ಚಿರತೆ ಸೆರೆ ಹಿಡಿಯಲು ಅಖಾಡಕ್ಕಿಳಿದ ಅರಣ್ಯಾಧಿಕಾರಿಗಳು

Social Share

ಬೆಂಗಳೂರು,ಡಿ.3- ಸಿಲಿಕಾನ್ ಸಿಟಿ ಜನರ ನಿದ್ದೆಗೆಡಿಸಿರುವ ಚಿರತೆಗಳನ್ನು ಸೆರೆ ಹಿಡಿಯಲು ಅರಣ್ಯಾಧಿಕಾರಿಗಳು ಪ್ಲಾನ್ ರೂಪಿಸಿದ್ದಾರೆ. ಚಿರತೆ ಹಾವಳಿ ತಪ್ಪಿಸುವಂತೆ ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಅವರೇ ಸೂಚನೆ ನೀಡಿರುವುದರಿಂದ ಅಖಾಡಕ್ಕೆ ಇಳಿದಿರುವ ಆರಣ್ಯ ಇಲಾಖೆ ಸಿಬ್ಬಂದಿಗಳು ಚಿರತೆಗಳನ್ನು ಸೆರೆ ಹಿಡಿದು ಕಾಡಿಗೆ ಬಿಡಲು ತಯಾರಿ ನಡೆಸಿದ್ದಾರೆ.

ಕೆಂಗೇರಿ ಬಳಿಯ ತುರಹಳ್ಳಿ ಫಾರೆಸ್ಟ ಸುತ್ತಾಮುತ್ತ ಚಿರತೆ ಕಾಟ ಹೆಚ್ಚಾಗಿದ್ದು, ಈಗಾಗಲೇ ಇಬ್ಬರು ಮಹಿಳೆಯರ ಮೇಲೆ ದಾಳಿ ನಡೆಸಿ ಪರಾರಿಯಾಗಿರುವುದರಿಂದ ಸ್ಥಳೀಯರು ರಾತ್ರಿ ಪೂರಾ ನಿದ್ದೆ ಇಲ್ಲದೆ ಕಾಲ ಕಳೆಯುವಂತಾಗಿದೆ.
ಇಬ್ಬರು ಮಹಿಳೆಯರ ಮೇಲೆ ದಾಳಿ ನಡೆಸಿ ಸಮೀಪದ ತುರಹಳ್ಳಿ ಕಾಡಿಗೆ ಚಿರತೆಗಳು ಪಲಾಯನ ಮಾಡಿರುವುದರಿಂದ ಚಿರತೆ ಹಿಡಿಯಲು ಅರಣ್ಯಾಧಿಕಾರಿಗಳ ಪ್ಲಾನ್ ರೂಪಿಸಿದ್ದು, ಬೆಳ್ಳಂ ಬೆಳಿಗ್ಗೆ ಕಾಡಿನಲ್ಲಿ ಬೋನಿಟ್ಟಿದ್ದಾರೆ. ಆದರೆ, ಚಿರತೆ ಬೋನಿಗೆ ಬೀಳದಿರುವ ಹಿನ್ನಲೆಯಲ್ಲಿ ಕಾಡಿನಲ್ಲಿ ಚಿರತೆ ಬೇಟೆ ಆರಂಭಿಸಲಾಗಿದೆ.

500ಕೆಜಿ ನಿಷೇಧಿತ ಪ್ಲಾಸ್ಟಿಕ್ ಸೀಜ್, 34 ಸಾವಿರ ರೂ.ದಂಡ

ಎಚ್ಚರಿಕೆ: ತುರಹಳ್ಳಿ ಕಾಡಿನಲ್ಲಿ ತಲೆ ಮರೆಸಿಕೊಂಡಿರುವ ಚಿರತೆಗಳು ಯಾವುದೆ ಸಮಯದಲ್ಲಿ ಮನುಷ್ಯರ ಮೇಲೆ ದಾಳಿ ಮಾಡುವ ಸಾಧ್ಯತೆಗಳಿರುವುದರಿಂದ ಕೋಡಿಪಾಳ್ಯ, ತುರಹಳ್ಳಿ, ಕೆಂಗೇರಿ ಸುತ್ತಮತ್ತಲ ಗ್ರಾಮಸ್ಥರು ಎಚ್ಚರಿಕೆ ಓಡಾಡುವಂತೆ ಅರಣ್ಯಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.

