ಬೆಂಗಳೂರು,ಡಿ.17- ಫುಡ್ ಡೆಲವರಿ ಸೋಗಿನಲ್ಲಿ ಕಂಪನಿಯ ಯೂನಿಫಾರಂ ಧರಿಸಿ ಸ್ವಿಗ್ಗಿ ಮತ್ತೆ ಜೊಮೆಟೋ ಬ್ಯಾಗಿನಲ್ಲಿ ಮಾದಕ ವಸ್ತುಗಳನ್ನಿಟ್ಟುಕೊಂಡು ಡ್ರಗ್ ಪೆಡ್ಲಿಂಗ್ನಲ್ಲಿ ತೊಡಗಿದ್ದ ಬಿಹಾರ ಮೂಲದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿ ರೂ.4 ಲಕ್ಷ ಮËಲ್ಯದ ಗಾಂಜಾ, ಎಲ್.ಎಸ್.ಡಿ ಸ್ಕ್ರಿಪ್ಟ್ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಿಹಾರದ ಅಭಿಜಿತ್ ಬಂಧಿತ ಡ್ರಗ್ ಪೆಡ್ಲರ್. ಈತನಿಂದ ಮಾದಕ ವಸ್ತು ಮೂರು ಕೆ.ಜಿ. ತೂಕದ ಗಾಂಜಾ ಮತ್ತು 14 ಗ್ರಾಂ ತೂಕದ 2 ಎಲ್.ಎಸ್.ಡಿ ಸ್ಕ್ರಿಪ್ಟ್ ಮತ್ತು ಕೃತ್ಯಕ್ತ ಬಳಸಲಾಗುತ್ತಿದ್ದ ಒಂದು ಮೊಬೈಲ್ ಫೆÇೀನ್, ಒಂದು ದ್ವಿಚಕ್ರ ವಾಹನ ಹಾಗೂ ಇತರೆ ವಸ್ತುಗಳನ್ನು ಪೊಲೀಸರು ಜಪ್ತಿಮಾಡಿದ್ದಾರೆ.
ನಗರದ ಸಿಸಿಬಿ ಮಾದಕದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿ ತಂಡವು ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆಯನ್ನು ನಡೆಸಿ ಜೊಮೆಟೋ ಹಾಗೂ ಸ್ವಿಗ್ಗಿ ಕಂಪನಿಯ ಟೀ ಶರ್ಟ್ಗಳನ್ನು ಧರಿಸಿಕೊಂಡು ಮಾದಕ ವಸ್ತುಗಳನ್ನು ತನ್ನ ಬಳಿ ಇಟ್ಟುಕೊಂಡಿದ್ದ ವ್ಯಕ್ತಿಯನ್ನು ಬಂಧಿಸಿ ಬ್ಯಾಗ್ ಪರಿಶೀಲಿಸಿದಾಗ ಅದರಲ್ಲಿ ಮಾದಕ ವಸ್ತು ಕಂಡುಬಂದಿದೆ.
ತಲೆಮರೆಸಿಕೊಂಡಿರುವ ಆರೋಪಿಯು ಬಿಹಾರದವನಾಗಿದ್ದು, ಅಲ್ಲಿಂದಲೇ ಬೆಂಗಳೂರಿನಲ್ಲಿರುವ ಮತ್ತೊಬ್ಬ ಆರೋಪಿಗೆ ಗಾಂಜಾ ಮತ್ತು ಇತರೆ ಡ್ರಗ್ಸ್ನ್ನು ನೀಡಬೇಕಾಗಿರುವ ಗ್ರಾಹಕನ ಲೊಕೇಶನ್ ಮತ್ತು ಅವನು ಧರಿಸುವ ಬಟ್ಟೆಯ ಬಣ್ಣವನ್ನು ತಿಳಸುತ್ತಿದ್ದನು.
ಪಾಕ್ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ವಿರುದ್ಧ ಬಿಎಸ್ವೈ ಕಿಡಿ
ಅದರ ಆಧಾರದ ಮೇಲೆ ಆರೋಪಿಯು ಸ್ವಿಗ್ಗಿ ಮತ್ತು ಜೊಮೆಟೋ ಕಂಪನಿಯ ಯುನಿಫಾರಂ ಧರಿಸಿ ಬ್ಯಾಗಿನಲ್ಲಿ ಫುಡ್ ಪ್ಯಾಕೆಟ್ ಅನ್ನು ಡೆಲವರಿ ಮಾಡುವ ರೀತಿ ಯಾರಿಗೂ ಅನುಮಾನ ಬಾರದಂತೆ ನೀಡುತ್ತಿದ್ದುದು ವಿಚಾರಣೆಯಿಂದ ತಿಳಿದುಬಂದಿದೆ.
ಡೆಲವರಿ ಮಾಡುತ್ತಿದ್ದ ಆರೋಪಿಗೂ ತಾನು ಯಾರಿಗೆ ಡೆಲವರಿ ಮಾಡುತ್ತಿದ್ದೇನೆ ಎಂದು ತಿಳಿಯುತ್ತಿರಲಿಲ್ಲ, ಮಾದಕ ವಸ್ತುಗಳನ್ನು ಸಾಗಣೆ ಮಾಡುತ್ತಿದ್ದ ಆರೋಪಿಯು ಸ್ವಿಗ್ಗಿ ಮತ್ತು ಜೊಮೆಟೋ ಕಂಪನಿಯಲ್ಲಿ ಮಾಜಿ ಡೆಲವರಿ ಬಾಯ್ ಆಗಿದ್ದು, ಕೆಲಸ ಬಿಟ್ಟ ನಂತರ ಕಂಪನಿಗೆ ತನ್ನ ಯೂನಿವಾರಂ ಮತ್ತು ಬ್ಯಾಗನ್ನು ತನ್ನಬಳಿಯೇ ಇಟ್ಟುಕೊಂಡು ಅದನ್ನು ದುರುಪಯೋಗಪಡಿಸಿಕೊಂಡಿರುತ್ತಾನೆ.
ಆರೋಪಿಗಳಿಬ್ಬರು ಬಿಹಾರ ರಾಜ್ಯದವರಾಗಿರುತ್ತಾರೆ. ಮಾದಕ ವಸ್ತುಗಳ ಸಾಗಾಟ, ಮಾರಾಟ ಮಾಡಿರುವುದು. ಪ್ರಾಥಮಿಕ ತನಿಖೆಯಿಂದ ತಿಳೆದು ಬಂದಿರುವುದರಿಂದ ಇವರ ವಿರುದ್ಧ ವೈಟ್ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್. ಕಾಯ್ದೆಯಡಿ ಪ್ರಕರಣ ದಾಖಲಸಲಾಗಿದ್ದು, ತನಿಖೆ ಮುಂದುವರೆದಿದೆ.ಈ ಕಾರ್ಯಾಚರಣೆಯನ್ನು ಸಿ.ಸಿ.ಬಿ. ಘಟಕದ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿಯವರ ತಂಡವು ಯಶಸ್ವಿಯಾಗಿ ಕೈಗೊಂಡಿದೆ.
#DrugPeddler, #Arrested, #FoodDelivery,