ಡಾಯ್ಚ ಬ್ಯಾಂಕ್‍ನ ಮಾಜಿ ಸಿಇಓ ಅಂಶು ಜೈನ್ ನಿಧನ

Social Share

ನ್ಯೂಯಾರ್ಕ್,ಆ-14 – ಭಾರತ ಸಂಜಾತ ಡಾಯ್ಚ ಬ್ಯಾಂಕ್‍ನ ಮಾಜಿ ಸಿಇಓ ಅಂಶು ಜೈನ್(59) ಅವರು ಕ್ಯಾನ್ಸರ್ ರೋಗದಿಂದ ನಿಧನರಾಗಿದ್ದಾರೆ. ಕಳೆದ 5 ವರ್ಷದಿಂದ ಕ್ಯಾನ್ಸರ್ ರೋಗದಿಂದ ಬಳಲಿ ಇತ್ತೀಚೆಗೆ ಅನಾರೋಗ್ಯಕೀಡಾಗಿದ್ದ ಅವರು ಮುಂಜಾನೆ ನಿಧನರಾಗಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ .

ಕಳೆದ 2017 ರಲ್ಲಿ ಜೈನ್ ಅವರಿಗೆ ಡ್ಯುವೋಡೆನಲ್ (ಸಣ್ಣ ಕರುಳು ,ಹೊಟ್ಟೆ) ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು ಅಂದಿನಿಂದ ಅವರು ಆತಂಕದಲ್ಲೇ ಜೀವಿಸಿದ್ದರು ರಾಜಸ್ತಾನದ ಜೈಪುರದಲ್ಲಿ ಜನಿಸಿದ ಜೈನ್ ಅವರು ದೆಹಲಿ ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ಪದವಿ ಪಡೆದರು ಮತ್ತು ಅಮೆರಿಕದ ಮ್ಯಾಸಚೂಸೆಟ್ಸ್ ಆಮೇಸ್ಟ್ ವಿಶ್ವವಿದ್ಯಾಲಯದಿಂದ ಹಣಕಾಸು ವಿಷಯದಲ್ಲಿ ಎಂಬಿಎ ಪಡೆದರು.

ಪ್ರತಿಷಿತ ಡಾಯ್ಚ ಬ್ಯಾಂಕ್‍ನ ಸಹ-ಸಿಇಒ ಪದವಿ ಅಲಂಕರಿಸಿ ಜಾಗತಿಕ ಮಟ್ಟದ ನಾಯಕತ್ವಪಾತ್ರ ವಹಿಸಿಕೊಂಡ ಭಾರತೀಯ ಮೂಲದ ಉನ್ನತ ಸ್ಥಾನಕ್ಕೇರಿದ ನಾಯಕರ ಪಟ್ಟಿಗೇರಿದರು.

1995 ರಲ್ಲಿ ಜೈನ್ ತಮ್ಮ ವೃತ್ತಿಜೀವನವನ್ನು ವಾಲ್ ಸ್ಟ್ರೀಟ್‍ನಲ್ಲಿ ಪ್ರಾರಂಭಿಸಿದರು, ಆರ್ಥಿಕ ಪ್ರಮುಖ ಮೆರಿಲ್ ಲಿಂಚ್‍ನಲ್ಲಿ ಕೆಲಸ ಮಾಡಿದರು.

ನಂತರ ಡಾಯ್ಚ ಬ್ಯಾಂಕಿನ ಅಭಿವೃದ್ಧಿಯಲ್ಲಿ ಜೈನ್ ನಿರ್ಣಾಯಕ ಪಾತ್ರ ವಹಿಸಿ,ಕಂಪನಿಯು ಜಾಗತಿಕ ಬಂಡವಾಳ ಮಾರುಕಟ್ಟೆ ವ್ಯವಹಾರವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಅವರು 2009 ರಲ್ಲಿ ಡಾಯ್ಚ ಬ್ಯಾಂಕಿನ ಆಡಳಿತ ಮಂಡಳಿಗೆ ನೇಮಕಗೊಂಡರು ಮತ್ತು 2010 ರಿಂದ ಕಾರ್ಪೊರೇಟ್ ಮತ್ತು ಹೂಡಿಕೆ ಬ್ಯಾಂಕ್ ವಿಭಾಗಕ್ಕೆ ಜವಾಬ್ದಾರರಾಗಿದ್ದರು. 2012 ರಿಂದ 2015 ರವರೆಗೆ ಅವರು ಸಹ-ಸಿಇಒಆಗಿದ್ದರು.ಡಾಯ್ಚ ಬ್ಯಾಂಕ್‍ನ ಮೇಲ್ವಿಚಾರಣಾ ಮಂಡಳಿಯ ಅಧ್ಯಕ್ಷ ಅಲೆಕ್ಸಾಂಡರ್ ವೈನಾಂಡ್ಟನ್ಸ್ ಅವರು ಜೈನ್ ಅವರ ಸಾಧನೆಯನ್ನು ಕೊಂಡಾಡಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಡಾಯ್ಚ ಬ್ಯಾಂಕ್ ಮತ್ತು ಶೇರು ಪೇಟೆ ಉದ್ಯಮಕ್ಕೆ ಜೈನ್ ಅವರ ಕೊಡುಗೆಗೆ ವಿಶ್ವದಾದ್ಯಂತ ಹಲವಾರು ಪ್ರಶಸ್ತಿ ಲಭಿಸಿದೆ. ನವದೆಹಲಿಯ ಟಿಇಆರ್‍ಐ ತಾಂತ್ರಿಕ ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್ ನೀಡಿತು ಮತ್ತು ಲಂಡನ್ ಬಿಸಿನೆಸ್ ಸ್ಕೂಲ್ ಅವರನ್ನು ಗೌರವಾನ್ವಿತ ಫೆಲೋಶಿಪ್ ನೀಡಿತ್ತು.ಭಾರತದ ಬಗ್ಗೆ ಅಪಾರ ಗೌರವ ಹೊಂದಿ ತನ್ನ ಹುಟ್ಟೂರಿನಲ್ಲೂ ಹಲವು ಸೇವಾ ಯೋಜನೆ ತಂದಿದ್ದರು

Articles You Might Like

Share This Article