ಅರಣ್ಯಾಧಿಕಾರಿಗಳ ಜೀಪ್ಗಳ ಮೂಲಕ ಮೈಕ್ ಬಳಸಿ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ. ಸಂಜೆ ಹಾಗೂ ಬೆಳಗ್ಗಿನ ಸಮಯದಲ್ಲಿ ಯಾರು ಒಬ್ಬೊಬ್ಬರೆ ಓಡಾಡಬಾರದು ಎಂದು ಮನವಿ ಮಾಡಿಕೊಳ್ಳಲಾಗುತ್ತಿದೆ.

ಗನ್ ಹಿಡಿದು ಗಸ್ತು: ರಾತ್ರಿಯಿಂದಲೇ ತುರಹಳ್ಳಿ ಕಾಡಿನಲ್ಲಿ ಬೀಡುಬಿಟ್ಟಿರುವ ಆರಣ್ಯ ಇಲಾಖೆ ಸಿಬ್ಬಂದಿಗಳು ಗನ್ ಹಿಡಿದು ಚಿರತೆ ಸುಳಿವಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದರ ಜೋತೆಗೆ ತುರಹಳ್ಳಿ ಸುತ್ತಮುತ್ತಲ ಗೋದಾಮುಗಳ ಬಳಿಯೂ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದಾರೆ. ಗೋದಾಮುಗಳ ಬಳಿ ನಾಯಿಗಳ ಹಿಂಡು ಹೆಚ್ಚಾಗಿರುವ ಹಿನ್ನಲೆಯಲ್ಲಿ ನಾಯಿ ಬೇಟೆಗಾಗಿ ಚಿರತೆಗಳು ಬರಬಹುದು ಎಂಬ ಶಂಕೆ ಮೇಲೆ ಶಸ್ತ್ರ ಸಜ್ಜಿತ ಸಿಬ್ಬಂದಿಗಳು ಚಿರತೆ ಬೇಟೆಗಾಗಿ ಕಾಯುತ್ತಿದ್ದಾರೆ.

ಓಂಕಾರ್ಸ್ ಹಿಲ್ಸ್ ಸುತ್ತಮುತ್ತ ಚಿರತೆ ಹೆಜ್ಜೆಗುರುತುಗಳು ಕಂಡು ಬಂದಿರುವುದರಿಂದ ಆ ಪ್ರದೇಶದಲ್ಲೂ ಅರಣ್ಯ ಇಲಾಖೆ ಸಿಬ್ಬಂದಿಗಳು ಗಸ್ತು ತಿರುಗುತ್ತಿದ್ದಾರೆ. ಗೋದಾಮುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸೆಕ್ಯೂರಿಟಿ ಗಾರ್ಡ್ಗಳಿಂದಲೂ ಅರಣ್ಯ ಇಲಾಖೆ ಸಿಬ್ಬಂದಿಗಳು ಮಾಹಿತಿ ಪಡೆದುಕೊಳ್ಳುತ್ತಿದ್ದು, ರಾತ್ರಿ ವೇಳೆ ಚಿರತೆ ಸುಳಿವು ಕಂಡುಬಂದರೆ ಕೂಡಲೆ ನಮಗೆ ಮಾಹಿತಿ ನೀಡುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

ನಾಯಿಗಳು ಹೆಚ್ಚಾದರೆ ಚಿರತೆ ದಾಳಿ ನಡೆಸುವ ಸಾಧ್ಯತೆಗಳಿರುವುದರಿಂದ ಸೆಕ್ಯೂರಿಟಿ ಗಾರ್ಡ್ಗಳು ನಾಯಿ ಹಿಂಡುಗಳಿಂದ ಅಂತರ ಕಾಪಾಡಿಕೊಳ್ಳುವಂತೆಯೂ ಸಲಹೆ ನೀಡಲಾಗುತ್ತಿದೆ.

ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರ ಹಿಂದೇಟು: ತುರಹಳ್ಳಿ ಅರಣ್ಯ ವ್ಯಾಪ್ತಿಯಲ್ಲಿರೋ ಗಾಣಕಲ್ಲು ಗ್ರಾಮದ ಶಾಲೆ ಪಕ್ಕದಲ್ಲೇ ಕಾಡಿರುವುದರಿಂದ ಇಲ್ಲಿಗೆ ಆಗಾಗ ನವಿಲು, ಜಿಂಕೆಗಳು ಬರುವುದು ವಾಡಿಕೆ. ಹೀಗಾಗಿ ಇಲ್ಲಿಗೂ ಚಿರತೆಗಳು ಬರುವ ಸಾಧ್ಯತೆ ಇರುವುದರಿಂದ ಸುತ್ತಮುತ್ತಲ ಗ್ರಾಮಸ್ಥರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.

