“ನಮ್ಮ ನೆಲವನ್ನು ವಿದೇಶಿಗರ ಧರ್ಮಛತ್ರವಾಗಲು ಬಿಡಲ್ಲ” : ಗೃಹ ಸಚಿವ ಜ್ಞಾನೇಂದ್ರ

Social Share

ಬೆಂಗಳೂರು, ಮಾ.7- ನಮ್ಮ ನೆಲವನ್ನು ವಿದೇಶಿಗರಿಗೆ ಧರ್ಮ ಛತ್ರದ ರೀತಿ ಬಳಕೆಯಾಗಲು ಅವಕಾಶ ನೀಡುವುದಿಲ್ಲ. ವಿಸಾ ಅವ ಮುಗಿದ ಬಳಿಕ ರಾಜ್ಯದಲ್ಲಿ ನೆಲೆಸಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಭರವಸೆ ನೀಡಿದ್ದರು.
ವೈ.ಎ.ನಾರಾಯಣಸ್ವಾಮಿ ಪ್ರಸ್ತಾಪಿಸಿದ ಗಮನ ಸೆಳೆಯುವ ವಿಷಯಕ್ಕೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿಲ 441 ಮಂದಿ ವಿದೇಶಿ ಪ್ರಜೆಗಳ ವಿರುದ್ಧ 296 ಪ್ರಕರಣಗಳನ್ನು ದಾಖಲಿಸಲಾಗಿದೆ.
ಇವು ಇತ್ಯರ್ಥವಾಗುವವರೆಗೂ ಸ್ವದೇಶಕ್ಕೆ ವಾಪಾಸ್ ಹೋಗಲು ಅವಕಾಶ ಕೊಡದೆ, ನಿರ್ಬಂದ ಕೇಂದ್ರಗಳಲ್ಲಿ ಇರಿಸಲಾಗುವುದು. ಪ್ರಕರಣ ಅಂತ್ಯವಾದ ಬಳಿಕ ಅವರನ್ನು ಗಡಿಪಾರು ಮಾಡಲಾಗುವುದು. ಈ ವರ್ಷದ ಡಿಸೆಂಬರ್ ಅಂತ್ಯಕ್ಕೆ 675 ಮಂದಿ ವಿದೇಶಿಗರು ಅಕ್ರಮವಾಗಿ ನೆಲೆದ್ದಾರೆ. ಅವರು ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗದಂತೆ ಎಚ್ಚರಿಕೆ ವಹಿಸಲು ಮತ್ತು ಅಕ್ರಮವಾಗಿ ನೆಲೆಸಿರುವವರನ್ನು ಪತ್ತೆ ಮಾಡಲು ಎಲ್ಲಾ ಠಾಣೆಗಳಲ್ಲಿ ನುರಿತ ಸಿಬ್ಬಂದಿ ಮತ್ತು ಅಧಿಕಾರಿಗಳ ತಂಡ ರಚಿಸಲಾಗಿದೆ ಎಂದರು.
ನಗರದಲ್ಲಿ ಅಕ್ರಮವಾಗಿ ನೆಲೆಸಿರುವವರ ಅಕ್ರಮ ಚಟುವಟಿಕೆ ನಡೆಸುತ್ತಿರುವುದರಿಂದ ನಗರದ ನಾಗರಿಕರ ನೆಮ್ಮದಿ ಕೆಟ್ಟಿದೆ. 2018ರ 160 ಕ್ರಿಮಿನಲ್ ಕೇಸು, 31 ಎನ್ ಡಿ ಪಿ ಎಸï, 159 ಇತರೆ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ವಿವರಿಸುತ್ತಿದ್ದಂತೆ ಕೆಲ ಸದಸ್ಯರು ಉತ್ತರ ತಪ್ಪಾಗಿದೆ ಎಂದು ಆಕ್ಷೇಪ ವ್ಯಕ್ತ ಪಡಿಸಿದರು, ಬಳಿಕ ಸರಿಪಡಿಸಿಕೊಂಡ ಸಚಿವರು ತಮ್ಮ ಉತ್ತರ ಮುಂದುವರೆಸಿದರು. ಅಕ್ರಮವಾಗಿ ನೆಲೆಸಿರುವ ವಿದೇಶಿಗರ ಉಪಟಳಕ್ಕೆ ಕಡಿವಾಣ ಹಾಕುವುದಾಗಿ ಭರವಸೆ ನೀಡಿದರು.
