ್ರು ಅನಧಿಕೃತ ಫ್ಲೆಕ್ಸ್ ತೆರವು ಮಾಡಲು ಮುಂದಾದ ಪ್ಲಾನ್ ಫ್ಲಾಪ್ ಆಗಿರುವುದರಿಂದ ಖಾಸಗೀ ಸಂಸ್ಥೆಗಳ ಮೊರೆ ಹೋಗಲು ತೀರ್ಮಾನಿಸಲಾಗಿದೆ.
ತನ್ನ ಜವಬ್ದಾರಿಯಿಂದ ಜಾರಿ ಕೊಳ್ಳೋಕೆ ಜನರ ತೆರಿಗೆ ಹಣ ದುಂದು ವೆಚ್ಚ ಮಾಡಿ ತಾನು ಮಾಡಬೇಕಾದ ಕೆಲಸವನ್ನು ಖಾಸಗಿ ಸಂಸ್ಥೆಗಳಿಗೆ ವಹಿಸಲು ಮುಂದಾಗಿರುವ ಬಿಬಿಎಂಪಿ ವಿರುದ್ಧ ಜನ ಆಕ್ರೋಶ ಹೊರ ಹಾಕಿದ್ದಾರೆ.
ರಾಜಕಾರಣಿಗಳ ವಿರುದ್ಧ ನೇರ ಕ್ರಮ ಕೈಗೊಳ್ಳಲು ಪಾಲಿಕೆಗೆ ಧಮ್ ಇಲ್ಲದಿರುವುದರಿಂದ ಬಿಬಿಎಂಪಿಯವರು ಇಂತಹ ತೀರ್ಮಾನ ಕೈಗೊಂಡಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಸತತ 3ನೇ ದಿನವೂ ನಡೆಯದ ಸಂಸತ್ ಕಲಾಪ, ಅಮೂಲ್ಯ ಸಮಯ ವ್ಯರ್ಥ
ಬಿಬಿಎಂಪಿಗೆ ಬಗ್ಗದ ಜಾಹೀರಾತು ಮಾಫಿಯಾಕ್ಕೆ ಖಾಸಗಿ ಕಂಪನಿಯವರು ಕಡಿವಾಣ ಹಾಕಲು ಸಾಧ್ಯವೇ ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ.
Flexa, banner, clearance, operation, BBMP, private, company,