ಕಾಂಗ್ರೆಸ್‍ಗೆ ಮುದ್ದಹನುಮೇಗೌಡ ಗುಡ್ ಬೈ ಹೇಳೋದು ಫಿಕ್ಸ್..?

Social Share

ತುಮಕೂರು,ಅ,30- ಹಳೇ ಮೈಸೂರು ಭಾಗದ ಒಕ್ಕಲಿಗ ಸಮುದಾಯದ ಪ್ರಭಾವಿ ಮುಖಂಡ ಹಾಗೂ ಮಾಜಿ ಸಂಸದ ಎಸ್.ಪಿ.ಮುದ್ದ ಹನುಮೇಗೌಡ ಬಿಜೆಪಿ ಸೇರುವುದು ಬಹುತೇಕ ಪಕ್ಕ ಆಗಿದೆ.

ಕಾಂಗ್ರಸ್‍ನಲ್ಲಿ ಪ್ರಭಾ ನಾಯಕರಾಗಿ ತುಮಕೂರು ಲೋಕಸಭಾ ಕ್ಷೇತ್ರದಿಂದ 2014ರಲ್ಲಿ ಸಂಸದರಾಗಿ ಆಯ್ಕೆಯಾಗಿದ್ದ ಅವರನ್ನು 2018ರ ಚುನಾವಣೆಯಲ್ಲಿ ಟಿಕೇಟ್ ನಿರಾಕರಿಸಲಾಗಿತ್ತು ಮತ್ತು ಅವರನ್ನು ಪಕ್ಷ ಕಡೆಗಣಿಸಿತ್ತು ಎಂಬ ಆರೋಪಗಳು ಕೇಳಿಬಂದಿತ್ತು. ಇದರ ನಡುವೆ ಕಾಂಗ್ರೆಸ್‍ಗೆ ಗುಡ್‍ಬೈ ಹೇಳಲು ನಿರ್ಧರಿಸಿದ ಅವರು ಬಿಜೆಪಿ ಪಕ್ಷವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಮುಂಬವರು ನವೆಂಬರ್ 3 ರಂದು ಬೆಂಗಳೂರಿನ ಬಿಜೆಪಿ ಕಛೇರಿಯಲ್ಲಿ ಅವರು ಅಧಿಕೃತವಾಗಿ ಬಿಜೆಪಿ ಸೇರಲಿದ್ದಾರೆ ಎಂದು ತಿಳಿದುಬಂದಿದೆ. ಇದಕ್ಕೆ ಪೂರಕವಾಗಿ ಅವರು ಕಾಂಗ್ರೆಸ್‍ನ ಪ್ರಾಥುಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.

ತಿರುಪತಿ ದೇವಸ್ಥಾನದಲ್ಲಿ ದರ್ಶನ ನಿಯಮಗಳ ಬದಲಾವಣೆ

ಈಗಾಲೇ ಮುಖ್ಯಮಂತ್ರಿ ಬಸವರಾಜ ಬೊಮಾ್ಮು ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು ಬಿಜೆಪಿ ಹೈಕಮಾಂಡ್ ನಡೆ ಕುತೂಹಲ ಕೆರಳಿಸಿದೆ. ಗೀನ್ ಸಿಗ್ನಲ್ ಸಿಕ್ಕ ನಂತರ ಅವರು ಪಾಳಯ ಸೇರಲಿದ್ದಾರೆ.
ಮುಂದಿನ 2023 ಧಾನಸಭೆ ಚುನಾವಣೆಯಲ್ಲಿ ಅವರು ಕುಣಿಗಲ್ ಕ್ಷೇತ್ರದಿಂದ ಕಣಕ್ಕಿಳಿಯುವ ಆಲೋಚನೆಯಲ್ಲಿದ್ದಾರೆ ಆದರೆ ಬಿಜೆಪಿಯಲ್ಲಿ ಅವರನ್ನು ತುಮಕೂರು ಅಥವಾ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸುವ ಇರಾದೆಇದೆ.

ಸೋಮಾಲಿಯಾ : ಕಾರ್ ಬಾಂಬ್‍ ಸ್ಪೋಟಕ್ಕೆ 100ಕ್ಕೂ ಹೆಚ್ಚು ಮಂದಿ ಬಲಿ

ಈಗಾಲೇ ಎಸ್.ಪಿ.ಮುದ್ದಹನುಮೇಗೌಡ ಕಾಂಗ್ರೆಸ್ ತೊರೆಯುವುದಾಗಿ ಅಕೃತವಾಗಿ ಘೋಷಣೆ ಮಾಡಿದ್ದಾರೆ. ಇದರಿಂದಾಗಿ ನಿರೀಕ್ಷೆಯಂತೆ ಹಳೇ ಮೈಸೂರು ಭಾಗದಲ್ಲಿ ಹೊಸ ಲೆಕ್ಕಾಚಾರ ಶುರುವಾಗಿದ್ದು, ಬಿಜೆಪಿ ಬಲ ಹೆಚ್ಚಲಿದೆ.

Articles You Might Like

Share This Article