ಸರ್ಜಿಕಲ್ ಸ್ಟ್ರೈಕ್ ನಡೆದು ಇಂದಿಗೆ 4 ವರ್ಷ, ವೀರಾಗ್ರಣಿಗಳ ಗುಣಗಾನ

ನವದೆಹಲಿ, ಸೆ.28-ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಒಕೆ)ದಲ್ಲಿ ಭಯೋತ್ಪಾದಕರ ಹುಟ್ಟಡಗಿಸಲು ಭಾರತೀಯ ಸೇನಾಪಡೆ 2016ರ ಸೆ.28-29ರಂದು ನಡೆಸಿದ ಸರ್ಜಿಕಲ್ ಸ್ಟ್ರೈಕ್ (ನಿರ್ದಿಷ್ಟ ದಾಳಿ)ಗೆ ಇಂದು 4ನೆ ವರ್ಷ.

ಭಾರತ ಸೇನಾ ಪಡೆಯ ಶೌರ್ಯ, ಸಾಹಸಗಳನ್ನು ದೇಶಾದ್ಯಂತ ಸ್ಮರಿಸಿ ವೀರಾಗ್ರಣಿಗಳ ಗುಣಗಾನ ಮಾಡಲಾಗುತ್ತಿದೆ. ಭಾರತೀಯ ಕಮ್ಯಾಂಡೋಗಳು ಪಿಒಕೆಗೆ ನುಗ್ಗಿ ಉಗ್ರರ ಶಿಬಿರಗಳ ಮೇಲೆ ಮಿಂಚಿನ ದಾಳಿ ನಡೆಸಿ 30ಕ್ಕೂ ಹೆಚ್ಚು ಭಯೋತ್ಪಾದಕರನ್ನು ಕೊಂದು ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿ ಭಾರತದ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿತ್ತು.

ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)ದೊಳಗೆ ನುಗ್ಗಿ ಭಯೋತ್ಪಾದಕರನ್ನು ಹತ್ಯೆಗೈದು ಪರಾಕ್ರಮ ಮೆರೆದಿದ್ದ ಸೈನಿಕರ ಶೌರ್ಯ, ಸಾಹಸವನ್ನು ಸ್ಮರಿಸಲಾಗುತ್ತಿದೆ.

2016 ಸೆ.28ರಂದು ಭಾರತೀಯ ಸೇನಾ ಪಡೆ ಪಿಒಕೆಯಲ್ಲಿ ಭಾರತದ ಮೇಲೆ ದಾಳಿ ನಡೆಸಲು ಹೊಂಚು ಹಾಕಿದ್ದ ಪಾಕಿಸ್ತಾನ ಬೆಂಬಲಿತ ಅನೇಕ ಭಯೋತ್ಪಾದಕ ನೆಲೆಗಳ ಮೇಲೆ ಒಂದೇ ರಾತ್ರಿಯಲ್ಲಿ ದಾಳಿ ಮಾಡಿ ಧ್ವಂಸ ಮಾಡಿತ್ತು. ಈ ಮಿಂಚಿನ ಕಾರ್ಯಾಚರಣೆಯಲ್ಲಿ ಹಲವು ಉಗ್ರರು ಹತರಾಗಿದ್ದರು.

Sri Raghav

Admin