ನವದೆಹಲಿ,ಜ.3- ವಿಜ್ಞಾನ ಸಮೂಹ ದೇಶವನ್ನು ಆತ್ಮ ನಿರ್ಭರ್ ಸ್ವಾವಲಂಬಿ ಭಾರತ ಮಾಡಲು ಕೆಲಸ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ಭಾರತೀಯ ವಿಜ್ಞಾನ ಕಾಂಗ್ರೆಸ್ ಅನ್ನು ವೀಡಿಯೊ ಕಾನರೆನ್ಸಿಂಗ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ವಿಜ್ಞಾನದ ಅಭಿವೃದ್ಧಿಯು ಭಾರತದ ಅಗತ್ಯಗಳನ್ನು ಪೂರೈಸುವ ಗುರಿಯನ್ನು ಹೊಂದಿರಬೇಕು
ಮತ್ತು ನಮ್ಮ ವೈಜ್ಞಾನಿಕ ಸಮುದಾಯಕ್ಕೆ ಸೂರ್ತಿಯಾಗಬೇಕು ಎಂದರು.
ಭಾರತವು ವಿಶ್ವದ ಜನಸಂಖ್ಯೆಯ ಶೇ.17-18ರಷ್ಟು ಇರುವುದರಿಂದ ಇಂಧನ ಸೇರಿದಂತೆ ಹಲವು ರೀತಿಯ ಬೇಡಿಕೆಗಳು ಹೆಚ್ಚಾಗಲಿವೆ. ವಿಜ್ಞಾನಿಗಳು ದೇಶಕ್ಕೆ ಪ್ರಯೋಜನವಾಗುವಂತಹ ಆವಿಷ್ಕಾರಗಳನ್ನು ಕೈಗೊಳ್ಳಬೇಕು. ನಾವೀನ್ಯತೆ ಸೂಚ್ಯಂಕದಲ್ಲಿ 130 ದೇಶಗಳ ಪಟ್ಟಿಯಲ್ಲಿ 2015 ರಲ್ಲಿ 81ರ ಸ್ಥಾನದಲ್ಲಿದ್ದ ಭಾರತ ಪ್ರಸ್ತುತ 40 ನೇ ಸ್ಥಾನಕ್ಕೆ ಜಿಗಿದಿದೆ ಎಂದರು.
ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ ಪ್ರದೀಪ್ ಮನೆಗೆ ಕಾಂಗ್ರೆಸ್ ನಾಯಕರ ಭೇಟಿ
ನೆಲವನ್ನು ತಲುಪಲು ಪ್ರಯೋಗಾಲ ಯದಿಂದ ಹೊರಬಂದಾಗ ವೈಜ್ಞಾನಿಕ ಪ್ರಯತ್ನಗಳು ದೊಡ್ಡ ಸಾಧನೆಗಳಾಗಲಿವೆ. ಅದರ ಪ್ರಭಾವವು ತಳಮಟ್ಟದವರೆಗೆ ತಲುಪಲಿದೆ. ಸಂಶೋಧನೆಯ ಬದಲಾವಣೆಗಳು ನಿಜ ಜೀವನದಲ್ಲಿ ಗೋಚರಿಸಬೇಕು ಎಂದರು.
Focus, making, India, self-reliant, Modi, scientists,