ವಿದೇಶಿ ಪ್ರಜೆಗೆ ಚಾಕು ತೋರಿಸಿ ಕಾರು ದರೋಡೆ: ಆರೋಪಿ ಸೆರೆ

Social Share

ಬೆಂಗಳೂರು,ನ.15- ವಿದೇಶಿ ಪ್ರಜೆಗೆ ಚಾಕು ತೋರಿಸಿ ಬೆದರಿಸಿ ಕಾರು ದರೋಡೆ ಮಾಡಿದ ಆರೋಪಿಯನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿ ಎರಡು ಲಕ್ಷ ರೂ. ಬೆಲೆಯ ಹುಂಡೈ ವರ್ನಾ ಕಾರು ಮತ್ತು ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಕೆ.ಆರ್.ಪುರಂನ ದರ್ಗಾ ಮೊಹಲ್ಲಾದ 2ನೇ ಕ್ರಾಸ್ ನಿವಾಸಿ ಸಯ್ಯದ್ ಯಾಸಿನ್ ಅಲಿಯಾಸ್ ಯಾಸಿನ್ (26) ಬಂಧಿತ ಆರೋಪಿ. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಮೊಹಮ್ಮದ್ ಮನ್ಸೂರ್‍ಗಾಗಿ ಪೊಲೀಸರು ಶೋಧ ಕೈಗೊಂಡಿದ್ದಾರೆ.

ಸುಡಾನ್ ದೇಶದ ಪ್ರಜೆ ಯೊಬ್ಬರು ಕೆಲಸದ ನಿಮಿತ್ತ ತಮ್ಮ ಹುಂಡೈ ವರ್ನಾ ಕಾರಿನಲ್ಲಿ ನವೆಂಬರ್ ಒಂದರ ರಾತ್ರಿ ಹೋಗುತ್ತಿದ್ದಾಗ ಇಬ್ಬರು ದರೋಡೆಕೋರರು ಕಾರನ್ನು ಬೆನ್ನಟ್ಟಿ ಮಾರ್ಗಮಧ್ಯೆ ತಡೆದು ಚಾಕು ತೋರಿಸಿ ಬೆದರಿಸಿ ಕಾರು ದರೋಡೆ ಮಾಡಿಕೊಂಡು ಪರಾರಿ ಯಾಗಿದ್ದರು.

ಶ್ರದ್ದಾ ವಿಕೃತ ಹತ್ಯೆ ಹಿಂದೆ ಲವ್ ಜಿಹಾದ್ ಶಂಕೆ, ಗಲ್ಲು ಶಿಕ್ಷೆಗೆ ಒತ್ತಾಯ

ಕಾರನ್ನು ದರೋಡೆ ಮಾಡು ವುದಕ್ಕಿಂತ ಮುಂಚೆ ಆರೋಪಿಗಳು ಬಾಗಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದು ದ್ವಿಚಕ್ರ ವಾಹನ ಕಳವು ಮಾಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿ ಕೊಂಡಿದ್ದ ಬಾಣಸವಾಡಿ ಠಾಣೆ ಪೊಲೀಸರು ವಿಶೇಷ ಕಾರ್ಯಾ ಚರಣೆ ಕೈಗೊಂಡು ಆರೋಪಿ ಸಯ್ಯದ್ ಆಸಿನ್‍ನನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿ ಈ ಹಿಂದೆ ರಾಮಮೂರ್ತಿನಗರ ಪೊಲೀಸ್ ಠಾಣೆಯ ಕೊಲೆಯತ್ನ ಪ್ರಕರಣ ದಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ ಬಂದಿರುತ್ತಾನೆ. ಈತನ ಬಂಧನದಿಂದ ಈ ಹಿಂದೆ ನಡೆದಿದ್ದ ಒಂದು ಸುಲಿಗೆ ಪ್ರಕರಣ, ಬಾಗಲೂರು ಪೊಲೀಸ್ ಠಾಣೆಯ ಒಂದು ವಾಹನ ಕಳವು ಪ್ರಕರಣ ಪತ್ತೆಯಾಗಿರುತ್ತವೆ.

ರಿಷಿ ಸುನಕ್‍ ಮತ್ತು ಮೋದಿ ಮೊದಲ ಭೇಟಿ

ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತ ಡಾ.ಭೀಮಾಶಂಕರ್ ಗುಳೇದ ಅವರ ಮಾರ್ಗದರ್ಶನದಲ್ಲಿ ಸಹಾಯಕ ಪೊಲೀಸ್ ಆಯುಕ್ತ ಎನ್.ಬಿ.ಸಕ್ರಿ ಅವರ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್ ಸಂತೋಷ್‍ಕುಮಾರ್ ಅವರನ್ನೊಳಗೊಂಡ ಸಿಬ್ಬಂದಿ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಈ ತಂಡದ ಕಾರ್ಯ ವೈಖರಿ ಯನ್ನು ಹಿರಿಯ ಅಧಿಕಾರಿಗಳು ಪ್ರಶಂಸಿಸಿದ್ದಾರೆ.

Articles You Might Like

Share This Article