ವಿಧಾನಸೌಧ ಚಲೋ : ಮತ್ತೆ ರಾಜಧಾನಿ ಬೆಂಗಳೂರಿಗೆ ಮುತ್ತಿಗೆ ಹಾಕಿದ ರೈತರು

Social Share

ಬೆಂಗಳೂರು,ಸೆ.26-ಮತ್ತೆ ರಾಜಧಾನಿಗೆ ರೈತರು ಮುತ್ತಿಗೆ ಹಾಕಿದ್ದಾರೆ.ತಮ್ಮ ಹಲವಾರು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಇಂದು ವಿಧಾನಸೌಧ ಚಲೊ ಹಮ್ಮಿಕೊಂಡಿದೆ.ರೈತ ಮುಖಂಡ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿರುವ ಸಹಸ್ರಾರು ರೈತರು ಇಂದು ರೈಲು ನಿಲ್ದಾಣದಿಂದ ವಿಧಾನಸೌಧದವರೆಗೆ ಬೃಹತ್ ರ್ಯಾಲಿ ನಡೆಸಿದರು.

ಪ್ರಸಕ್ತ ಸಾಲಿನ ಕಬ್ಬಿನ ಎಫ್ಆರ್ಪಿ ದರ ಕನಿಷ್ಠ 3,500ರೂ ನಿಗದಿಯಾಗಬೇಕು.. ಕೃಷಿ ಪಂಪ್ಸೆಟ್ಗಳಿಗೆ ನೀಡುವ ಉಚಿತ ವಿದ್ಯುತ್ ನಿಲ್ಲಿಸುವ ಹುನ್ನಾರ ಕೈ ಬಿಡಬೇಕು. ವಿದ್ಯುತ್ ಖಾಸಗೀಕರಣ ಕಾಯ್ದೆ ರದ್ದು ಮಾಡಬೇಕು. ರೈತರ ಎಲ್ಲ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಸಿಗಬೇಕು.. ಡಾ ಎಂ.ಎಸ್ ಸ್ವಾಮಿನಾಥನ್ ವರದಿಯಂತೆ ಖಾತರಿ ಬೆಲೆ ಶಾಸನ ಜಾರಿ ಮಾಡಬೇಕು ಎನ್ನುವುದು ರೈತ ಮುಖಂಡರ ಆಗ್ರಹವಾಗಿದೆ.

ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ಹೋರಾಟ ಮಾಡಿದ 750 ರೈತ ಕುಟುಂಬಗಳಿಗೆ ಕೂಡಲೇ ಪರಿಹಾರ ಕೊಡಬೇಕು.. ಕೊರೊನಾ ಲಾಕ್ಡೌನ್ ಸಂಕಷ್ಟ , ಮಳೆಹಾನಿ , ಅತಿವೃಷ್ಟಿ , ಬೆಳೆ ನಷ್ಟ , ಮೂರುವರೆ ಲಕ್ಷ ರೈತರ ಆತ್ಮಹತ್ಯೆ ಪರಿಗಣಿಸಿ ದೇಶದ ರೈತರ ಸಾಲ ಮನ್ನಾ ಮಾಡಬೇಕು ಎಂದು ಕುರುಬೂರು ಶಾಂತಕುಮಾರ್ ಒತ್ತಾಯಿಸಿದರು.

ಕೃಷಿ ಉಪಕರಣಗಳು , ಕೃಷಿ ಉತ್ಪನ್ನಗಳ ಮೇಲೆ ವಿಸಿರುವ ಜಿ.ಎಸ್.ಟಿ. ರದ್ದುಗೊಳಿಸಬೇಕು.. ಫಸಲ್ ಭೀಮಾ ಬೆಳೆ ವಿಮೆ ಯೋಜನೆಯ ಮಾನದಂಡ ಬದಲಾಗಬೇಕು .ಅತಿವೃಷ್ಟಿ ಮಳೆ ಹಾನಿ ಎಲ್ಲ ಬೆಳೆಗಳಿಗೂ ಬೆಳೆ ವಿಮೆ ಸಿಗುವಂತಾಗಬೇಕು..ಅತಿವೃಷ್ಟಿ ಸಮಸ್ಯೆಯಿಂದ ಪ್ರಸಕ್ತ ಸಾಲಿನಲ್ಲಿ ಕೃಷಿ ಸಾಲ ವಸೂಲಾತಿ ನಿಲ್ಲಿಸಬೇಕು.

