ಆನ್‍ಲೈನ್ ನಲ್ಲಿ ಫುಡ್ ಆರ್ಡರ್ ಮಾಡೋ ಮುನ್ನ ಹುಷಾರ್

Social Share

ಬೆಂಗಳೂರು, ನ.14- ಆನ್‍ಲೈನ್ ವಂಚನೆಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಸೈಬರ್ ಸಂಬಂಧಿತ ಅಪರಾಧಗಳಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಆನ್‍ಲೈನ್‍ನಲ್ಲಿ ಫುಡ್ ಆರ್ಡರ್ ಮಾಡಲು ಹೋಗಿ ಇಂಜಿನಿಯರ್ ಸೇರಿದಂತೆ ನಗರದ ಇಬ್ಬರು ಲಕ್ಷಗಟ್ಟಲೆ ಹಣ ಕಳೆದುಕೊಂಡಿದ್ದಾರೆ.

ಬೆಂಗಳೂರಿನ ಇಂಜಿನಿಯರ್ ದೀಪಿಕಾ ಎಂಬುವರು ಫೆಸ್‍ಬುಕ್ ಖಾತೆಯಲ್ಲಿನ ಜಾಹಿರಾತು ನೋಡಿ ಅದರಲ್ಲಿದ್ದ ಫೋನ್ ನಂಬರ್‍ಗೆ ಫುಡ್ ಆರ್ಡ್‍ರ್ ಮಾಡಲು ಕರೆ ಮಾಡಿದ್ದಾರೆ, ಕರೆ ಸ್ವೀಕರಿಸಿದ ವ್ಯಕ್ತಿ ಖಾಂದಾನಿ ರಾಜಧಾನಿ ರೆಸ್ಟೋರೆಂಟ್ ಎಂದು ಪರಿಚಯಿಸಿಕೊಂಡಿದ್ದಾರೆ.

ಆರ್ಡರ್ ಬುಕ್ ಮಾಡಲು ನಾವು ಕಳುಹಿಸುವ ಲಿಂಕ್‍ನಲ್ಲಿರುವ ರುಚಿಸಾಗರ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ ಎಂದು ಸಲಹೆ ನೀಡಲಾಗಿದೆ. ಅದನ್ನು ನಂಬಿದ ದೀಪಿಕಾ ಆ್ಯಪ್‍ಡೌನ್‍ಲೋಡ್ ಮಾಡಿಕೊಂಡು ಕ್ರೆಡಿಕ್ ಕಾರ್ಡ್ ಮಾಹಿತಿ ಹಾಕಿ ಫುಡ್‍ಆರ್ಡರ್ ಮಾಡಿದ್ದಾರೆ. ನಂತರ ಹಂತ ಹಂತವಾಗಿ ಅವರ ಖಾತೆಯಿಂದ 61 ಸಾವಿರ ರೂಪಾಯಿಗಳು ಕಳವಾಗಿದೆ.

ಮತ್ತೊಂದು ಪ್ರಕರಣದಲ್ಲಿ ಇಮ್ರಾನ್‍ಉಲ್ಲಾಬೇಗ್ ಆನ್‍ಲೈನ್‍ನಲ್ಲಿದ್ದ ನಂಬರ್‍ಗೆ ಕರೆ ಮಾಡಿ ಫುಡ್‍ಗಾಗಿ ಆರ್ಡರ್ ಮಾಡಿದ್ದಾರೆ, 250 ರೂಪಾಯಿ ಹಣವನ್ನೂ ಪಾವತಿ ಮಾಡಿದ್ದಾರೆ. ಆದರೆ ಹಣ ನಮಗೆ ಬಂದಿಲ್ಲ ಎಂದು ಕರೆ ಸ್ವೀಕರಿಸಿದ ವ್ಯಕ್ತಿ, ಆ್ಯಪ್ ಒಂದರ ಲಿಂಕ್ ಕಳುಹಿಸುತ್ತೇವೆ ಎಂದಿದ್ದಾನೆ.

