ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪಗೆ ಪ್ರೆಸ್‍ಕ್ಲಬ್ ವರ್ಷದ ವ್ಯಕ್ತಿ ಪ್ರಶಸ್ತಿ

Social Share

ಬೆಂಗಳೂರು, ಜ.2- ಬೆಂಗಳೂರು ಪ್ರೆಸ್‍ಕ್ಲಬ್ ನೀಡುವ ಪ್ರೆಸ್‍ಕ್ಲಬ್ ವರ್ಷದ ವ್ಯಕ್ತಿ ಪ್ರಶಸ್ತಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭಾಜನರಾಗಿದ್ದಾರೆ. ಪ್ರೆಸ್‍ಕ್ಲಬ್ ವಿಶೇಷ ಪ್ರಶಸ್ತಿಗೆ ಪದ್ಮಶ್ರೀ ಪುರಸ್ಕøತ ಹರೆಕಳ ಹಾಜಬ್ಬ ಮತ್ತು ಕೊರೊನಾ ನಿರ್ವಹಣೆಯಲ್ಲಿ ಗಮನಾರ್ಹ ಸಾಧನೆ ಮಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಆಯ್ಕೆಯಾಗಿದ್ದಾರೆ.
ಎಂ.ಕೆ.ಭಾಸ್ಕರ್, ಪದ್ಮರಾಜ್ ದಂಡಾವತಿ, ರಂಜಾನ್ ದರ್ಗಾ, ಕೆ.ಜಿ.ವಾಸುಕಿ, ಡಾ. ಜಗದೀಶ್ ಕೊಪ್ಪ, ಕೆ.ಆರ್. ಬಾಲಸುಬ್ರಹ್ಮಣ್ಯಂ, ಬಿ.ವಿ.ಶಿವಶಂಕರ್, ಯತೀಶ್‍ಕುಮಾರ್ ಜಿ.ಡಿ., ಸುದರ್ಶನ್ ಚನ್ನಂಗಿಹಳ್ಳಿ, ದೊಡ್ಡಬೊಮ್ಮಯ್ಯ, ಕೆ.ಎಂ.ವೀರೇಶ್, ವಾಸಂತಿ ಹರಿಪ್ರಕಾಶ್, ಪ್ರಶಾಂತ್ ನಾಥೂ, ಪ್ರಕಾಶ್ ಬೆಳವಾಡಿ, ಎಸ್.ಎಚ್.ಮಾರುತಿ, ಭಾನುಪ್ರಕಾಶ್ ಚಂದ್ರ ಸೇರಿದಂತೆ 16 ಮಂದಿ ಹಿರಿಯ ಪತ್ರಕರ್ತರನ್ನು 2021ನೆ ಸಾಲಿನ ಪ್ರೆಸ್‍ಕ್ಲಬ್ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಇದೇ ಜನವರಿ 6ರಂದು ಸಂಜೆ 6 ಗಂಟೆಗೆ ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರ್‍ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಶಸ್ತಿ ಪುರಸ್ಕøತರನ್ನು ಸನ್ಮಾನಿಸಲಿದ್ದಾರೆ ಎಂದು ಪ್ರೆಸ್‍ಕ್ಲಬ್ ಅಧ್ಯಕ್ಷರಾದ ಸದಾಶಿವ ಶೆಣೈ, ಪ್ರಧಾನ ಕಾರ್ಯದರ್ಶಿ ಎಚ್.ವಿ. ಕಿರಣ್ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ 2020ನೆ ಸಾಲಿನ ಪ್ರೆಸ್‍ಕ್ಲಬ್ ವರ್ಷದ ವ್ಯಕ್ತಿ ಪ್ರಶಸ್ತಿಗೆ ಆಯ್ಕೆಯಾದ ವಿಪ್ರೋ ಸಂಸ್ಥೆ ಅಧ್ಯಕ್ಷರಾದ ಅಜೀತ್ ಪ್ರೇಮ್‍ಜಿ, ವಿಶೇಷ ಪ್ರಶಸ್ತಿಗೆ ಆಯ್ಕೆಯಾದ ಚಿತ್ರನಟ ಸುದೀಪ್, ನಾರಾಯಣ ಹೃದಯಾಲಯದ ಡಾ.ದೇವಿಶೆಟ್ಟಿ ಹಾಗೂ ಪ್ರೆಸ್‍ಕ್ಲಬ್ ವಾರ್ಷಿಕ ಪ್ರಶಸ್ತಿಗೆ ಆಯ್ಕೆ
ಯಾದ 25 ಹಿರಿಯ ಪತ್ರಕರ್ತರನ್ನು ಸನ್ಮಾನಿಸ ಲಾಗುವುದು ಎಂದು ಅವರು ಹೇಳಿದ್ದಾರೆ.

Articles You Might Like

Share This Article