2ನೇ ದಿನವೂ ವಿದೇಶಿ ರಾಯಭಾರಿಗಳಿಂದ ಕಾಶ್ಮೀರ ಪರಿಸ್ಥಿತಿ ಪರಾಮರ್ಶೆ
ಶ್ರೀನಗರ, ಜ.10(ಪಿಟಿಐ)-ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ ನಂತರ ವಾಸ್ತವ ಪರಿಸ್ಥಿತಿ ಅಧ್ಯಯನಕ್ಕಾಗಿ ಕಣಿವೆ ಪ್ರಾಂತ್ಯದಲ್ಲಿರುವ ಅಮೆರಿಕ ಸೇರಿದಂತೆ 16 ದೇಶಗಳ ರಾಯಭಾರಿಗಳು ಎರಡನೇ ದಿನವಾದ ಇಂದು ಸಹ ಪರಾಮರ್ಶೆ ನಡೆಸಿದರು.
ಅಮೆರಿಕ, ಬಾಂಗ್ಲಾದೇಶ, ವಿಯೆಟ್ನಾಂ, ನಾರ್ವೆ, ಮಾಲ್ಡಿವ್ಸ್, ದಕ್ಷಿಣ ಕೊರಿಯಾ, ಮೊರೊಕ್ಕೂ ಮತ್ತು ನೈಜೀರಿಯಾ ಸೇರಿದಂತೆ 16 ರಾಷ್ಟ್ರಗಳ ರಾಜತಾಂತ್ರಿಕರು ಈ ನಿಯೋಗದಲ್ಲಿದ್ದಾರೆ. ಜಮ್ಮು ಸೇರಿದಂತೆ ಕೆಲವೆಡೆ ನಿನ್ನೆ ಈ ತಂಡ ಕಣಿವೆ ಪ್ರಾಂತ್ಯದ ಪರಿಸ್ಥಿತಿಯನ್ನು ಖುದ್ದಾಗಿ ಅವಲೋಕಿಸಿತ್ತು. ಅಮೆರಿಕಕ್ಕೆ ಭಾರತದ ರಾಯಭಾರಿಯಾಗಿರುವ ಕೆನ್ನೆತ್ ಐ. ಜೆಸ್ಟರ್ ಅವರೂ ಸಹ ಈ ನಿಯೋಗದಲ್ಲಿದ್ದು, ಅಧ್ಯಯನ ಮುಂದುವರಿಸಿದ್ದಾರೆ. ಎರಡು ದಿನಗಳ ಕಾಲ ಈ ಪ್ರಕ್ರಿಯೆ ಇಂದು ಸಂಜೆ ಪೂರ್ಣಗೊಳ್ಳಲಿದೆ.
ಕೇಂದ್ರ ಸರ್ಕಾರ ಆಗಸ್ಟ್ 5ರಂದು ಆರ್ಟಿಕಲ್ 370 ಮತ್ತು 35ಎ ರದ್ದುಗೊಳಿಸಿದ ತರುವಾಯ ಇದು ಜಮ್ಮು ಮತ್ತು ಕಾಶ್ಮೀರಕ್ಕೆ ರಾಜತಾಂತ್ರಿಕರ ಪ್ರಥಮ ಭೇಟಿಯಾಗಿದೆ.
ದೆಹಲಿಯಿಂದ 16 ರಾಯಭಾರಿಗಳು ಮತ್ತು ರಾಜತಾಂತ್ರಿಕರ ನಿಯೋಗವು ನಿನ್ನೆ ಬೆಳಗ್ಗೆ ವಿಶೇಷ ಲಘು ವಿಮಾನದಲ್ಲಿ ಶ್ರೀನಗರದ ತಾಂತ್ರಿಕ ವಿಮಾನ ನಿಲ್ದಾಣಕ್ಕೆ ಆಗಮಿಸಿತು. ಉನ್ನತಾಧಿಕಾರಿಗಳು ಈ ತಂಡವನ್ನು ಸ್ವಾಗತಿಸಿದರು.
ಶ್ರೀನಗರದಿಂದ ಜಮ್ಮುವಿಗೆ ತೆರಳಿದ ನಿಯೋಗ ಆರ್ಟಿಕಲ್ 370 ರದ್ದತಿ ನಂತರ ಚಳಿಗಾಲದ ರಾಜಧಾನಿಯಲ್ಲಿ ನೆಲೆಸಿರುವ ಪರಿಸ್ಥಿತಿಯನ್ನು ಪರಾಮರ್ಶಿಸಿತು ಬಳಿಕ ಲೆಫ್ಟಿನೆಂಟ್ ಗೌರ್ನರ್ ಜಿ.ಸಿ. ಮುರ್ಮು ಮತ್ತು ಸಮಾಜದ ವಿವಿಧ ಸದಸ್ಯರನ್ನು ಭೇಟಿ ಮಾಡಿ ಚರ್ಚಿಸಿದ್ದರು.
ಅಮೆರಿಕ, ಬಾಂಗ್ಲಾದೇಶ, ವಿಯೆಟ್ನಾಂ, ನಾರ್ವೆ, ಮಾಲ್ಡಿವ್ಸ್, ದಕ್ಷಿಣ ಕೊರಿಯಾ, ಮೊರೊಕ್ಕೂ ಮತ್ತು ನೈಜೀರಿಯಾ ಸೇರಿದಂತೆ 16 ರಾಷ್ಟ್ರಗಳ ರಾಜತಾಂತ್ರಿಕರು ಈ ನಿಯೋಗದಲ್ಲಿದ್ದಾರೆ. ನಾಳೆಯೂ ಸಹ ಪರಿಸ್ಥಿತಿ ಅವಲೋಕನ ಮುಂದುವರಿಯಲಿದೆ.