ರಷ್ಯಾ- ಉಕ್ರೇನ್ ವಾರ್ : ಪ್ರಧಾನಿ ಮೋದಿಗೆ ಪತ್ರ ಬರೆದ ದೇವೇಗೌಡರು

Social Share

ಬೆಂಗಳೂರು,ಫೆ.28-ಯುದ್ಧ ಪೀಡಿತ ಉಕ್ರೇನ್ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳು ಹಾಗೂ ಭಾರತೀಯರನ್ನು ಆದಷ್ಟು ಬೇಗ ಸುರಕ್ಷಿತವಾಗಿ ಕರೆತರಲು ವಿದೇಶಾಂಗ ಸಚಿವಾಲಯಕ್ಕೆ ಸೂಚನೆ ನೀಡಬೇಕೆಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.
ಈ ಸಂಬಂಧ ಪ್ರಧಾನಿ ಅವರಿಗೆ ಪತ್ರ ಬರೆದಿರುವ ಗೌಡರು, ಯುದ್ಧ ನಡೆಯುತ್ತಿರುವ ಉಕ್ರೇನಲ್ಲಿ ಸಿಲುಕಿರುವ ಭಾರತೀಯರ ಯೋಗ ಕ್ಷೇಮಕ್ಕೆ ಸೂಕ್ತ ವ್ಯವಸ್ಥೆಗಳನ್ನು ಮಾಡುವಂತೆ ಕೋರಿದ್ದಾರೆ.ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಿದ್ದು, ಕಷ್ಟಕರವಾದ ಪರಿಸ್ಥಿತಿ ಉಕ್ರೇನಲ್ಲಿ ಉಂಟಾಗಿದೆ. ಆದರೂ ಭಾರತೀಯ ನಾಗರಿಕರನ್ನು ತಾಯ್ನಾಡಿಗೆ ಕರೆತರಲಾಗುತ್ತದೆ ಎಂಬ ವಿಶ್ವಾಸವಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಭಾರತ ಸರ್ಕಾರವು ಈಗಾಗಲೇ ಉಕ್ರೇನಲ್ಲಿ ಸಿಲುಕಿರುವ ವಿದ್ಯಾರ್ಥಿಗಳು ಹಾಗೂ ನಾಗರಿಕರನ್ನು ಕರೆತರಲು ವಿಶೇಷ ಪ್ರಯತ್ನ ಮಾಡುತ್ತಿರುವುದು ಮೆಚ್ಚುವಂತಹ ವಿಚಾರ. ಕರ್ನಾಟಕ ಹಾಗೂ ಹಾಸನ ಜಿಲ್ಲೆಯ ಹಲವು ವಿದ್ಯಾರ್ಥಿಗಳು ಯುದ್ಧ ವಲಯದಲ್ಲಿ ಸಿಲುಕಿದ್ದಾರೆ.
ಅಂತಹವರ ಸುಮಾರು ಒಂದು ಡಜನ್ಗೂ ಹೆಚ್ಚು ವಿದ್ಯಾರ್ಥಿಗಳ ಪಟ್ಟಿಯನ್ನು ಪತ್ರದೊಂದಿಗೆ ನೀಡಿದ್ದು, ಅಲ್ಲಿಂದ ಸ್ಥಳಾಂತರ ಮಾಡಲು ಅನುಕೂಲವಾಗಬಹುದು ಎಂದು ಹೇಳಿದ್ದಾರೆ.
ರಷ್ಯಾ ದಾಳಿಯಿಂದಾಗಿ ಉಕ್ರೇನ್ನಲ್ಲಿ ತೀವ್ರಗತಿಯಲ್ಲಿ ಹದಗೆಡುತ್ತಿದೆ. ಅಂತಾರಾಷ್ಟ್ರೀಯ ಮಾಧ್ಯಮಗಳ ಮೂಲಕ ಈ ವಿಚಾರ ತಿಳಿಯುತ್ತಿದೆ. ಉಕ್ರೇನಲ್ಲಿ ನೆಲೆಸಿರುವ ಜನರಿಗೆ ತೀವ್ರ ತೊಂದರೆ ಹಾಗೂ ಅಪಾಯದ ಸನ್ನಿವೇಶದ ವಿಚಾರಗಳು ಕೇಳಿ ಬರುತ್ತಿವೆ. ನಾಗರಿಕ ಮತ್ತು ವಸತಿ ಪ್ರದೇಶಗಳಿಗೂ ಬಾಂಬ್ ದಾಳಿ ಮಾಡಲಾಗುತ್ತಿದೆ ಎಂಬ ಮಾಹಿತಿ ಇದೆ ಎಂದಿದ್ದಾರೆ.

Articles You Might Like

Share This Article