ಚಿರತೆ ಬಗ್ಗೆ ನಮಗೂ ಆತಂಕ ಇದೆ. ಆದರೆ, ಪ್ರಾಣಿಗಳು ವಿನಾ ಕಾರಣ ಮನುಷ್ಯರ ಮೇಲೆ ದಾಳಿ ಮಾಡುವುದಿಲ್ಲ ಈ ಧೈರ್ಯ ದ ಮೇಲೆ ನಾವು ಶಾಲೆಗೆ ಬರುತ್ತಿ ದ್ದೇವೆ ಎಂದು ಶಿಕ್ಷಕಿ ಪೂರ್ಣ ಭಟ್ ತಿಳಿಸಿದ್ದಾರೆ.

ಚಿಕ್ಕಜಾಲದಲ್ಲೂ ಚಿರತೆ ಹೆಜ್ಜೆಗುರುತು: ಏರ್ ಪೆÇರ್ಟ್ ಮುಖ್ಯರಸ್ತೆ ಚಿಕ್ಕಜಾಲ ಸಮೀಪ ತರಬನಹಳ್ಳಿ ಸಮೀಪವೂ ಚಿರತೆ ಹೆಜ್ಜೆ ಗುರುತು ಕಂಡು ಬಂದಿರುವುದರಿಂದ ಸುತ್ತಮುತ್ತಲ ಜನ ಆತಂಕದಲ್ಲಿಯೇ ವಾಕಿಂಗ್ ಮಾಡುತ್ತಿರುವ ದೃಶ್ಯ ಕಂಡು ಬರುತ್ತಿದೆ.

ಸುಂದರ್ ಪಿಚೈಗೆ ಅಮೆರಿಕಾದಲ್ಲಿ ಪದ್ಮಭೂಷಣ ಪ್ರದಾನ

ಐಟಿಸಿ ಕಾರ್ಖಾನೆ ಒಳಭಾಗದಲ್ಲಿ ಚಿರತೆ ಬಂಧನಕ್ಕೆ ಬೋನಿಟ್ಟಿದ್ದರೂ ಚಾಣಾಕ್ಷ ಚಿರತೆಗಳು ಬೋನಿಗೆ ಬಿದ್ದಿಲ್ಲ. ಹೀಗಾಗಿ ಅದಷ್ಟು ಬೇಗ ಚಿರತೆ ಹಿಡಿಯುವಂತೆ ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಐಟಿಸಿ ಕಾರ್ಖಾನೆ ಸುತ್ತಮತ್ತ ಚಿರತೆ ಓಡಾಟದ ಸುಳಿವು ದೊರೆತಿದ್ದರೂ ಕಾರ್ಖಾನೆಯವರು ತಮ್ಮ ಸಿಬ್ಬಂದಿಗಳಿಗೆ ರಜೆ ನೀಡಲು ಸತಾಯಿಸುತ್ತಿರುವುದರಿಂದ ಸಿಬ್ಬಂದಿಗಳು ಪ್ರಾಣಭಯದಿಂದಲೇ ಕೆಲಸ ಮಾಡುವಂತಹ ಸನ್ನಿವೇಶ ನಿರ್ಮಾಣವಾಗಿದೆ.

ದತ್ತ ಜಯಂತಿಗೆ ಬಿಗಿ ಪೊಲೀಸ್ ಬಂದೋಬಸ್ತ್

4 ಚಿರತೆಗಳು: ತುರಹಳ್ಳಿ ಹಾಗೂ ಚಿಕ್ಕಜಾಲದಲ್ಲಿ ಸಿಕ್ಕಿರುವ ಚಿರತೆ ಹೆಜ್ಜೆ ಗುರುತುಗಳನ್ನು ಗಮನಿಸಿದರೆ ಸಿಲಿಕಾನ್ ಸಿಟಿ ಸುತ್ತಮುತ್ತ 4 ಚಿರತೆಗಳು ಇರಬಹುದು ಎಂದು ಶಂಕಿಸಲಾಗಿದೆ. ಅದೇ ರೀತಿ ಚಿರತೆಗಳು ಯಾವುದೆ ಸಂದರ್ಭದಲ್ಲಿ ನಗರ ಪ್ರವೇಶಿಸುವ ಸಾಧ್ಯತೆಗಳಿರುವುದರಿಂದ ಎಚ್ಚರಿಕೆ ವಹಿಸುವಂತೆ ಬಿಬಿಎಂಪಿ ಅಕಾರಿಗಳಿಗೆ ಅರಣ್ಯಾಕಾರಿಗಳು ಮನವಿ ಮಾಡಿಕೊಂಡಿದ್ದಾರೆ.

Four, Leopards, ,Bengaluru, forest, officials, high alert,

Articles You Might Like

Share This Article