ಅಮೆರಿಕಾದ ಮಾಜಿ ಗುಪ್ತಚರ ಅಧಿಕಾರಿಗೆ ರಷ್ಯಾ ಪೌರತ್ವ

Social Share

ಮಾಸ್ಕೋವ್,ಡಿ.3- ಅಮೆರಿಕಾದ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತೆ ರಹಸ್ಯ ದಾಖಲೆಗಳನ್ನು ಸೋರಿಕೆ ಮಾಡಿದ ಆರೋಪಕ್ಕೊಳಗಾಗಿ, ದೇಶ ಭ್ರಷ್ಟರಾಗಿದ್ದ ಮಾಜಿ ಗುಪ್ತಚರ ಅಧಿಕಾರಿ ಎಡ್ವರ್ಡ್ ಸ್ನೋಡೆನ್‍ರಿಗೆ ರಷ್ಯ ಪೌರತ್ವ ಮತ್ತು ಪಾಸ್‍ಪೋಟ್ ನೀಡಿದೆ. ಇದು ಎರಡು ದೇಶಗಳ ನಡುವಿನ ಶಿಥಲಸಮರವನ್ನು ಮತ್ತಷ್ಟು ಹೆಚ್ಚಿಸಿದೆ.

ಎಡ್ವರ್ಡ್ ಅವರ ವಕೀಲ ಅನಟೋಲಿ ಕುಚೇರೆನಾ ಅವರನ್ನು ಉಲ್ಲೇಖಿಸಿ ರಷ್ಯಾ ಸುದ್ದಿ ಸಂಸ್ಥೆಗಳು ವರದಿ ಮಾಡಿದ್ದು, ರಷ್ಯ ಅಧ್ಯಕ್ಷ ವಾಡ್ಲಿಮಿರ್ ಪುಟೀನ್ ನೀಡಿದ ಆದೇಶದ ಮೇರೆಗೆ ಎಡ್ವರ್ಡ್ ಪೌರತ್ವ ಪಡೆದುಕೊಂಡಿದ್ದಾರೆ ಎಂದು ಸ್ಪಷ್ಟಪಡಿಸಿವೆ. ಇದೇ ಕಾಲಕ್ಕೆ ಅವರು ಅಮೆರಿಕಾದ ಪೌರತ್ವವನ್ನು ತೊರೆದಿದ್ದಾರೆಯೇ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ.

ಅಮೆರಿಕಾದ ಫೋನ್ ಮತ್ತು ಇಂಟರ್‍ನೆಟ್ ಕಂಪೆನಿಗಳ ಮೂಲ ಸೌಕರ್ಯಗಳ ಮೂಲಕ ಹಾದು ಹೋಗುವ ರಾಷ್ಟ್ರೀಯ ಭದ್ರತಾ ಸಂಸ್ಥೆಗೆ ಸಂಬಂಧಿಸಿದ ವರ್ಗಿಕೃತ ದತ್ತಾಂಶಗಳು, ಅಮೆರಿಕಾ ಗುಪ್ತಚರ ಸಂಸ್ಥೆಯ ಬಜೆಟ್ ಗಾತ್ರ,

ಪದೇ ಪದೇ ಹೈಟೆನ್ಷನ್ ಅವಘಡ : ನಿವಾಸಿಗಳಿಗೆ ಬೆಸ್ಕಾಂ ನೋಟೀಸ್

ಅಮೆರಿಕಾ ತನ್ನ ಆಪ್ತ ರಾಷ್ಟ್ರಗಳ ಪ್ರಮುಖ ನಾಯಕರು ಹಾಗೂ ವಿದೇಶಿ ಅಧಿಕಾರಿಗಳ ಮೇಲೆ ನಿಗಾ ವಹಿಸಿರುವ ಮಾಹಿತಿಗಳನ್ನು ಎಡ್ವರ್ಡ್ ದಾಖಲೆಗಳ ಸಹಿತ ಸೋರಿಕೆ ಮಾಡಿದ್ದರು. ಅಮೆರಿಕಾದ ಗುಪ್ತಚರ ಸಂಸ್ಥೆ ಸಮುದಾಯದಿಂದ ದೂರ ಹೋಗಿದೆ ಮತ್ತು ನಾಗರೀಕ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುತ್ತಿದೆ ಎಂದು ತಾನು ಭಾವಿಸಿದ್ದರಿಂದ ಮಾಹಿತಿ ಸೋರಿಕೆ ಮಾಡಿದ್ದಾಗಿ ಎಡ್ವರ್ಡ್ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದ್ದರು.