ನಾರಾಯಣಸ್ವಾಮಿ ಅವರು, ಕಳೆದ ಹತ್ತು ವರ್ಷಗಳಿಂದ ಇಲ್ಲಿ ನೆಲೆಸಿರುವವರು ಮಾದಕ ವಸ್ತು ಸಾಗಾಣಿಕೆ, ಕಳ್ಳತನ, ವೇಶ್ಯಾವಟಿಕೆ, ನಕಲಿ ನೋಟುಗಳ ದಂಧೆಯಲ್ಲಿ ಭಾಗಿಯಾಗಿದ್ದಾರೆ. ಹಲವು ಗಂಭೀರ ಕೃತ್ಯಗಳಲ್ಲಿ ವಿದೇಶಿಗರು ಭಾಗಿಯಾಗಿದ್ದಾರೆ. ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿದ್ಧಾರೆ. ಬೆಂಗಳೂರಿನಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿ ಅಕ್ರಮವಾಗಿ ನೆಲೆ ಸಿದ್ದಾರೆ. ಇಲ್ಲಾ ಉಳಿದುಕೊಳ್ಳಲು ಸಣ್ಣಪುಟ್ಟ ಕ್ರಿಮಿನಲ್ ಕೇಸುಗಳನ್ನು ಹಾಕಿಸಿಕೊಂಡು ವಿಚಾರಣೆ ಹೆಸರಿನಲ್ಲಿ ಕಾಲಾಹರಣ ಮಾಡಿ, ಇಲ್ಲೇ ಉಳಿದು ಅಕ್ರಮ ಕೆಲಸಗಳನ್ನು ಮಾಡುತ್ತಿದ್ದಾರೆ. ಬಾಂಗ್ಲಾದೇಶ, ಕಾಂಬೋ, ಆಫ್ರಿಕಾದ ಹಲವು ಪ್ರಜೆಗಳು ಈ ರೀತಿ ಇಲ್ಲಿ ಇದ್ದಾರೆ ಎಂದು ಆರೋಪಿಸಿದರು.
ಸಲಿಂ ಅಹ್ಮದ್ ಮಾಡಿ, ವಿದೇಶಿಗರು ಮಾದಕ ವಸ್ತು ಪೆಟ್ಲರ್‍ಗಳಾಗಿದ್ದಾರೆ. ಸರ್ಕಾರ ಇವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದರು.
ಭಾರತಿ ಶೆಟ್ಟಿ, ಬೆಂಗಳೂರಿನಲ್ಲಿ ಮಾತ್ರವಲ್ಲ, ಹುಬ್ಬಳ್ಳಿ, ಶಿವಮೊಗ್ಗ, ಮಂಗಳೂರಿನಲ್ಲೂ ವಿದೇಶಿಗರು ಅಕ್ರಮವಾಗಿ ನೆಲೆಸಿದ್ದಾರೆ. ಅವರ ವಿರುದ್ಧ ಕಾರ್ಯಾಚರಣೆಯನ್ನು ಬೇರೆ ಜಿಲ್ಲಾಗಳಿಗೂ ವಿಸ್ತರಿಸಿ ಎಂದು ಒತ್ತಾಯಿಸಿದರು.
ಕೆ.ಗೋವಿಂದ ರಾಜು, ಠಾಣೆಯ ರೈರ್ಟ ಗೆ ಎಲ್ಲಾ ಮಾಹಿತಿ ಇರುತ್ತದೆ, ಅವರನ್ನು ಹೆಚ್ಚು ದಿನ ಒಂದೇ ಠಾಣೆಯಲ್ಲಿ ಇರಲು ಬಿಡಬೇಡಿ ಎಂದರು.
