ಚಳಿಗಾಲದ ಅಲರ್ಜಿಯಿಂದ ಪಾರಾಗಬೇಕಾದರೆ ಈ 6 ಆಹಾರ ಸೇವಿಸಿ

Social Share

ಬೆಂಗಳೂರು,ನ.7-ನವಂಬರ್, ಡಿಸಂಬರ್‌ನಲ್ಲಿ ಚುಮು ಚುಮು ಚಳಿ ಮಾಮೂಲು. ಥಂಡಿ ಸಮಯದಲ್ಲಿ ನಾವು ನಮ್ಮ ಆರೋಗ್ಯದ ಬಗ್ಗೆ ಎಚ್ಚರವಹಿಸದಿದ್ದರೆ ನಾನಾ ರೋಗಗಳಿಗೆ ತುತ್ತಾಗುವುದು ಸಹಜ. ಇಂತಹ ಸಮಯದಲ್ಲಿ ನಾವು ಸಮಯೋಚಿತ ಆಹಾರ ಸೇವನೆ ಮಾಡುವ ಮೂಲಕ ನಾವು ಹಾಗೂ ನಮ್ಮ ಮಕ್ಕಳ ಆರೋಗ್ಯ ಕಾಪಾಡಿಕೊಳ್ಳಬಹುದು ಹಾಗಾದರೆ, ಚಳಿಗಾಲದಲ್ಲಿ ಯಾವ ರೀತಿಯ ಆಹಾರ ಸೇವನೆ ಮಾಡಬೇಕು ಎಂದು ತಜ್ಞರು ನೀಡಿರುವ ಸಲಹೆಯನ್ನು ಎಲ್ಲರೂ ಪಾಲಿಸುವ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ.

ಚಳಿ ಸಂದರ್ಭದಲ್ಲಿ ಅಲರ್ಜಿ ಎಂಬುದು ಸರ್ವೇ ಸಾಮಾನ್ಯ. ಇಂತಹ ಅಲರ್ಜಿಯಿಂದ ಪಾರಾಗಬೇಕಾದರೆ, ನಾವು ನಮ್ಮ ಅಡುಗೆ ಮನೆಯಲ್ಲೇ ಸಿಗುವ ವಸ್ತುಗಳು ಮತ್ತು ಹಣ್ಣುಗಳನ್ನು ಸೇವಿಸುವ ಮೂಲಕ ಅಲರ್ಜಿಯಿಂದ ದೂರವಾಗಬಹುದಾಗಿದೆ.

ಚಳಿಗಾಲದ ಅಲರ್ಜಿಯಿಂದ ಪಾರಾಗಬೇಕಾದರೆ ನಾವು ಈ ಕೆಳಕಂಡ ಆಹಾರಗಳನ್ನು ಸೇವನೆ ಮಾಡಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.

ರಾಜ್ಯದಲ್ಲಿ ಉಪಚುನಾವಣೆ ನಡೆಸದಿರಲು ಆಯೋಗ ನಿರ್ಧಾರ ..?

ಸಿಟ್ರಸ್ ಹಣ್ಣುಗಳು: ಕಿತ್ತಳೆ ಹಾಗೂ ದ್ರಾಕ್ಷಿಹಣ್ಣುಗಳಲ್ಲಿ ಸಿಟ್ರಸ್ ಅಂಶ ಹೇರಳವಾಗಿದೆ. ಹೀಗಾಗಿ ನಾವು ಚಳಿಗಾಲದಲ್ಲಿ ಇಂತಹ ಹಣ್ಣುಗಳ ಸೇವನೆ ಮಾಡುವುದು ಆರೋಗ್ಯಕರವಾಗಿದೆ. ನಮ್ಮಲ್ಲಿ ಕೆಲವರು ಸಿಟ್ರಸ್ ಹಣ್ಣುಗಳು ಕೆಮ್ಮು ಮತ್ತಿತರ ರೋಗಗಳಿಗೆ ಕಾರಣವಾಗುತ್ತವೆ ಎಂದು ಭಾವಿಸಿದ್ದಾರೆ. ಇದು ತಪ್ಪು, ಮೂಗು ಸೋರುವಿಕೆ ಮತ್ತು ಸೀನಿನಂತಹ ಅಲರ್ಜಿ ಲಕ್ಷಣಗಳಿಗೆ ಸಿಟ್ರಸ್ ಹಣ್ಣುಗಳು ಪರಿಣಾಮಕಾರಿಯಾಗಿವೆ. ಹೀಗಾಗಿ ಚಳಿಗಾಲದ ಸಂದರ್ಭದಲ್ಲಿ ನಿಮ್ಮ ವೈದ್ಯರ ಸಲಹೆ ಮೇರೆಗೆ ಹೇರಳವಾಗಿ ಸಿಟ್ರಸ್ ಹಣ್ಣುಗಳನ್ನು ಸೇವಿಸುವುದು ಅತ್ಯಗತ್ಯವಾಗಿದೆ.