ಹಿತಶತ್ರುಗಳ ಕಾಟದಿಂದ ಎಚ್ಚರಿಕೆ ಹೆಜ್ಜೆ ಇಡುತ್ತಿರುವ ಸಿದ್ದರಾಮಯ್ಯ

ಅವರ ಮಾತು ನಂಬಿ ಆಪ್ ಇನ್ಸಟಾಲ್ ಆದ ತಕ್ಷಣ ಅವರ ಕ್ರೆಡಿಟ್ ಕಾರ್ಡ್‍ನಿಂದ 2,23,858 ರೂಪಾಯಿ ಕಳುವಾಗಿದೆ. ಆಶ್ಚರ್ಯ ಎಂದರೆ ಎರಡು ಪ್ರಕರಣಗಳಲ್ಲಿ ವಂಚನೆಗೆ ಒಂದೇ ಮೊಬೈಲ್ ನಂಬರ್ ಬಳಕೆ ಮಾಡಲಾಗಿದೆ.

ಹೆಚ್ಚುತ್ತಿರುವ ಅಪರಾಧಗಳು: ಇಂಟರ್‍ನೆಟ್ ಬಳಸುವವರು ಎಷ್ಟು ಎಚ್ಚರಿಕೆಯಿಂದ ಇದ್ದರೂ ವಂಚಕರು ದಿಕ್ಕು ತಪ್ಪಿಸಿ ಹಣ ಲಪಟಾಯಿಸುತ್ತಲೇ ಇದ್ದಾರೆ. ಅನಕ್ಷರಸ್ಥರಿಗಿಂತಲೂ ಶಿಕ್ಷಿತ ಹಾಗೂ ವಿದ್ಯಾವಂತರೇ ಹೆಚ್ಚು ವಂಚನೆಗೆ ಒಳಗಾಗುತ್ತಿರುವುದು ಸವಾಲನ್ನು ಹೆಚ್ಚಿಸಿದೆ.

ಸಿಇಎನ್ ಪೊಲೀಸ್ ಠಾಣೆಗಳಲ್ಲಿ ಪ್ರತಿ ದಿನ ಒಂದಲ್ಲ ಒಂದು ವಂಚನೆ ಪ್ರಕರಣ ದಾಖಲಾಗುತ್ತಲೇ ಇದೆ. ಸಾಮಾನ್ಯ ಪೊಲೀಸ್ ಠಾಣೆಯಲ್ಲಿ ವರ್ಷಕ್ಕೆ 250ರಿಂದ 300 ಪ್ರಕರಣಗಳು ದಾಖಲಾದರೆ, ಸೈಬರ್ ಕ್ರೈಮ್ ಠಾಣೆಗಳಲ್ಲಿ ದಾಖಲಾಗುವ ಪ್ರಕರಣಗಳ ಸಂಖ್ಯೆ ಸಾವಿರ ದಾಟುತ್ತಿದೆ. ಈವರೆಗೂ ಉದ್ಯೋಗ, ಬಿಲ್ ವಾವತಿ, ಬ್ಯಾಂಕಿಂಗ್ ಸೇವೆ, ಹೆಚ್ಚಿನ ಲಾಭಾಂಶ, ಬಿಟ್‍ಕಾಯಿನ್ ಹೆಸರಿನಲ್ಲಿ ಜನ ಸಾಮಾನ್ಯರ ಹಣ ಲೂಟಿಯಾಗುತ್ತಿತ್ತು. ಈಗ ಆಹಾರ ಕ್ಷೇತ್ರಕ್ಕೂ ವಂಚಕರು ನುಸುಳಿದ್ದಾರೆ.