ಸಚಿವ ಅರಗ ಜ್ಞಾನೇಂದ್ರ ಉತ್ತರ ನೀಡುತ್ತಾ, ಅಕ್ರಮವಾಗಿ ನೆಲೆಸಿರುವ ವಿದೇಶಿಗರ ಕುರಿತು ನನಗೂ ಆತಂಕವಿದೆ. ಈ ದೇಶ ಧರ್ಮ ಚತ್ರವಾಗಲು ಬಿಡಲ್ಲ. ಗಡಿಯಲ್ಲಿ ಯುದ್ಧದಲ್ಲಿ ಸೈನಿಕರು ಹೊಡೆದು ಓಡಿಸುತ್ತಾರೆ. ಮಾದಕ ವಸ್ತುಗಳ ಪರೋಕ್ಷ ಯುದ್ಧ ನಡೆಯುತ್ತಿದೆ.
ನಮ್ಮ ಯುವ ಸಮುದಾಯವನ್ನು ಡಿಟೆಕ್ಷನ್ ಸೆಂರ್ಟ ಜಾಗ ಕಡಿಮೆ ಇದೆ. ನೈಜಿರಿಯನ್ ಹೆಣ್ಣು ಮಕ್ಕಳು ಶಕ್ತಿಯುತವಾಗಿದ್ದಾರೆ. ಅವರನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ ಎಂದಾಗ, 10 ಮಂದಿ ನೈಜಿರಿಯನ್ ಪ್ರಜೆಗಳಿಗೆ 10 ಮಂದಿ ಪೊಲೀಸರನ್ನು ಭದ್ರತೆಗೆ ಒದಗಿಸಲಾಗಿದೆ. ಅಕ್ರಮವಾಗಿ ನೆಲೆಸಿರುವವರನ್ನು ಬಂಧಿಸಿ ದಿಗ್ಭಂದನ ಕೇಂದ್ರಗಳಿಗೆ ಕಳುಹಿಸಲಾಗುವುದು. ಒಂದು ವೇಳೆ ಕ್ರಮ ಕೈಗೊಳ್ಳದಿದ್ದರೆ ಸಂಬಂಧಿಸಿದ ಪೊಲೀಸ್ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಫಿಟ್ ಎನ್ ಡಿ ಪಿ ಎಸ್ ಕಾಯ್ದೆ ಇದೆ. ಇದನ್ನು ಯಾವ ರಾಜ್ಯಗಳು ಗಮನಿಸಿಲ್ಲ. ನಮ್ಮ ರಾಜ್ಯದ ಪೊಲೀಸರು ಈ ಕಾಯ್ದೆ ಬಳಸಿ 5 ಮಂದಿ ವಿರುದ್ಧ ಕೇಸು ದಾಖಲಿಸಿದ್ದೇವೆ ಎಂದರು. ಮಾದಕ ವಸ್ತುಗಳ ವಿರುದ್ಧ ನಾವು ಯುದ್ಧವನ್ನೇ ಶುರು ಮಾಡಿದ್ದೇವೆ. ಸುಮಾರು 8 ಸಾವಿರ ಮಂದಿ ಮಾದಕ ವಸ್ತುಗಳ ಪ್ರಕರಣಗಳಲ್ಲಿ ಬಂಧನ ಮಾಡಲಾಗಿದೆ.
ದಿಗ್ಭಂದನ ಕೇಂದ್ರವನ್ನು ವಿಸ್ತರಣೆ ಮಾಡಲಾಗುವುದು, ವಿದೇಶಿಗರು ಇಲ್ಲೇ ಉಳಿದುಕೊಳ್ಳಲು ಸಣ್ಣ ಪುಟ್ಟ ಕೇಸುಗಳನ್ನು ಹಾಕಿಸಿಕೊಳ್ಳುತ್ತಿದ್ದಾರೆ. ಬಾಂಗ್ಲಾ ದೇಶದ ವಾಸಿಗಳು ಒಳ ಬರುವಾಗ ಗುರುತಿನ ಕಾರ್ಡ್ ಸೇರಿದಂತೆ ಹಲವು ದಾಖಲೆಗಳನ್ನು ಇಟ್ಟುಕೊಂಡೆ ಬರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪ್ರತಿಯೊಂದು ಠಾಣೆಯಲ್ಲೂ ಸಮೀಕ್ಷೆ ನಡೆಸಿ ಒಂದು ತಿಂಗಳ ಒಳಗೆ ವರದಿ ನೀಡುವಂತೆ ಸೂಚಿಸಲಾಗಿದೆ ಎಂದರು.

Articles You Might Like

Share This Article