ಅನಾನಸ್: ಈ ಹಣ್ಣಿನಲ್ಲಿ ವಿಟಮಿನ್ ಸಿ, ಮ್ಯಾಂಗನೀಸ್ ಮತ್ತು ಉರಿಯೂತದ ಕಿಣ್ವ ನಿವಾರಿಸುವ ಪೋಷಕಾಂಶಗಳು ತುಂಬಿರುತ್ತದೆ. ಅನೇಕ ವರ್ಷಗಳಿಂದ, ಪ್ರಕೃತಿಚಿಕಿತ್ಸಕ ವೈದ್ಯರು ಉರಿಯೂತದ ಕಿಣ್ವ ಕಾಯಿಲೆಗಳಿಗೆ ಪರ್ಯಾಯ ಚಿಕಿತ್ಸೆಯಾಗಿ ಈ ಹಣ್ಣನ್ನು ಬಳಸುತ್ತಾರೆ, ಅಲರ್ಜಿ ಸಂದರ್ಭದಲ್ಲಿ ಉರಿಯೂತ ಮಾಮೂಲು ಹೀಗಾಗಿ ಚಳಿಗಾಲದಲ್ಲಿ ಅನಾನಸ್ ಸೇವನೆ ಸೂಕ್ತವಾಗಿದೆ.

ಈರುಳ್ಳಿ: ಈರುಳ್ಳಿಯಲ್ಲಿ ಬಯೋಫ್ಲೇವನಾಯ್ಡ್‍ಗಳು ಹೇರಳವಾಗಿವೆ. ಕೆಲವು ಅಧ್ಯಯನಗಳ ಪ್ರಕಾರ, ಈರುಳ್ಳಿ ಸೇವನೆ ಮೂಲಕ ಅಲರ್ಜಿಗೆ ಪ್ರತಿಕ್ರಿಯಿಸುವ ಜೀವಕೋಶಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದು. ಉರಿಯೂತವನ್ನು ಕಡಿಮೆ ಮಾಡಲು ಮತ್ತು ಅಲರ್ಜಿಯ ಲಕ್ಷಣಗಳನ್ನು ನಿವಾರಿಸುವಲ್ಲಿ ವಿಶೇಷವಾಗಿ ಈರುಳ್ಳಿ ಪರಿಣಾಮಕಾರಿಯಾಗಿದೆ.

ಸೇಬುಗಳು: ಈರುಳ್ಳಿಯಲ್ಲಿರುವಂತೆ ಸೇಬುಗಳಲ್ಲಿ ಕ್ವೆರ್ಸೆಟಿನ್ ಹೇರಳವಾಗಿದೆ. ನೀವು ಸ್ರವಿಸುವ ಮೂಗು, ಸೀನುವಿಕೆ ಮತ್ತು ಕಣ್ಣುಗಳ ತುರಿಕೆಯಂತಹ ಅಲರ್ಜಿಯ ಲಕ್ಷಣಗಳನ್ನು ಹೊಂದಿದ್ದರೆ. ಸೇಬು ಸೇವನೆಯಿಂದ ಅಲರ್ಜಿ ನಿವಾರಣೆ ಮಾಡಿಕೊಳ್ಳಬಹುದು. ಕ್ವೆರ್ಸೆಟಿನ್ ನೈಸರ್ಗಿಕ ಆಂಟಿಹಿಸ್ಟಾಮೈನ್ ಆಗಿ ಕಾರ್ಯನಿರ್ವಹಿಸುತ್ತದೆ. ಕ್ವೆರ್ಸೆಟಿನ್ ನೈಸರ್ಗಿಕವಾಗಿ ಸಂಭವಿಸುವ ಆಂಟಿಹಿಸ್ಟಮೈನ್ ಆಗಿದ್ದರೂ, ಅಲರ್ಜಿಯ ಚಿಕಿತ್ಸೆಯಲ್ಲಿ ಅದರ ಪರಿಣಾಮಕಾರಿಯಾಗಿದೆ.

