ಬಡವರ ಮನೆ ನಿರ್ಮಾಣದಲ್ಲಿ ಹಗರಣ : ಮಾಜಿ ಅಧಿಕಾರಿ ಅರೆಸ್ಟ್

Social Share

ಕೊಚ್ಚಿ,ಫೆ.18- ಬಡವರಿಗೆ ಮನೆ ನಿರ್ಮಿಸಿಕೊಡುವ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ವಿದೇಶಿ ದೇಣಿಗೆ ಕಾಯ್ದೆ ನಿಯಮಾವಳಿಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂಬ ಆರೋಪಕ್ಕಾಗಿ ಜಾರಿ ನಿರ್ದೇಶನಾಲಯ ಲೈಫ್ ಮಿಷನ್ ಪ್ರಾಜೆಕ್ಟ್‍ನ ಮಾಜಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಯು.ವಿ.ಜೋಸೆ ಅವರನ್ನು ವಿಚಾರಣೆಗೆ ಒಳಪಡಿಸಿದೆ.

ಕೇರಳದ ತ್ರಿಶೂರ್ ಜಿಲ್ಲೆಯ ವಡಕ್ಕಂಚೇರಿಯಲ್ಲಿರುವ ಜೋಸೆ ಅವರ ಕಚೇರಿಯಲ್ಲಿ ಸುಮಾರು ಒಂಬತ್ತು ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ. ಹಗರಣದಲ್ಲಿ ಭಾಗಿಯಾದ ಆರೋಪಕ್ಕಾಗಿ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ವಿದೇಶಿ ದೇಣಿಗೆ ನೆರವು ಪಡೆದು ಬಡವರಿಗೆ ಮನೆ ನಿರ್ಮಾಣ ಮಾಡಿಕೊಡುವ ಯೋಜನೆಯ ಹಗರಣ ವ್ಯಾಪಕ ಸಂಕೀರ್ಣತೆಯನ್ನು ಹೊಂದಿದ್ದು, ಹೆಚ್ಚು ಸೂಕ್ಷ್ಮವಾಗಿದೆ. ಇದೇ ವೇಳೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್ ಅವರೊಂದಿಗೆ ತಮ್ಮ ಪಕ್ಷ ಯಾವುದೇ ಸಂಬಂಧ ಹೊಂದಿಲ್ಲ ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಸ್ಪಷ್ಟಪಡಿಸಿದ್ದಾರೆ.

ಏರ್ ಇಂಡಿಯಾ ಕಾರ್ಯವೈಖರಿಗೆ ದೇಬ್‍ ರಾಯ್ ಖಂಡನೆ

ಶಿವಶಂಕರ್ ಅವರನ್ನು ಸಿಪಿಐ(ಎಂ)ನೊಂದಿಗೆ ಸಂಪರ್ಕಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ, ಇದು ಸರಿಯಲ್ಲ. ಶಿವಶಂಕರ್‍ಗೂ ನಮಗೂ ಯಾವುದೇ ರೀತಿಯ ಸಂಬಂಧವಿಲ್ಲ. ಈ ಮೊದಲು ಬಂಧನಕ್ಕೆ ಒಳಗಾಗಿದ್ದ, ಶಿವಶಂಕರ್‍ರನ್ನು ಮತ್ತೆ ಬಂಧಿಸಲಿ ನಮ್ಮ ಅಭ್ಯಂತರವೇನು ಇಲ್ಲ ಎಂದು ಗೋವಿಂದನ್ ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಶಂಕರ್ ಜತೆ ಸಂಬಂಧ ಹೊಂದಿದ್ದ ಚಾರ್ಟರ್ಡ್ ಅಕೌಂಟೆಂಟ್ ಏಜೆನ್ಸಿಯ ಪ್ರಮುಖರನ್ನು ವಿಚಾರಣೆ ನಡೆಸಲಾಗಿತ್ತು. ಚಿನ್ನ ಕಳ್ಳ ಸಾಗಾಣಿಕೆಯ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್‍ರ ಪಾತ್ರವೂ ಈ ಹಗರಣದಲ್ಲಿ ಕಂಡು ಬಂದಿದ್ದು, ಆಕೆ ಯೋಜನೆಯಿಂದ ಪಡೆದ ಕಮಿಷನ್ ಹಣವನ್ನು ಲಾಕರ್‍ನಲ್ಲಿ ಇಡಲು ಲೆಕ್ಕ ಪರಿಶೋಧನಾ ಸಂಸ್ಥೆ ಸಹಾಯ ಮಾಡಿತ್ತು ಎಂದು ಹೇಳಲಾಗಿದೆ. ಇಲ್ಲಿನ ವಿಶೇಷ ನ್ಯಾಯಾಲಯ ಶಿವಶಂಕರ್ ಅವರನ್ನು ಐದು ದಿನಗಳ ಇಡಿ ಕಸ್ಟಡಿಗೆ ನೀಡಿತ್ತು.

