ಬೆಂಗಳೂರು,ಫೆ.7- ರಸ್ತೆಯಲ್ಲಿ ಮಚ್ಚು ಹಿಡಿದು ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸುತ್ತಿದ್ದ ವಿದೇಶಿ ಪ್ರಜೆಯನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಠಾಣೆ ಮುಂಭಾಗದ ಮುಖ್ಯರಸ್ತೆಯಲ್ಲಿ ನಿನ್ನೆ ಸಂಜೆ 4.30ರ ಸುಮಾರಿನಲ್ಲಿ ಐವರಿ ಕೋಸ್ಟ್ ಪ್ರಜೆ ಮಚ್ಚು ಹಿಡಿದು ಓಡಾಡುತ್ತಾ ಶಾಂತಿ-ಸುವ್ಯವಸ್ಥೆಗೆ ಧಕ್ಕೆಯುಂಟು ಮಾಡುತ್ತಾ ಸಾರ್ವಜನಿಕರನ್ನು ಬೆದರಿಸುತ್ತಿದ್ದನು.
ವಿಷಯ ತಿಳಿದು ಎಎಸ್‍ಐ ಆತನನ್ನು ಹಿಡಿಯಲು ಮುಂದಾಗುತ್ತಿದ್ದಂತೆ ಅವರ ಮೇಲೆ ಕೈನಿಂದ ಹಲ್ಲೆ ಮಾಡಿದ್ದಾನೆ. ಆದರೂ ಪ್ರಾಣವನ್ನು ಲೆಕ್ಕಿಸದೆ ಪೊಲೀಸರು ಆತನನ್ನು ಹಿಡಿದು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಯಾವ ವೀಸಾದ್ಲಲಿ ಆತ ಭಾರತಕ್ಕೆ ಬಂದಿದ್ದಾನೆ. ಬೆಂಗಳೂರಿಗೆ ಯಾವಾಗ ಬಂದ, ಎಲ್ಲಿ ವಾಸವಾಗಿದ್ದಾನೆ, ವೃತ್ತಿ ಏನು ಎಂಬಿತ್ಯಾದಿ ವಿಷಯಗಳನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.