ಅಪಾಯಕಾರಿ ರಾಸಾಯನಿಕವನ್ನು ನದಿಗೆ ಸುರಿಯುತ್ತಿದ್ದ ಟ್ಯಾಂಕರ್ ಚಾಲಕನ ಬಂಧನ

ಅರಿಶಿನ: ನಿಮ್ಮ ಆಹಾರದಲ್ಲಿ ಅರಿಶಿನ ಸೇರಿಸುವುದರಿಂದ ಋತುಮಾನದ ಅಲರ್ಜಿ ನಿರ್ವಹಣೆ ಮಾಡಬಹುದಾಗಿದೆ. ಅರಿಶಿನದ ಸಕ್ರಿಯ ಘಟಕವಾದ ಕಕ್ರ್ಯುಮಿನ್ ಇಲಿಗಳಲ್ಲಿ ಹಿಸ್ಟಮೈನ್ ಬಿಡುಗಡೆಯನ್ನು ತಡೆಯುತ್ತದೆ, ಇದು ಅಲರ್ಜಿಯ ಪ್ರತಿಕ್ರಿಯೆಗಳನ್ನು ಪ್ರಚೋದಿಸುವ ವಸ್ತುವಾಗಿದೆ. ಮಾನವ ಅಧ್ಯಯನಗಳ ಕೊರತೆಯ ಹೊರತಾಗಿಯೂ, ಕಕ್ರ್ಯುಮಿನ್ ಅಲರ್ಜಿಯ ಲಕ್ಷಣಗಳನ್ನು ಸರಾಗಗೊಳಿಸುವ ಭರವಸೆಯನ್ನು ತೋರಿಸುತ್ತದೆ ಮತ್ತು ಊಟದ ಪರಿಮಳವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.

ಒಮೆಗಾ: ಚಳಿಗಾಲದ ಮಿತ್ರ ಎಂದೇ ಒಮೆಗಾವನ್ನು ಪರಿಗಣಿಸಲಾಗಿದೆ. ಸಲ್ಮಾನ್, ಮ್ಯಕೆರೆಯಲ್, ಸಾರ್ಡೀನ್‍ನಂತಹ ಮೀನುಗಳಲ್ಲಿ ಒಮೆಗಾ-3 ಮತ್ತು ಒಮೆಗಾ-6 ಪೋಷಕಾಂಶಗಳು ಹೇರಳವಾಗಿರುವುದರಿಂದ ಒಮೆಗಾ ಅಂಶವಿರುವ ಆಹಾರ ಪದಾರ್ಥ ಬಳಕೆ ಚಳಿಗಾಲದಲ್ಲಿ ಸೂಕ್ತ ಎಂಬ ಅಭಿಪ್ರಾಯವಿದೆ.

ಒಟ್ಟಾರೆ, ಚಳಿಗಾಲದಲ್ಲಿ ಮಕ್ಕಳು,ಹಿರಿಯರನ್ನು ಇನ್ನಿಲ್ಲದಂತೆ ಕಾಡುವ ಅಲರ್ಜಿ ಮತ್ತಿತರ ಸೋಂಕು ರೋಗಗಳಿಂದ ಕಾಪಾಡಿಕೊಳ್ಳಬೇಕಾದರೆ ಮೇಲಿನ 6 ಆಹಾರ ಪದಾರ್ಥಗಳನ್ನು ಬಳಕೆ ಮಾಡಿಕೊಳ್ಳುವುದು ಸೂಕ್ತ ಎಂದು ತಜ್ಞ ವೈದ್ಯರು ಸಲಹೆ ನೀಡಿದ್ದಾರೆ.

Articles You Might Like

Share This Article