ಬೆಂಗಳೂರು,ಫೆ.5- ಬ್ಯಾಂಕಾಕ್‍ನಿಂದ ಆಗಮಿಸಿದ ಪ್ರಯಾಣಿಕ ಕಳ್ಳ ಸಾಗಾಣಿಕೆ ಮೂಲಕ ತಂದಿದ್ದ ಅರ್ಧ ಕೆಜಿಗೂ ಹೆಚ್ಚಿನ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶ ಪಡಿಸಿಕೊಂಡಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ಬ್ಯಾಂಕಾಕ್‍ನಿಂದ ಟಿಜಿ-325 ವಿಮಾನದಲ್ಲಿ ಆಗಮಿಸಿದ ಪ್ರಯಾಣಿಕರೊಬ್ಬರು ದ್ರವರೂಪದ ಚಿನ್ನವನ್ನು ಕಳ್ಳಸಾಗಾಣಿಕೆ ಮಾಡಲು ಯತ್ನಿಸಿದ್ದರು.
ಕುತೂಹಲ ಕೆರಳಿಸಿದ ಬೊಮ್ಮಾಯಿ ಹಾಗೂ ಬಿಎಸ್‌ವೈ ದೆಹಲಿ ಪ್ರವಾಸ
ಜಿನ್ಸ್‍ನ ಪಟ್ಟಿಯಲ್ಲಿ ಅಸ್ವಾಭಾವಿಕವಾಗಿ ಅಡಗಿಸಿಡಲಾಗಿದ್ದ 30.21 ಲಕ್ಷ ರೂಪಾಯಿ ಮೌಲ್ಯದ 525.50 ಗ್ರಾಮ್ ಚಿನ್ನವನ್ನು ಪರಿಶೋಧನೆಯಲ್ಲಿ ಪತ್ತೆ ಹಚ್ಚಲಾಗಿದೆ. ಪ್ರಕರಣ ದಾಖಲಿಸಿರುವ ಕಸ್ಟಮ್ಸ್ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.
Flyer, hiding, gold, paste, jeans, nabbed, Kempegowda International Airport,