ಕಳಪೆ ಗುಣಮಟ್ಟದ ಕುಕ್ಕರ್ ಮಾರಾಟ : ಫ್ಲಿಪ್‍ಕಾರ್ಟ್ ಸಂಸ್ಥೆಗೆ 1ಲಕ್ಷ ದಂಡ

Social Share

ನವದೆಹಲಿ,ಸೆ.24-ಗ್ರಾಹಕರಿಗೆ ಕಳಪೆ ಗುಣಮಟ್ಟದ ಕುಕ್ಕರ್ ಸರಬರಾಜು ಮಾಡಿದ ಫ್ಲಿಪ್ ಕಾರ್ಟ್ ಸಂಸ್ಥೆಗೆ ದೆಹಲಿ ಹೈಕೋರ್ಟ್ ಒಂದು ಲಕ್ಷ ದಂಡ ವಿಧಿಸಿದೆ. ಮಾತ್ರವಲ್ಲ ಸಂಸ್ಥೆಯಿಂದ ಮಾರಾಟ ಮಾಡಿರುವ ಎಲ್ಲಾ 598 ಕುಕ್ಕರ್‍ಗಳನ್ನು ಗ್ರಾಹಕರಿಂದ ವಾಪಸ್ ಪಡೆದು ಹಣ ಹಿಂತಿರುಗಿಸುವಂತೆಯೂ ಆದೇಶಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸಂಸ್ಥೆ ಮಾರಾಟ ಮಾಡಿರುವ ಕುಕ್ಕರ್‍ಗಳು ಬಿಐಎಸ್ ಮಾನದಂಡ ಹೊಂದಿಲ್ಲ ಎಂದು ಸಿಸಿಪಿಎ ಹೊರಡಿಸಿದ ಆದೇಶದ ಮೇರೆಗೆ ಫ್ಲಿಪ್‍ಕಾರ್ಟ್ ಸಂಸ್ಥೆಗೆ ಒಂದು ಲಕ್ಷ ರೂ.ಗಳ ದಂಡ ವಿಧಿಸಿ, ದಂಡದ ಹಣವನ್ನು ನ್ಯಾಯಾಲಯದ ರಿಜಿಸ್ಟ್ರಾರ್ ಜನರಲ್ ಬಳಿ ಠೇವಣಿ ಇಡುವಂತೆ ಸೂಚಿಸಿ ಒಂದು ವಾರಗಳ ಗಡುವು ನೀಡಲಾಗಿದೆ.

ಈ ಹಿಂದೆ ಇದೇ ರೀತಿ ಹಲವಾರು ಇ-ಕಾಮರ್ಸ್ ಸಂಸ್ಥೆಗಳಿಗೂ ಬಿಸಿ ಮುಟ್ಟಿಸಿದ್ದ ನ್ಯಾಯಾಲಯ ಇದೀಗ ಫ್ಲಿಪ್‍ಕಾರ್ಟ್ ಸಂಸ್ಥೆಗೂ ಬಿಸಿ ಮುಟ್ಟಿಸಿ ಇನ್ನು ಮುಂದೆ ಬಿಐಎಸ್ ಮಾನದಂಡಗಳ ಅನುಸರಿಸುವಂತೆ ಸಲಹೆ ನೀಡಿದೆ.

Articles You Might Like

Share This Article