ನಕಲಿ ಆ್ಯಪ್‍ಗಳು: ಬೆಂಗಳೂರಿನಲ್ಲಿ ಆನ್‍ಲೈನ್ ಫುಡ್ ಆರ್ಡರ್ ಪಡೆದುಕೊಳ್ಳುವ ಹೋಟೆಲ್‍ಗಳ ಹೆಸರಿನಲ್ಲಿ ನಕಲಿ ಆ್ಯಪ್‍ಗಳನ್ನು ಸೃಷ್ಟಿಸುತ್ತಾರೆ. ಫೇಸ್ ಬುಕ್, ಇನ್‍ಸ್ಟಾಗ್ರಾಮ್, ಟ್ವೀಟರ್ ಸೇರಿ ಹಲವು ಕಡೆ ಈ ಮಾಹಿತಿಯ ಜಾಹಿರಾತುಗಳು ಪ್ರಕಟವಾಗುತ್ತವೆ.

ಆನ್‍ಲೈನ್‍ನಲ್ಲಿ ಫುಡ್ ಆರ್ಡರ್ ಮಾಡುವವರು ಸಾಮಾಜಿಕ ಜಾಲತಾಣದಲ್ಲಿ ಆಕರ್ಷಕವಾಗಿ ಕಾಣುವ ಆಹಾರ ತರಿಸಿಕೊಳ್ಳಲು ಬುಕ್ಕಿಂಗ್ ಆಫ್ಸನ್‍ಗೆ ಹೋಗುತ್ತಾರೆ. ಅಲ್ಲಿ ಕೆಲ ಮೊಬೈಲ್ ನಂಬರ್ ಲಭ್ಯವಾಗುತ್ತದೆ. ಅದಕ್ಕೆ ಕರೆ ಮಾಡಿದಾಗ ಬುಕ್ಕಿಂಗ್ ಸ್ವೀಕರಿಸಲಾಗಿದೆ, ಹಣ ಪಾವತಿ ಮಾಡಿ ಎಂದು ಸೂಚನೆ ಬರುತ್ತದೆ. ಅದನ್ನು ನಂಬಿ ಗ್ರಾಹಕರು ತಮ್ಮ ಯುಪಿಐ ಆಧಾರಿತ ಮೊಬೈಲ್ ಅಪ್ಲಿಕೇಷನ್‍ಗಳಿಂದ ಗ್ರಾಹಕರು ಹಣ ಪಾವತಿ ಮಾಡುತ್ತಾರೆ.

ಇನ್ನೂ ಕೆಲವರು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಬಳಕೆ ಮಾಡುತ್ತಾರೆ. ಹಣ ಪಾವತಿಯಾದ ಬಳಿಕ ಆ ಕಡೆಯಿಂದ ವ್ಯಕ್ತಿ ವಾಪಾಸ್ ಕರೆ ಮಾಡುತ್ತಾರೆ. ನಿಮ್ಮ ಹಣ ನಮ್ಮ ಖಾತೆಗೆ ಜಮಾ ಆಗಿಲ್ಲ. ನಾವು ಹೋಟೆಲ್ ಆ್ಯಪ್‍ನ ಲಿಂಕ್ ಕಳುಹಿಸುತ್ತೇವೆ, ಅದನ್ನು ಇನ್‍ಸ್ಟಾಲ್ ಮಾಡಿಕೊಳ್ಳಿ ಫುಡ್ ಆರ್ಡರ್ ಸುಲಭವಾಗಲಿದೆ, ಜೊತೆಗೆ ಕೆಲ ರಿಯಾಯಿತಿಗಳು ದೊರೆಯಲಿವೆ ಎಂದು ಹುರಿ ದುಂಬಿಸಲಾಗುತ್ತದೆ.

