ಬಲವಂತದಿಂದ ಇಸ್ಲಾಂ ಧರ್ಮಕ್ಕೆ ಮತಾಂತರ : ಮಾಜಿ ಕಾಪೋರೇಟರ್ ಸೇರಿ ಮೂವರು ಅರೆಸ್ಟ್

Social Share

ಬೆಂಗಳೂರು, ಅ.13- ಮಂಡ್ಯ ಜಿಲ್ಲೆಯ ಯುವಕನನ್ನು ಬಲವಂತದಿಂದಕರೆದೊಯ್ದು ಬೆದರಿಸಿ ಖತ್ನಾ ಮಾಡಿಸಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಿರುವ ಪ್ರಕರಣಕ್ಕೆ ಸಂಧಿಬಂಸಿದಂತೆ ಬನಶಂಕರಿ ಠಾಣೆ ಪೊಲೀಸರು ಮಾಜಿ ಕಾಪೋರೇಟರ್ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಮಾಜಿ ಕಾಪೋರೇಟರ್ ಅನ್ವರ್ ಪಾಷಾ, ನಯಾಜ್ ಪಾಷಾ ಮತ್ತು ಹಾಜೀ ಸಾಬ್ ಬಂಧಿತರು.

ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ನಿವಾಸಿ ಶ್ರೀಧರ್‍ನನ್ನು ಬಲವಂತವಾಗಿ ಮತಾಂತರ ಮಾಡಿರುವ ಬಗ್ಗೆ ಹಬ್ಬಳ್ಳಿಯ ನವನಗರದಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು, ಮಾಜಿ ಕಾಪೆರ್ರೇ ಟರ್ ಸೇರಿದಂತೆ ಮೂವರನ್ನು ಬಂಧಿಸಿ ವಿಚಾರಣೆಗೊಳಪಡಿಸಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

ಘಟನೆ ವಿವರ: ಮೂಲತಃ ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ನಿವಾಸಿ ಶ್ರೀಧರ್ ಅವರ ತಂದೆ-ತಾಯಿ ಮೃತಪಟ್ಟಿದ್ದು , ಇವರ ಜಮೀನು ದೊಡ್ಡಪ್ಪನ ಹೆಸರಿನಲ್ಲಿರುವುದರಿಂದ ಜಮೀನು ಪಡೆದುಕೊಳ್ಳಲು ಕೇಸ್ ಹಾಕಿದ್ದರಿಂದ ಚಿಕ್ಕಪ್ಪನಿಂದ ತೊಂದರೆಯಾದ ಕಾರಣ ಸೈಬರ್ ಸೆಂಟರ್‍ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು.

ಕೊಪ್ಪದಲ್ಲಿ ಟೀ ಅಂಗಡಿಯಿಟ್ಟುಕೊಂಡಿರುವ ಮೊದಲೇ ಪರಿಚಯವಿದ್ದ ಮುಸಲ್ಮಾನ ಯುವಕನ ಬಳಿ ತನ್ನ ಕಷ್ಟ ಹೇಳಿಕೊಂಡಾಗ ತನಗೆ ಗುರುಗಳ ಪರಿಚಯವಿದೆ. ನಿನ್ನನ್ನು ಅವರ ಬಳಿ ಕರೆದುಕೊಂಡು ಹೋಗುವುದಾಗಿ ತಿಳಿಸಿದ್ದಾನೆ.

ಆತನ ಮಾತು ನಂಬಿ ಅವರೊಂದಿಗೆ ಶ್ರೀಧರ್ ಹೋಗಿದ್ದು , ಇಲಿಯಾಸ್ ನಗರದಲ್ಲಿ ಖಾಲಿದ್ ಡಾಕ್ಟರ್, ನದೀಮ್, ನಯಾಜ್ ಪಾಷನನ್ನು ಪರಿಚಯ ಮಾಡಿಸಿ ನಿಮಗೆ ಸಹಾಯ ಮಾಡುವುದಾಗಿ ಹೇಳಿ ನಂಬಿಸಿದ್ದಾನೆ. ಇಲಿಯಾಸ್ ನಗರದಲ್ಲಿ ಬಲವಂತವಾಗಿ ಖತ್ನಾ ಮಾಡಿಸಿ ನಂತರ ಹೇಳಿದ ಹಾಗೆ ಕೇಳಿಕೊಂಡು ಇರಬೇಕು ಎಂದು ಬೆದರಿಕೆ ಹಾಕಿ ಊಟಕ್ಕೆ ಬೇಯಿಸಿದ್ದ ದನದ ಮಾಂಸ ಕೊಡುತ್ತಾರೆ.

ನನಗೆ ಇದು ಇಷ್ಟವಿಲ್ಲ ಎಂದು ಶ್ರೀಧರ್ ಹಳಿದರೂ ಕೇಳದೆ, ಹಾಗೆಲ್ಲಾ ಹೇಳಬಾರದು. ಊಟ ಮಾಡದೆ ಹಾಗೇ ಹೋಗುವ ಹಾಗಿಲ್ಲ ಎಂದು ಹೇಳಿ ರಿವಾಲ್ವರನ್ನು ತೋರಿಸಿ ಬೆದರಿಸಿದ್ದಾರೆ. ಅಷ್ಟಕ್ಕೆ ಸುಮ್ಮನಾಗದೆ ಶ್ರೀಧರ್ ಅವರ ಕೈಗೆ ರಿವಾಲ್ವರ್ ಕೊಟ್ಟು ಫೋಟೋ ತೆಗೆದು, ನೀನೇನಾದರೂ ಮಾತನಾಡಿದರೆ ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಫ್ಲೋಡ್ ಮಾಡಿ ನೀನು ಟೆರರಿಸ್ಟ್ ಎಂದು ಬಿಂಬಿಸುವುದಾಗಿ ಹೇಳಿದ್ದಾರೆ.

ನಂತರ ಒಂದೂವರೆ ತಿಂಗಳು ತಿರುಪತಿಗೆ ಕಳುಹಿಸಿ ಕುರಾನ್ ಓದುವಂತೆ ಹಾಗೂ ನಮಾಜ್ ಮಾಡುವಂತೆ ಒತ್ತಡ ಹಾಕಿ ಬೇರೆ ಯಾವ ದೇವರನ್ನು ಪೂಜಿಸುವಂತಿಲ್ಲ ಎಂದು ಬೆದರಿಸಿದರು ಎಂದು ಶ್ರೀಧರ್ ಹೇಳಿದ್ದಾರೆ.

Articles You Might Like

Share This Article