ಬೆಂಗಳೂರು,ಜ.12- ಅಪಘಾತ ವಾಗಿದೆ ಎಂಬಂತೆ ನಟಿಸಿ ನೆರವಿಗೆ ದಾವಿಸಿದ ಫುಡ್ ಡಿಲೇವರಿ ಯುವಕನಿಗೆ ಚಾಕು ತೋರಿಸಿ ಬೆದರಿಸಿ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದ ಮೂವರು ದರೋಡೆಕೋರರನ್ನು ಸಂಪಿಗೆ ಹಳ್ಳಿ ಠಾಣೆ ಪೊಲೀಸರು ಬಂಧಿಸಿ 12 ಪ್ರಕರಣಗಳಿಗೆ ಸಂಬಂಧಿಸಿದಂತೆ 8 ಬೈಕ್ಗಳು, 2 ಮೊಬೈಲ್ ಫೋನ್ ಹಾಗೂ ಬೆಳ್ಳಿಯ ಚೈನ್ನನ್ನು ವಶಪಡಿಸಿಕೊಂಡಿದ್ದಾರೆ.
ಯಲಹಂಕದ ಮುಬಾರಕ್ ಅಲಿಯಾಸ್ ಡೂಮ್(20), ಇಸ್ಮಾಯಿಲ್ ಅಲಿಯಾಸ್ ಜಿಶಾನ್(19) ಮತ್ತು ಅಗ್ರಹಾರ ಲೇಔಟ್ನ ಸುನೀಲ್ ಅಲಿಯಾಸ್ ಚಿತ್ತು ಅಲಿಯಾಸ್ ಮಹೇಶ್(20) ಬಂತರು. ಕಳೆದ ಮೇ 4ರಂದು ಬೆಳಗಿನ ಜಾವ 1 ಗಂಟೆ ಸುಮಾರಿನಲ್ಲಿ ಫುಡ್ ಡಿಲೇವರಿ ಬಾಯ್ ಜಯದೀಪ್ ಸೂತ್ರಧಾರ್(21) ಎಂಬುವರು ಫುಡ್ ಕೊಡಲು ವೀರಣ್ಣ ಪಾಳ್ಯ ಜಕ್ಷನ್ ಹತ್ತಿರ ಬರುತ್ತಿದ್ದರು.
ಆ ವೇಳೆ ಇಬ್ಬರು ಸಿಲ್ವರ್ ಆಕ್ಷೀಸ್ ಮೋಟಾರ್ ಸೈಕಲ್ನಿಂದ ಕೆಳಗೆ ಬಿದ್ದು ಅಪಘಾತವೆಂಬಂತೆ ಬಿಂಬಿಸಿದ್ದಾರೆ. ಸ್ವಲ್ಪ ದೂರದಲ್ಲಿ ನಿಂತಿದ್ದ ಮತ್ತೊಬ್ಬ ಜಯದೀಪ್ ಅವರ ಗಾಡಿಯನ್ನು ನಿಲ್ಲಿಸಿ ಹತ್ತಿರದಲ್ಲಿ ಆಸ್ಪತ್ರೆ ಎಲ್ಲಿದೆ ಎಂದು ಕೇಳಿದ್ದಾರೆ.
ಕೇರಳದ ಗಡಿಯಲ್ಲಿ ಸ್ಯಾಂಟ್ರೋ ರವಿಗೆ ತೀವ್ರ ಶೋಧ
ಅಪಘಾತವಾಗಿರಬಹುದೆಂದು ತಿಳಿದು ಆಸ್ಪತ್ರೆಯ ವಿಳಾಸ ಹೇಳುತ್ತಿದ್ದಂತೆ ಆತ ಮೊಬೈಲ್ ಕಿತ್ತುಕೊಳ್ಳಲು ಯತ್ನಿಸಿದ್ದಾನೆ. ತಕ್ಷಣ ಜಯದೀಪ್ ವಿರೋಧ ವ್ಯಕ್ತಪಡಿಸಿದಾಗ ಕೆಳಗೆ ಬಿದ್ದಿದ್ದವರ ಪೈಕಿ ಒಬ್ಬಾತ ಎದ್ದು ಬಂದು ಚಾಕು ತೋರಿಸಿ ಎದುರಿಸಿ ಅವರ ಜರ್ಕಿನ್ ಚೆಕ್ ಮಾಡಿ ನಂತರ ಮೂರು ಜನ ಸೇರಿಕೊಂಡು ಮೊಬೈಲ್ ಕಸಿದುಕೊಂಡು ಬೈಕ್ನಲ್ಲಿ ಪರಾರಿಯಾಗಿದ್ದರು.
ಈ ಬಗ್ಗೆ ಜಯದೀಪ್ ಸಂಪಿಗೆ ಹಳ್ಳಿ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡ ಆರೋಪಿಗಳ ಜಾಡು ಹಿಡಿದು ಬೆನ್ನತ್ತಿ ಮೊಬೈಲ್ ದರೋಡೆ ಮಾಡುತ್ತಿದ್ದ ಮೂವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಬಿಜೆಪಿ ಆಡಳಿತದ ರಾಜ್ಯಗಳಲ್ಲೂ ಜಾಹಿರಾತು ಶುಲ್ಕ ವಸೂಲಿ ಮಾಡಲಾಗುವುದೇ ?: ಸಿಸೋಡಿಯಾ
ಆರೋಪಿಗಳ ಬಂಧನದಿಂದ ಸಂಪಿಗೆಹಳ್ಳಿ ಠಾಣೆಯ ನಾಲ್ಕು ಪ್ರಕರಣ ಹಾಗೂ ಹೆಣ್ಣೂರು, ಎಚ್ಎಎಲ್, ಯಲಹಂಪ ಉಪನಗರ, ಕೊತ್ತನೂರು, ಬಾಗಲೂರು, ಬ್ಯಾಡರಹಳ್ಳಿ, ಗೋವಿಂದಪುರ ಹಾಗೂ ವರ್ತೂರು ಠಾಣೆಯ ತಲಾ ಒಂದು ಪ್ರಕರಣ 8 ಪ್ರಕರಣಗಳು ಪತ್ತೆಯಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಐದು ಲಕ್ಷ ರೂ. ಮೌಲ್ಯದ 8 ಮೋಟರ್ ಸೈಕಲ್ಗಳು, 2 ಮೊಬೈಲ್, ಬೆಳ್ಳಿಯ ಚೈನು ವಶಪಡಿಸಿಕೊಂಡಿದ್ದಾರೆ.
ಈ ವಿಶೇಷ ಕಾರ್ಯಾಚರಣೆಯನ್ನು ಈಶಾನ್ಯ ವಿಭಾಗದ ಉಪಪೊಲೀಸ್ ಆಯುಕ್ತ ಡಾ. ಅನೂಪ್ ಎ. ಶೆಟ್ಟಿ, ಮಾರ್ಗದರ್ಶನದಲ್ಲಿ ಸಂಪಿಗೆ ಹಳ್ಳಿ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ರಂಗಪ್ಪ ಅವರ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಕೆ.ಟಿ. ನಾಗರಾಜು ಅವರನ್ನೊಳಗೊಂಡ ಸಿಬ್ಬಂದಿ ತಂಡ ಕೈಗೊಂಡಿತ್ತು.
food, delivery, boy, robbery, Three, arrested,