ಪ್ರವೀಣ್ ನೆಟ್ಟಾರು ಹತ್ಯೆ ಹಿಂದೆ ನಿಷೇಧಿತ ಪಿಎಫ್‍ಐ ಸಂಘಟನೆ ಕೈವಾಡ

ಇದನ್ನು ನಂಬಿ ಅನಾಮಧೇಯ ವ್ಯಕ್ತಿಗಳು ಕಳುಹಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಮುಗಿಯಿತು. ನಿಮ್ಮ ಫೋನ್ ವಂಚಕರ ಹ್ಯಾಕ್ ಬಲೆಗೆ ಸಿಲುಕುತ್ತದೆ. ವಂಚಕರು ಕಳುಹಿಸುವ ಲಿಂಕ್‍ನಲ್ಲಿ ಹೋಟೆಲ್‍ಗಳ ಒರಿಜಿನಲ್ ಆ್ಯಪ್‍ನ ತಲೆಯ ಮೇಲೆ ಹೊಡೆದಂತೆ ನಕಲಿ ಆ್ಯಪ್‍ಗಳನ್ನು ಸೃಷ್ಟಿಸಲಾಗಿರುತ್ತದೆ. ಅದನ್ನು ಒರಿಜಿನಲ್ ಆ್ಯಪ್ ಎಂದು ನಂಬುವ ಗ್ರಾಹಕರು ಇನ್‍ಸ್ಟಾಲ್ ಮಾಡಿಕೊಳ್ಳುತ್ತಾರೆ. ಅಷ್ಟಾಗುತ್ತಿದ್ದಂತೆ ಆರೋಪಿಗಳು ಗ್ರಾಹಕರ ಖಾತೆಗಳಿಗೆ ಕನ್ನ ಹಾಕುತ್ತಾರೆ. ಹಂತ ಹಂತವಾಗಿ ಖಾತೆಯಿಂದ ಹಣ ಲಪಟಾಯಿಸುತ್ತಾರೆ.

ಅಷ್ಟೇ ಅಲ್ಲದೆ ಮೇಲ್, ವಾಟ್ಸ್ ಅಪ್ ಸೇರಿದಂತೆ ಹಲವು ಆ್ಯಪ್‍ಗಳಿಗೂ ನುಸಳಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕದಿಯುತ್ತಾರೆ. ಕೆಲಸದ ಒತ್ತಡ ಅಥವಾ ಉದಾಸೀನತೆಯಿಂದ ಕೊಂಚ ಯಾಮಾರಿದರೂ ಹಣವಷ್ಟೆ ಅಲ್ಲ, ವೈಯಕ್ತಿಕ ಮಾಹಿತಿಗಳು ಸೋರಿಕೆಯಾಗಿ ಭಾರೀ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ. ಅದರಲ್ಲೂ ಓದಿದ ಪರಿಣಿತರನ್ನೇ ದಿಕ್ಕು ತಪ್ಪಿಸಲಾಗುತ್ತಿದೆ.

ವಂಚಕರು ವರ್ಚವಲ್ ಮಾದರಿಯಲ್ಲಿ ತಲೆ ಬುಡ ಸಿಗದಂತೆ ಬಲೆ ಎಣಿದಿರುತ್ತಾರೆ. ದಾಖಲಾದ ಬಹುತೇಕ ಪ್ರಕರಣಗಳಲ್ಲಿ ಸುಳಿವು ಸಿಗದೆ ಇತ್ಯಥ್ರ್ಯವಾಗದೆ ಉಳಿದಿರುವ ಸಂಖ್ಯೆಗಳೆ ಹೆಚ್ಚಾಗಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಸವಾಲಾಗಿ ಪರಿಗಣಿಸಿರುವ ಸೈಬರ್ ಅಪರಾಧಗಳು ಜನ ಸಾಮಾನ್ಯರನ್ನು ಸುಲಿಗೆ ಮಾಡುತ್ತಿವೆ.

ಬ್ರೇಕಿಂಗ್ : ನಂದಿನಿ ಹಾಲಿನ ಪರಿಷ್ಕರಣೆ, ರೈತರಿಗೆ ಬಂಪರ್

ಇನ್ನಾದರೂ ಎಚ್ಚೆತ್ತುಕೊಂಡು ತಮ್ಮ ಅಗತ್ಯಕ್ಕೆ ಬಳಸುವ ಆ್ಯಪ್‍ಗಳ ಬಗ್ಗೆ ಜಾಗೃತರಾಗಿ ವಂಚನೆಯಿಂದ ತಪ್ಪಿಸಿಕಳ್ಳಬಹುದಾಗಿದೆ.

Articles You Might Like

Share This Article