ಬೃಹತ್ ಆರ್ಥಿಕ ರಾಷ್ಟ್ರವಾಗುವತ್ತ ಭಾರತ ದಾಪುಗಾಲು : ನಿರ್ಮಲಾ

ವಾಷಿಂಗ್ಟನ್, ಏ.19- ಭಾರತದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಐಎಂಎಫ್ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜಿವಾ ಅವರನ್ನು ಭೇಟಿ ಮಾಡಿ, ಭೌಗೋಳಿಕ ರಾಜಕೀಯ ಪರಿಸ್ಥಿತಿ ಜಾಗತಿಕ ಬೆಳವಣಿಗೆಯ ಮೇಲಾಗುವ ಪರಿಣಾಮ ಕುರಿತಂತೆ ಸಮಾಲೋಚನೆ ನಡೆಸಿದರು.

ಅಂತರರಾಷ್ಟ್ರೀಯ ಹಣಕಾಸು ನಿ (ಐಎಂಎಫ್) ಮತ್ತು ವಿಶ್ವಬ್ಯಾಂಕ್‍ನ ವಾರ್ಷಿಕ ಸಭೆಗಳ ನಡುವೆ ನಿರ್ಮಲಾ ಸೀತಾರಾಮನ್ ಮತ್ತು ಐಎಂಎಫ್ ಮುಖ್ಯಸ್ಥರು ಪರಸ್ಪರ ಭೇಟಿಯಾಗಿದ್ದರು. ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ಭಾರತವು ನೀಡಿದ ಸಹಾಯವನ್ನು ಪ್ರಸ್ತಾಪಿಸಿದ ಅವರು, ಐಎಂಎಫ್ ದ್ವೀಪ ರಾಷ್ಟ್ರದೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳುವುದನ್ನು ಮುಂದುವರಿಸುತ್ತದೆ ಎಂದು ಭರವಸೆ ನೀಡಿದ್ದಾರೆ.

ಇತ್ತೀಚಿನ ಭೌಗೋಳಿಕ ರಾಜಕೀಯ ಬೆಳವಣಿಗೆಗಳನ್ನು ಚರ್ಚಿಸಿದ ಉಭಯ ನಾಯಕರು, ಜಾಗತಿಕ ಆರ್ಥಿಕತೆಯ ಮೇಲೆ ಅದರ ಪ್ರಭಾವದಿಂದಾಗಿ ಇಂಧನ ಬೆಲೆ ಏರುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು ಎಂದು ಹಣಕಾಸು ಸಚಿವಾಲಯವು ಟ್ವೀಟ್‍ನಲ್ಲಿ ತಿಳಿಸಿದೆ.

ಬಂಡವಾಳ ವೆಚ್ಚದ ಮೂಲಕ ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸುವ ಸರ್ಕಾರದ ಬದ್ಧತೆಯನ್ನು ಸೀತಾರಾಮನ್ ಒತ್ತಿ ಹೇಳಿದರು. ಪ್ರಮುಖ ರಚನಾತ್ಮಕ ಸುಧಾರಣೆಗಳು, ಬಲವಾದ ವಿತ್ತೀಯ ನೀತಿಯಿಂದಾಗಿ ಕೋವಿಡ್ ಬಳಿಕ ದೇಶದ ಆರ್ಥಿಕತೆ ಚೇತರಿಕೆ ಕಾಣುತ್ತಿದೆ. ವಿಶ್ವದ ದೊಡ್ಡ ಆರ್ಥಿಕತೆಗಳಲ್ಲಿ ಭಾರತವು ಅತ್ಯಕ ಬೆಳವಣಿ ದಾಖಲಿಸುವ ನಿರೀಕ್ಷೆಯಿದೆ. ಆರ್ಥಿಕ ಸಮೀಕ್ಷೆಯ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತ ಶೇ.8-8.5 ಜಿಡಿಪಿ ಬೆಳವಣಿಗೆಯನ್ನು ದಾಖಲಿಸುವ ಅಂದಾಜಿದೆ.

ಹೆಚ್ಚಿನ ಬೆಳವಣಿಗೆಯನ್ನು ಸಾಧಿಸಲು ಬಂಡವಾಳ ಹಿಂತೆಗೆತವನ್ನು ಶೇ.35ಕ್ಕೆ ಹೆಚ್ಚಿಸಲಾಗಿದೆ. ಕಳೆದ ವರ್ಷದ 5.5 ಲಕ್ಷ ಗುರಿ ಕೋಟಿ ಗುರಿಯನ್ನು 2022-23 ಹಣಕಾಸು ವರ್ಷಕ್ಕೆ 35.4 ರಷ್ಟು ಅಂದರೆ 7.5 ಲಕ್ಷ ಕೋಟಿ ರೂ.ಗೆ ಹೆಚ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.