ನಾಲ್ವರು ಶ್ರೀಗಂಧ ಚೋರರ ಬಂಧನ : 16.50 ಲಕ್ಷ ಮೌಲ್ಯದ ಮಾಲು ಜಪ್ತಿ

Social Share

ಬೆಂಗಳೂರು, ಜ.9- ಅರಣ್ಯದಿಂದ ರಕ್ತ ಚಂದನದ ಮರಗಳನ್ನು ಕಡಿದು ಸಾಗಿಸುತ್ತಿದ್ದ ನಾಲ್ವರನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿ 16.50 ಲಕ್ಷ ರೂ. ಮೌಲ್ಯದ ಶ್ರೀಗಂಧದ ಮರದ ತುಂಡುಗಳು ಹಾಗೂ ಗೂಡ್ಸ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಕಾಮಾಕ್ಷಿಪಾಳ್ಯದ ಮೀನಾಕ್ಷಿ ನಗರ ನಿವಾಸಿ ಸಿದ್ದಪ್ಪ(27), ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಹರೀಶ್(34), ಕಮಲಾನಗರದ ಪೊನ್ನರಾಜು ಅಲಿಯಾಸ್ ಪೊನ್ನ(35) ಮತ್ತು ಲಗ್ಗೇರಿಯ ಪ್ರೇಮನಗರ ನಿವಾಸಿ ಧೃವಕುಮಾರ್ ಅಲಿಯಾಸ್ ಧೃವ(29) ಬಂಧಿತ ಶ್ರೀಗಂಧ ಚೋರರು.

ಕಾಮಾಕ್ಷಿಪಾಳ್ಯದ ಕಾವೇರಿ ಪುರ ಗುಡ್ಡದ ಬಳಿಯಿಂದ ಮಹೇಂದ್ರ ಜಿತೋ ಪ್ಲಸ್ ಗೂಡ್ಸ್ ವಾಹನದಲ್ಲಿ ಶ್ರೀಗಂಧ ತುಂಡುಗಳನ್ನು ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಅಪರಾಧ ವಿಭಾಗದ ಎಎಸ್ಐ ಶ್ರೀನಿವಾಸ್ ಅವರು ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ಕೈಗೊಂಡು ಈ ವಾಹನವನ್ನು ತಡೆದು ಪರಿಶೀಲಿಸಿದಾಗ ಅದರಲ್ಲಿ ರಕ್ತ ಚಂದನ ಇರುವುದು ಕಂಡು ಬಂದಿದೆ.

ಕಾಂಗ್ರೆಸ್‍ ಮಹಿಳಾ ನಾಯಕಿಯರ ಸಮಾವೇಶಕ್ಕೆ ಪ್ರಿಯಾಂಕ ಗಾಂಧಿ

ತಕ್ಷಣ ಆರೋಪಿಗಳಾದ ಸಿದ್ದಪ್ಪ ಮತ್ತು ಹರೀಶ್ ಎಂಬಾತನನ್ನು ಬಂಧಿಸಿ ವಾಹನವನ್ನು ಪರಿಶೀಲಿಸಿ ಅದರೊಳಗಿದ್ದ 330 ಕೆಜಿ ತೂಕದ ರಕ್ತ ಚಂದನದಂತಿರುವ 16.50 ಲಕ್ಷ ರೂ. ಬೆಲೆಬಾಳುವ 10 ಹಸಿ ಗಂಧದ ಮರದ ತುಂಡುಗಳು ಹಾಗು ಮಹೇಂದ್ರ ವಾಹನವನ್ನು ವಶಪಡಿಸಿಕೊಂಡು ವಿಚಾರಗೊಳಪಡಿಸಿದ್ದಾರೆ.

ಆರೋಪಿಗಳು ಗಂಧದ ತುಂಡುಗಳನ್ನು ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗದ ಕಾಡಿನಲ್ಲಿ ಶ್ರೀಗಂಧ ಮರಗಳನ್ನು ಕಡಿದು ಸಾಗಿಸುತ್ತಿದ್ದುದ್ದು ವಿಚಾರಣೆಯಿಂದ ಗೊತ್ತಾಗಿದೆ. ಈ ಪ್ರಕರಣದಲ್ಲಿ ಆರೋಪಿಗಳು ನೀಡಿದ್ದ ಮಾಹಿತಿ ಮೇರೆಗೆ ಮತ್ತಿಬ್ಬರು ಆರೋಪಿಗಳಾದ ಪೊನ್ನ ರಾಜು ಮತ್ತು ಧೃವಕುಮಾರ್ನನ್ನು ಬಂಧಿಸಿದ್ದಾರೆ.

ಆರೋಪಿಗಳ ಬಂಧನದಿಂದ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದು ಪತ್ತೆಯಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಹಲವರಿಗಾಗಿ ಶೋಧ ಮುಂದುವರೆದಿದೆ.

‘ಸಿದ್ದು ನಿಜ ಕನಸುಗಳು’ ವಿವಾದಿತ ಪುಸ್ತಕ ಬಿಡುಗಡೆಗೆ ಕಾಂಗ್ರೆಸ್ ಆಕ್ರೋಶ

ಈ ಕಾರ್ಯಾಚರಣೆಯನ್ನು ಪಶ್ಚಿಮ ವಿಭಾಗದ ಉಪಪೊಲೀಸ್ ಆಯುಕ್ತ ಲಕ್ಷ್ಮಣ್ ನಿಂಬರಗಿ ಅವರ ಮಾರ್ಗದರ್ಶನದಲ್ಲಿ ವಿಜಯ ನಗರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ರವಿ ಅವರ ನಿರ್ದೇಶನದಲ್ಲಿ ಇನ್ಸ್ಪೆಕ್ಟರ್ ರೋಹಿತ್ ಅವರನ್ನೊಳಗೊಂಡ ಸಿಬ್ಬಂದಿ ತಂಡ ಆರೋಪಿಗಳನ್ನು ಬಂಧಿಸಿ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

Four, sandalwood, thieves, arrested,

Articles You Might Like

Share This Article