ಸಿಲಿಂಡರ್ ಸ್ಪೋಟಗೊಂಡು ನಾಲ್ವರ ಸಾವು

ಹೈದಾರಾಬಾದ್,ಮೇ 28- ಅಡುಗೆ ಅನಿಲ ಸಿಲಿಂಡರ್ ಸ್ಪೋಟಗೊಂಡ 3 ವರ್ಷದ ಮಗು, ಇಬ್ಬರು ಸೇರಿದಂತೆ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಅನನಪುರ ಜಿಲ್ಲೆಯಲ್ಲಿ ಇಂದು ನಡೆದಿದೆ.

ಮೃತರನ್ನು ಜೈನಬಿ (60), ದಾದು (36), ಶರ್ಫುನ್ನಿ (28) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ 3 ವರ್ಷದ ಮಗುವೂ ಸಾವನ್ನಪ್ಪಿದೆ. ಅನಂತಪುರ ಜಿಲ್ಲೆಯ ಮುಳಕೇಡು ಗ್ರಾಮದ ಮನೆಯೊಂದರಲ್ಲಿ ಈ ದುರ್ಘಟನೆ ಸಂಭವಿಸಿದೆ. ಅಕ್ಕಪಕ್ಕದ ಎರಡು ಮನೆಗಳಿಗೂ ಹಾನಿಯಾಗಿದೆ.

ಘಟನೆಯಲ್ಲಿ ಮತ್ತಿಬ್ಬರಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ರವಾನಿಸಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ.