ಭಾರತ-ನೇಪಾಳ ಗಡಿಯಲ್ಲಿ ನಾಲ್ವರು ಡ್ರಗ್ಸ್ ಕಳ್ಳಸಾಗಣೆದಾರರ ಬಂಧನ

Social Share

ಬಹ್ರೈಚ್, ಜ.6 -ಉತ್ತರ ಪ್ರದೇಶದ ಭಾರತ -ನೇಪಾಳ ಗಡಿ ಬಳಿ 2 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಮಾದಕವಸ್ತುವನ್ನು ಸಾಗಣೆ ಮಾಡುತ್ತಿದ್ದ ನಾಲ್ವರು ಕಳ್ಳಸಾಗಣೆದಾರರನ್ನು ಬಂಧಿಸಲಾಗಿದೆ.

ಸುಮಾರು 435 ಗ್ರಾಂ ಮಾದಕವಸ್ತುದೊಂದಿಗೆ ರೂಪೈದಿಹಾಳ ರೈಲು ನಿಲ್ದಾಣದ ಬಳಿ ಬರುತ್ತಿದ್ದ ಆರೋಪಿಗಳನ್ನು ತಡೆದು ಸ್ಥಳೀಯ ಪೋಲೀಸ್ ಮತ್ತು ಸಶಸ್ತ್ರ ಸೀಮಾ ಬಲದ ಅಧಿಕಾರಿಗಳು ಜಂಟಿ ತಪಾಸಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಕಳ್ಳಸಾಗಣೆದಾರರ ಬಳಿ ವಶಪಡಿಸಿಕೊಳ್ಳಲಾದ ಮದಕವಸ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 2.17 ಕೋಟಿ ರೂಪಾಯಿ ಎಂದು ಪೊಲೀಸ್ ವರಿಷ್ಠಾಧಿಕಾರಿ ಪ್ರಶಾಂತ್ ವರ್ಮಾ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಹಣ ಪತ್ತೆ ಪ್ರಕರಣ ತನಿಖೆಗೆ ಡಿಕೆಶಿ ಆಗ್ರಹ

ಬಂಧಿತರನ್ನು ಸ್ಥಳೀಯ ನಿವಾಸಿಗಳಾದ ತಾಜ್ ಬಾಬು ಅಲಿಯಾಸ್ ಸಮೀರ್, ಬಬ್ಲು ಅಲಿಯಾಸ್ ಮೊಹಮ್ಮದ್ ಅಮೀನ್, ಸಂಜಯ್ ಕೇವತ್ ಮತ್ತು ದಿನೇಶ್ ಎಂದು ಗುರುತಿಸಲಾಗಿದೆ .ಇದನ್ನು ಎಲ್ಲಿಂದ ಯಾರಿಗೆ ಕಳುಹಿಸಲಾಗುತ್ತಿತ್ತು ಎಂಬುದರ ಬಗ್ಗೆ ತನಿಖೆ ನಡೆದಿದೆ.

Four, suspected, drug smugglers, Indo-Nepal, border,

Articles You Might Like

Share This Article