ಅಮೆರಿಕಾದ ಗುಪ್ತಚರ ಅಧಿಕಾರಿಯಾಗಿದ್ದ ಎಡ್ವರ್ಡ್‍ರ ಪಾಸ್‍ಪೋರ್ಟ್ ಅನ್ನು 2013ರಲ್ಲಿ ಹಿಂಪಡೆಯಲಾಗಿತ್ತು. ಇದರಿಂದ ಅವರು ಹಾಂಗಾಂಗ್ ಮೂಲಕ ಇಕ್ವೇಡಾರ್‍ಗೆ ಹೋಗುವ ಮಾರ್ಗ ಮಧ್ಯೆ ರಷ್ಯಾದ ಮಾಸ್ಕೋವ್‍ನಲ್ಲಿ ಸಿಕ್ಕಿ ಬಿದ್ದಿದ್ದರು.

ರಷ್ಯ ಅವರಿಗೆ ಶಾಶ್ವತ ನಿವಾಸ ಕಲ್ಪಿಸಿದೆ. ಮೂರು ತಿಂಗಳ ಹಿಂದೆ ರಷ್ಯಾ ಅಧ್ಯಕ್ಷರು ಪೌರತ್ವ ನೀಡಿದ್ದರು. ಈ ಕುರಿತು ಗುರುವಾರ ಪ್ರಮಾಣ ವಚನ ಸ್ವೀಕರಿಸಿದ್ದರು, ನಿನ್ನೆ ರಷ್ಯಾದ ಪಾಸ್‍ಪೋರ್ಟ್ ನೀಡಲಾಗಿದೆ ಎಂದು ವರದಿಯಾಗಿದೆ.

ಭಾರತ್ ಜೋಡೊ ಯಾತ್ರೆ : ರಾಹುಲ್‍ಗೆ ಮತ್ತೆ ಹೈಕೋರ್ಟ್ ನೋಟಿಸ್

ಎಡ್ವರ್ಡ್ 2017ರಲ್ಲಿ ಅಮೆರಿಕಾದ ಲಿಂಡ್ಸೇ ಮಿಲ್ಸ್‍ರನ್ನು ಮದುವೆಯಾಗಿದ್ದು, ದಂಪತಿಗೆ ಎರಡು ಮಕ್ಕಳಿವೆ.
ರಷ್ಯಾ ತನ್ನ ನೆರೆಯ ಉಕ್ರೇನ್ ಮೇಲೆ ದಾಳಿ ನಡೆಸಿದ ನಂತರ ಅಮೆರಿಕಾ ಮತ್ತು ರಷ್ಯಾ ನಡುವೆ ಶಿಥಲ ಸಮರ ತೀವ್ರಗೊಂಡಿದೆ.

ಅಮೆರಿಕಾ ಉಕ್ರೇನ್‍ಗೆ ಶಸ್ತ್ರಾಸ್ತ್ರ ಹಾಗೂ ಇತರ ನೆರವು ನೀಡುತ್ತಿರುವುದು ರಷ್ಯಾದ ಕೆಂಗಣ್ಣಿಗೆ ಗುರಿಯಾಗಿದೆ. ಅದಕ್ಕೆ ಪ್ರತಿಕಾರವಾಗಿ ರಷ್ಯಾ ಎಡ್ವರ್ಡ್‍ಗೆ ಪೌರತ್ವ ನೀಡಿದೆ. ಈ ಬೆಳವಣಿಗೆಯನ್ನು ಗಮನಿಸಿದರೆ ಸೋರಿಕೆಯಾದ ಮಾಹಿತಿಗಳು ಯಾರಿಗೆ ತಲುಪಿವೆ ಎಂಬ ಅನುಮಾನ ಮತ್ತಷ್ಟು ದಟ್ಟವಾಗುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Former, US, security, official, swears, allegiance, Russia, passport,

Articles You Might Like

Share This Article