ಬೆಂಗಳೂರು, ಫೆ.11- ನಗರದಲ್ಲಿ ರಾತ್ರಿ ವರ್ತೂರು ಹಾಗೂ ಕುಮಾರಸ್ವಾಮಿ ಲೇಔಟ್‍ನಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಟೆಂಪೋ ಚಾಲಕ ಹಾಗೂ ಫುಡ್ ಡೆಲವರಿ ಬಾಯ್ ಕೊಲೆಯಾಗಿದ್ದಾರೆ. ದೊಮ್ಮಸಂದ್ರ ನಿವಾಸಿ, ಟೆಂಪೋ ಚಾಲಕ ಮುನಿಯಪ್ಪ(45) ಮತ್ತು ಕೊಣನ ಕುಂಟೆ ನಿವಾಸಿ, ಫುಡ್ ಡೆಲವರಿ ಬಾಯ್ ಶರತ್ ಕುಮಾರ್(24) ಕೊಲೆಯಾದ ದುರ್ದೈವಿಗಳು.
ಚಾಡಿ ಹೇಳಿದ ಟೆಂಪೋ ಚಾಲಕನ ಕೊಲೆ :
ತನ್ನ ಬಗ್ಗೆ ತಂದೆ ಬಳಿ ಕೆಟ್ಟದ್ದಾಗಿ ಹೇಳಿದ್ದಾರೆಂದು ಟೆಂಪೋ ಚಾಲಕನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ವರ್ತೂರು ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಸರ್ಜಾಪುರ ವ್ಯಾಪ್ತಿಯ
ದೊಮ್ಮಸಂದ್ರ ನಿವಾಸಿ ಮುನಿಯಪ್ಪ(45) ಕೊಲೆಯಾದ ವ್ಯಕ್ತಿ. ಇವರು ವೃತ್ತಿಯಲ್ಲಿ ಟೆಂಪೋ ಚಾಲಕ.
ತರಕಾರಿ ವ್ಯಾಪಾರಿಯಾಗಿರುವ ದೊಮ್ಮಸಂದ್ರದ ನಿವಾಸಿ ಶ್ರೀಧರ್(24) ಕೊಲೆ ಮಾಡಿ ಪರಾರಿಯಾಗಿರುವ ಆರೋಪಿ. ಇಬ್ಬರಿಬ್ಬರು ಅಕ್ಕ-ಪಕ್ಕದ ನಿವಾಸಿಗಳು. ಶ್ರೀಧರ್ ಮದ್ಯ ಸೇವಿಸಲು ಹಲಸಳ್ಳಿ ರಸ್ತೆಯಲ್ಲಿರುವ ಎಸ್‍ಎಸ್‍ಎಸ್ ಬಾರ್‍ಗೆ ಹೋಗಿದ್ದಾಗ ಈತನ ತಂದೆಯ ಸ್ನೇಹಿತ ಮುನಿಯಪ್ಪ ಗಮನಿಸಿ, ಈ ವಿಷಯವನ್ನು ಶ್ರೀಧರ್ ತಂದೆಗೆ ನಿಮ್ಮ ಮಗ ಬಾರ್‍ಗೆ ಬಂದು ಕುಡಿಯುತ್ತಾನೆ ಎಂದು ಕೆಟ್ಟದ್ದಾಗಿ ಹೇಳಿದ್ದಾರೆ.
ರಾಜ್ಯದಲ್ಲಿ ಕೇಂದ್ರ ಗೃಹ ಸಚಿವರಿಗೇ ಇಲ್ಲ ರಕ್ಷಣೆ : ಡಿಕೆಶಿ ಟೀಕೆ
ಈ ವಿಷಯದ ಬಗ್ಗೆ ಶ್ರೀಧರ್‍ನನ್ನು ತಂದೆ ವಿಚಾರಿಸಿದಾಗ ಅಪ್ಪ, ಮಗನ ಮಧ್ಯೆ ಜಗಳವಾಗಿದೆ. ಇದೇ ಕೋಪಕ್ಕೆ ಮುನಿಯಪ್ಪ ಮೇಲೆ ಜಿದ್ದು ಸಾಧಿಸುತ್ತಿದ್ದನು. ರಾತ್ರಿ 10.30ರ ಸುಮಾರಿನಲ್ಲಿ ಎಸ್‍ಎಸ್‍ಎಸ್ ಬಾರ್ ಬಳಿ ಶ್ರೀಧರ್ ಹೋಗಿದ್ದಾಗ ಮುನಿಯಪ್ಪ ಅಲ್ಲಿಗೆ ಬಂದಿದ್ದಾರೆ. ಆ ವೇಳೆ ಶ್ರೀಧರ್ ಅವರ ಜೊತೆ ಮಾತನಾಡುತ್ತ ನೀವು ನನ್ನ ಬಗ್ಗೆ ತಂದೆಗೆ ದೂರು ಹೇಳುತ್ತೀರಾ ಎಂದು ಜಗಳವಾಡಿದ್ದಾನೆ.