ವಡಕಂಚೇರಿಯ ಕಾಂಗ್ರೆಸ್ ಶಾಸಕ ಅನಿಲ್ ಅಕ್ಕರ ಅವರು 2010ರಲ್ಲಿ ನೀಡಿದ ದೂರು ಆಧರಿಸಿದ ಸಿಬಿಐ, ಕೊಚ್ಚಿಯ ನಿಟಾಕ್ ಬಿಲ್ಡರ್‍ನ ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಈಪ್ಪನ್‍ರನ್ನು ಮೊದಲ ಆರೋಪಿಯಾಗಿದ್ದರು, ಸೇನ್ ವೆಂಚರ್ಸ್ ಎರಡನೇ ಆರೋಪಿಯಾಗಿದೆ.

ವಿದೇಶದ 20 ಕೋಟಿ ರೂಪಾಯಿ ದೇಣಿಗೆಯನ್ನು ಬಳಸಿಕೊಂಡು ಲೈಫ್ ಮಿಷನ್ ಯೋಜನೆಯಡಿ ಬಡವರಿಗೆ ಮನೆ ನಿರ್ಮಿಸಿಕೊಡಲು ರೆಡ್ ಕ್ರೆಸೆಂಟ್ ಸಂಸ್ಥೆ ಯುನಿಟಾಕ್ ಮತ್ತು ಸೇನ್ ವೆಂಚರ್ಸ್ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಗುತ್ತಿಗೆ ಆಯ್ಕೆಯಲ್ಲೂ ಭ್ರಷ್ಟಚಾರ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ವಿಶ್ವದಲ್ಲೇ ಅತಿ ಹೆಚ್ಚು ನಗದುರಹಿತ ವಹಿವಾಟು ನಡೆಸಿ ದಾಖಲೆ ಬರೆದ ಭಾರತ

ಸಿಬಿಐ ತನಿಖೆಯಲ್ಲಿ ಯೋಜನೆಯಿಂದ ಒಂದು ಕೋಟಿ ರೂಪಾಯಿ ಕಮಿಷನ್ ಪಡೆದಿದ್ದನ್ನು ಸ್ವಪ್ನಾ ಒಪ್ಪಿಕೊಂಡಿದ್ದರು. ಆ ಹಣವನ್ನು ಶಿವಶಂಕರ್ ನೀಡಿದ್ದರು ಎಂದು ಹೇಳಿಕೆ ನೀಡಿದ್ದರು. ಮನೆ ನಿರ್ಮಾಣ ಗುತ್ತಿಗೆ ಪಡೆದ ಕಂಪೆನಿಗಳು ವಿದೇಶಿಯರಿಂದ ನೇರವಾದ ದೇಣಿಗೆ ಸಂಗ್ರಹಿಸಿದ್ದವು ಎಂಬ ಆರೋಪ ಕೇಳಿ ಬಂದಿದೆ.

Former, CEO, Life Mission project, U V Jose,

Articles You Might Like

Share This Article