4 ಚೀನೀ ಪ್ರಜೆಗಳ ಹತ್ಯೆ : ಶಂಕಿತನ ಬಂಧನ

Social Share

ಮಿಷನ್ (ಅಮೆರಿಕ), ನ. 23 – ಓಕ್ಲಹೋಮಾ ಪ್ರದೇಶದ ಫಾರ್ಮ್‍ನಲ್ಲಿ ನಡೆದಿದ್ದ ನಾಲ್ವರ ಚೀನೀ ಪ್ರಜೆಗಳ ಹತ್ಯೆ ಘಟನೆಗೆ ಸಂಭಂದಿಸಿದಂತೆ ಶಂಕಿತನನ್ನು ದಕ್ಷಿಣ ಪ್ರೋರಿಡಾದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಮಿಯಾಮಿ ಬೀಚ್ ಪೊಲೀಸರು ವು ಚೆನ್ ಎಂಬುವನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿದೆ ಎಂದು ಒಕ್ಲಹೋಮ ಸ್ಟೇಟ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ ಅಧಿಕಾರಿಗಳು ತಿಳಿಸಿದ್ದಾರೆ.

ಕೊಲೆಯಾದವರಲ್ಲಿ ಮೂವರು ಪುರುಷರು ಮತ್ತು ಒಬ್ಬ ಮಹಿಳೆಯಾಗಿದ್ದು ಇವರೆಲ್ಲಾ ಚೀನೀ ನಾಗರಿಕರಾಗಿದ್ದು ಒಕ್ಲಹೋಮ ನಗರದ ವಾಯುವ್ಯಕ್ಕೆ ಸುಮಾರು 90 ಕಿಲೋಮೀಟರ್‍ದೂರದಲ್ಲಿರುವ ಹೆನ್ನೆಸ್ಸಿಯ ಪಶ್ಚಿಮಕ್ಕೆ 10-ಎಕರೆ ಪ್ರದೇಶದಲ್ಲಿ ಗುಂಡಿಕ್ಕಿ ಕೊಂದು ಶವವನ್ನು ನೇಣಿಗೇರಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶೇಷನ್ ಅವರಂತಹ ಚುನಾವಣಾ ಆಯುಕ್ತರ ಅವಶ್ಯಕತೆಯಿದೆ : ಸುಪ್ರೀಂ

ಗಾಯಗೊಂಡಿರುವ ಮತ್ತೊಬ್ಬ ಚೀನೀ ಪ್ರಜೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಹೇಳಿಕೆ ಪಡೆಯಲಾಗುತ್ತದೆ, ತನಿಖೆ ದೃಷ್ಠಿಯಿಂದ ಆತನ ಹೆಸರನ್ನು ಬಹಿರಂಗ ಪಡಿಸುತ್ತಿಲ್ಲ ಎಂದು ಅಧಿಕಾರಿಗಳು ಹೇಳಿದ್ದರು.

ಮಿಜೋರಾಂನಲ್ಲಿ ಭಾರಿ ಪ್ರಮಾಣದ ಸ್ಪೋಟಕ ವಶಕ್ಕೆ ಪಡೆದ ಎನ್‍ಐಎ

Four, Chinese, nationals, ‘executed, ’ pot, farm, Oklahoma,

Articles You Might Like

Share This Article