ಇವರಿಬ್ಬರ ಮಧ್ಯೆ ಜಗಳ ವಿಕೋಪಕ್ಕೆ ಹೋದಾಗ ಶ್ರೀಧರ್ ಮಚ್ಚಿನಿಂದ ಮುನಿಯಪ್ಪ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ತೀವ್ರ ರಕ್ತಸ್ರಾವದಿಂದ ಕುಸಿದು ಬಿದ್ದ ಮುನಿಯಪ್ಪನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಸುದ್ದಿ ತಿಳಿದು ವರ್ತೂರು ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಫುಡ್ ಡೆಲವರಿ ಬಾಯ್ ಕೊಲೆ:
ಹಳೆ ದ್ವೇಷದ ಹಿನ್ನೆಲೆಯಲ್ಲಿ ಸ್ನೇಹಿತರಿಬ್ಬರ ಮಧ್ಯೆ ಜಗಳ ನಡೆದು ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಕೋಣನಕುಂಟೆ ನಿವಾಸಿ, ಫುಡ್ ಡೆಲವರಿ ಬಾಯ್ ಶರತ್‍ಕುಮಾರ್(25) ಕೊಲೆಯಾದ ಯುವಕ. ಆರೋಪಿ ಲೋಕೇಶ್ ಚಾಕು ಇರಿತದಿಂದ ಗಾಯಗೊಂಡಿದ್ದಾನೆ.
ಶೇ.50 ರಿಯಾಯಿತಿ ದಂಡ ವಸೂಲಿಯಲ್ಲಿ ಪೊಲೀಸರಿಂದ ನಿಯಮ ಉಲ್ಲಂಘನೆ
ರಾತ್ರಿ ಕೋಣನಕುಂಟೆ ಬಳಿ ಲೋಕೇಶ್ ಹಾಗೂ ಸಂತೋಷ್ ಮಾತನಾಡುತ್ತಾ ನಿಂತಿದ್ದಾಗ ಇವರ ಬಳಿ ಸ್ನೇಹಿತ ಶರತ್ ಕುಮಾರ್ ಬಂದಿದ್ದಾನೆ. ಆ ವೇಳೆ ಹಳೆ ದ್ವೇಷದಿಂದ ಶರತ್‍ಕುಮಾರ್ ಹಾಗೂ ಲೋಕೇಶ್ ಮಧ್ಯೆ ಜಗಳವಾಗಿದೆ.
ಇವರಿಬ್ಬರ ಮಧ್ಯೆ ಜಗಳ ವಿಕೋಪಕ್ಕೆ ಹೋದಾಗ ಶರತ್ ಚಾಕುವಿನಿಂದ ಲೋಕೇಶ್‍ಗೆ ತಲೆ ಹಾಗೂ ಕೈಗೆ ಹೊಡೆದಿದ್ದಾನೆ. ಆ ಕೋಪಕ್ಕೆ ಆತನ ಕೈಯಲ್ಲಿದ್ದ ಅದೇ ಚಾಕುವನ್ನು ಲೋಕೇಶ್ ಕಿತ್ತುಕೊಂಡು ಶರತ್ ಕುಮಾರ್‍ನ ಎದೆ, ಕುತ್ತಿಗೆ ಇನ್ನಿತರ ಭಾಗಗಳಿಗೆ ಮನಬಂದಂತೆ ಇರಿದಿದ್ದಾನೆ.
1700 ಅಡಿ ಎತ್ತರದ ಗಡಾಯಿಕಲ್ಲು ಏರಲಿರುವ ಜ್ಯೋತಿರಾಜ್
ರಕ್ತದ ಮಡುವಿನಲ್ಲಿ ಬಿದ್ದಿದ್ದ ಶರತ್‍ನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ.
ಚಾಕು ಇರಿತದಿಂದ ಲೋಕೇಶ್‍ಗೂ ಗಾಯವಾಗಿದ್ದು ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸುದ್ದಿ ತಿಳಿದು ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
food, delivery boy, tempo, driver, murder,