ಭೂಕುಸಿತದಲ್ಲಿ ನಾಲ್ವರು ಬಾಲಕಿಯರ ಸಾವು

Social Share

ಚಂಢೀಘರ್,ಜ.11- ಹರಿಯಾಣದ ಕಂಗರ್ಕಾ ಗ್ರಾಮದಲ್ಲಿ ಸಂಭವಿಸಿದ ಭೂಕುಸಿತದಿಂದಾಗಿ ನಾಲ್ವರು ಬಾಲಕಿಯರು ಮಣ್ಣಿನಡಿ ಸಿಲುಕಿ ಸಾವನ್ನಪ್ಪಿರುವ ಘಟನೆ ನಡೆದಿದೆ. ವಕೀಲಾ (19), ಜನಿಸ್ತಾ (18), ತಸ್ಲಿಮಾ (10) ಮತ್ತು ಗುಲಾಫ್ಶಾ (9) ಮೃತಪಟ್ಟಿರುವ ಬಾಲಕಿಯರು.
ದುರಂತ ಸಂಭವಿಸಿದಾಗ ಬಾಲಕಿಯರು ತಮ್ಮ ಗೃಹ ಕಾರ್ಯಕ್ಕಾಗಿ ಮಣ್ಣು ತರಲು ಹೋಗಿದ್ದರು. ಈ ವೇಳೆ ಅವರ ಮೇಲೆ ದೊಡ್ಡ ಪ್ರಮಾಣದ ಮಣ್ಣು ಕುಸಿದು ನಾಲ್ವರೂ ಸಾವನ್ನಪ್ಪಿದ್ದಾರೆ.
ಗ್ರಾಮಸ್ಥರು ಮೃತರ ಶವಗಳನ್ನು ಹೊರತೆಗೆದಿದ್ದಾರೆ. ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ. ಮಣ್ಣಿನಡಿ ಸಿಲುಕಿಕೊಂಡಿದ್ದ ಮತ್ತೋರ್ವ ಬಾಲಕಿ ಸೋಫಿಯಾಳನ್ನು ರಕ್ಷಣೆ ಮಾಡಿದ್ದಾರೆ. ಸಣ್ಣಪುಟ್ಟ ಗಾಯಗಳಾಗಿರುವ ಆಕೆಯನ್ನು ಸದ್ಯ ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

Articles You Might Like

Share This Article