ಈಗಿರುವ ಸಾಲದ ಮೇಲೆ ಶೇಕಡ 25 ರಷ್ಟು ಹೆಚ್ಚುವರಿ ಸಾಲ ಮಂಜೂರು ಮಾಡಿದರೆ ಸಂಕಷ್ಟದಲ್ಲಿರುವ ರೈತರು ಸುಧಾರಿಸಿಕೊಳ್ಳಲಿದ್ದಾರೆ ಎಂದು ಅವರು ಸಲಹೆ ನೀಡಿದರು.ರಾಜ್ಯದಲ್ಲಿ ಜಾರಿ ಮಾಡಿರುವ ಎಪಿಎಂಸಿ ತಿದ್ದುಪಡಿ ಕಾಯ್ದೆ ವಾಪಸ್ ಪಡೆಯಬೇಕು ..ರೈತರ ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ಬೇಡಿಕೆ ನಿಲ್ಲಬೇಕು..ನೇರವಾಗಿ ರೈತರಿಗೆ ಬ್ಯಾಂಕ್ಗಳಿಂದಲೆ ಸಾಲ ಕೊಡುವಂತಾಗಬೇಕು ಅಲ್ಲಿಯವರೆಗೆ ನಮ್ಮ ಹೋರಾಟ ನಿಲ್ಲಿಸುವುದಿಲ್ಲ ಎಂದು ಅವರು ಎಚ್ಚರಿಸಿದರು.

ರಾಜ್ಯದ ರೈತರು ಸರ್ಕಾರದ ನಡುವಳಿಕೆಗಳನ್ನು ಗಮನಿಸುತ್ತಿದ್ದಾರೆಮ ಎರಡು ತಿಂಗಳಿಂದ ನಾವು ನಮ್ಮ ಸಮಸ್ಯೆಗಳ ಬಗ್ಗೆ ಮನವಿ ನೀಡಿದ್ದೇವೆ ಆದ್ರೂ ಸರ್ಕಾರ ನಮ್ಮ ಮನವಿಯನ್ನು ಪರಿಗಣಿಸಿಲ್ಲ ಹೀಗಾಗಿ ಮತ್ತೆ ರ್ಯಾಲಿ ಹಮ್ಮಿಕೊಳ್ಳುವಂತಾಯಿತು ಎಂದು ಅವರು ಹೇಳಿದರು.

ರಾಷ್ಟ್ರಪತಿಗಳಿಗೆ ಅಗೌರವ ನೀಡಿವ ಮನಸ್ಥಿತಿ ನಮ್ಮದಲ್ಲ. ನಾವು ರೈತರು ಈ ದೇಶದ ಸಂವಿಧಾನ, ಕಾನೂನುಗಳನ್ನು ಗೌರವಿಸುವವರು ಇವತ್ತು ಈ ಹೋರಾಟದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬ ರೈತನು ಸಾವಿರ ರೈತರಿಗೆ ಸಮಾನ ಎಂದರು.

ನಮ್ಮ ಈ ಹೋರಾಟವನ್ನು ಹತ್ತಿಕ್ಕುವ ಯತ್ನದಲ್ಲಿ ರೈತರಿಗೆ ಹಾನಿಯಾದ್ರೆ ಮುಂದಿನ ಪರಿಣಾಮಗಳನ್ನು ಎದುರಿಸಲು ಸಿದ್ದರಾಗಿರಬೇಕಾಗುತ್ತದೆ ಎಂದು ಅವರು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.ಹೊರ ರಾಜ್ಯದ ರೈತರು ಸಾಥ್: ರೈತರು ಇಂದು ಹಮ್ಮಿಕೊಂಡಿರುವ ರ್ಯಾಲಿಗೆ ಹೊರ ರಾಜ್ಯಗಳ ನೂರಾರು ರೈತರು ಸಾಥ್ ನೀಡಿದ್ದಾರೆ.ಹರಿಯಾಣ, ಪಂಜಾಬï, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತಿತರ ರಾಜ್ಯಗಳ ನೂರಾರು ರೈತ ಮುಖಂಡರು ರಾಜ್ಯ ರೈತ ಮುಖಂಡರೊಂದಿಗೆ ರ್ಯಾಲಿಯಲ್ಲಿ ಹೆಜ್ಜೆ ಹಾಕಿದರು.

Articles You Might Like

Share This Article