ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್‍ಗೆ ಸಂಕಷ್ಟ

Social Share

ಇಸ್ಲಾಮಾಬಾದ್, ಅ.22- ಸಂಸದ ಸ್ಥಾನದಿಂದ ಅನರ್ಹಗೊಂಡ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಮುಂದಿನ ರಾಜಕೀಯ ಜೀವನ ಘನತೆಯನ್ನು ಮರಳಿ ಪಡೆಯಲು ಪ್ರಬಲ ಕಾನೂನು ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ.

ವಿದೇಶಿ ಗಣ್ಯರಿಂದ ಪಡೆದ ಉಡುಗೊರೆಗಳನ್ನು ಮರೆ ಮಾಚಲು ಯತ್ನಿಸಿದ ಆರೋಪ ಹೊಂದಿದ್ದ ತೋಷಖಾನಾ ಪ್ರಕರಣದಲ್ಲಿ ಶುಕ್ರವಾರ ತೀರ್ಪು ಪ್ರಕಟಗೊಂಡಿದ್ದು, ಇಮ್ರಾನ್ ಖಾನ್ ಸಂಸದ ಸ್ಥಾನವನ್ನು ಕಳೆದುಕೊಂಡಿರುವುದಲ್ಲದೆ, ಐದು ವರ್ಷಗಳ ಕಾಲ ಸಾರ್ವಜನಿಕ ಹುದ್ದೆ ಪಡೆಯುವಂತಿಲ್ಲ. ಚುನಾವಣೆಯಲ್ಲಿ ಸ್ರ್ಪಧಿಸುವಂತಿಲ್ಲ ಎಂಬ ತೀರ್ಪು ಪ್ರಕಟಗೊಂಡಿದೆ.

ಪಾಕಿಸ್ತಾನದ ಚುನಾವಣಾ ಆಯೋಗ ತೋಷಖಾನ ಪ್ರಕರಣದಲ್ಲಿ ತೀರ್ಪು ನೀಡಿದೆ. ಇಮ್ರಾನ್ ಖಾನ್ ಪ್ರಧಾನಿಯಾಗಿದ್ದಾಗ ಸ್ವೀಕರಿಸಿದ ಅಮೂಲ್ಯ ಉಡುಗೊರೆಗಳ ಮಾರಾಟದಿಂದ ಬಂದ ಹಣವನ್ನು ಮರೆಮಾಡಲು ಯತ್ನಿಸಿದ್ದರು ಎಂಬ ಆರೋಪವನ್ನು ದೃಢಿಕರಿಸಿದೆ. ಐದು ವರ್ಷಗಳ ಅನರ್ಹತೆ ಪ್ರಸ್ತುತ ವಿಧಾನಸಭೆಯ ಐದು ವರ್ಷಗಳ ಅವಧಿಗೆ ಮಾತ್ರ ಅನ್ವಯಿಸುತ್ತದೆಯೇ ಅಥವಾ ತೀರ್ಪು ಪ್ರಕಟಗೊಂಡ ದಿನದಿಂದ ಮುಂದಕ್ಕೆ ಲೆಕ್ಕ ಹಾಕಲಾಗುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ.

ಟ್ರಕ್‍ಗೆ ಬಸ್ ಡಿಕ್ಕಿ, 15 ಕಾರ್ಮಿಕರ ದುರ್ಮರಣ,ಮಧ್ಯಪ್ರದೇಶದಲ್ಲಿ ಘೋರ ದುರಂತ

ಪಾಕಿಸ್ತಾನದ ಸಂಸತ್‍ಗೆ 2018ರ ಆಗಸ್ಟ್‍ನಲ್ಲಿ ಚುನಾವಣೆ ನಡೆದಿತ್ತು. 2023ಕ್ಕೆ ಅವ ಪೂರ್ಣಗೊಳ್ಳುತ್ತಿದೆ. ವಿದೇಶಿ ಶಕ್ತಿಗಳ ಜೊತೆ ಇಮ್ರಾನ್ ಖಾನ್ ಕೈಜೋಡಿಸಿದ್ದಾರೆ ಎಂಬ ಆರೋಪಕ್ಕಾಗಿ ಅವಿಶ್ವಾಸ ಗೋತ್ತುವಳಿಯ ಮೂಲಕ ಅವರನ್ನು ಪ್ರಧಾನಿ ಸ್ಥಾನದಿಂದ ಕೆಳಗಿಳಿಸಲಾಗಿದೆ.

ಏಪ್ರಿಲ್‍ನಲ್ಲಿ ಅವರು ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ಕೂಡ ನೀಡಿದ್ದಾರೆ. ಆದರೆ ಅದು ಅಂಗೀಕಾರಗೊಂಡಿರಲಿಲ್ಲ. ಈಗ ಅನರ್ಹತೆಯ ಜೊತೆಗೆ ಸಾರ್ವಜನಿಕ ಜೀವನದಿಂದ ದೂರು ಇರಬೇಕಾದ ಪರಿಸ್ಥಿತಿ ಸೃಷ್ಟಿಸುವ ತೀರ್ಪು ಪ್ರಕಟಗೊಂಡಿದೆ.

ಪುನೀತ ಪರ್ವ ಕಾರ್ಯಕ್ರಮದಲ್ಲೇ ಅಪ್ಪು ಅಭಿಮಾನಿ ಸಾವು

ತೀರ್ಪಿನ ಬಲಿಕ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಸರಣಿ ಸಭೆಗಳನ್ನು ನಡೆಸಿದೆ. ನಂತರ ಧ್ವನಿಮುದ್ರಿತ ಸಂದೇಶ ಬಿಡುಗಡೆ ಮಾಡಿ ತಮ್ಮ ನಾಯಕನ ಮೇಲಿನ ಆರೋಪಗಳನ್ನು ತಿರಸ್ಕರಿಸಿದೆ. ತೀರ್ಪನ್ನು ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‍ನಲ್ಲಿ ಪ್ರಶ್ನಿಸುವುದಾಗಿ ಪಕ್ಷ ತಿಳಿಸಿದೆ.

Articles You Might Like

Share This Article