ಮಸೂದ್ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಲು ವಿಶ್ವಸಂಸ್ಥೆಗೆ ಫ್ರಾನ್ಸ್ ಪ್ರಸ್ತಾಪ
ನವದೆಹಲಿ, ಫೆ.20- ಪುಲ್ವಾಮ ಉಗ್ರ ದಾಳಿಯ ಹೊಣೆ ಹೊತ್ತ ಜೈಷ್-ಇ-ಮೊಹ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸುವಂತೆ ಫ್ರಾನ್ಸ್ ಒಂದೇರಡು ದಿನದಲ್ಲಿ ವಿಶ್ವಸಂಸ್ಥೆಗೆ ಮನವಿ ಮಾಡಲಿದೆ.
ಮಸೂದ್ ಅಜರ್ ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸುವಂತೆ ವಿಶ್ವಸಂಸ್ಥೆ ಮುಂದೆ ಪ್ರಸ್ತಾಪ ಸಲ್ಲಿಸಿದರೆ ಕಳೆದ 10 ವರ್ಷಗಳ ಸಲ್ಲಿಸಿದ ನಾಲ್ಕನೇ ಪ್ರಸ್ತಾಪ ಇದಾಗಲಿದೆ.ಫ್ರಾನ್ ಸರ್ಕಾರ ಈ ಹಿಂದೆಯೂ ವಿಶ್ವಸಂಸ್ಥೆ ಮುಂದೆ ಪಾಕಿಸ್ತಾನದ ಉಗ್ರ ಸಂಘಟನೆಗಳನ್ನು ನಿಷೇಧಿಸುವಂತೆ ಮನವಿ ಮಾಡಿತ್ತು.ಅಲ್ಲದೇ ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಎಂದು ಘೋಷಿಸಿ ಯಾವುದೇ ದೇಶಕ್ಕೂ ಪ್ರವೇಶಿಸದಂತೇ ಬಹಿಷ್ಕಾರ ಹಾಕಿ ಎಂದು ಒತ್ತಾಯ ಮಾಡಿತ್ತು.
ಆದರೆ, ಚೀನಾ ಈ ಪ್ರಸ್ತಾಪವನ್ನು ತಳ್ಳಿ ಹಾಕಿತ್ತು. ಇದೀಗ ಮತ್ತೆ ಫ್ರಾನ್ಸ್ ಈ ಪ್ರಸ್ತಾಪ ಇಡಲಿದ್ದು, ಶೀಘ್ರದಲ್ಲಿಯೇ ಜಾಗತೀಕ ಭಯೋತ್ಪಾದಕರ ಪಟ್ಟಿಗೆ ಮಸೂದ್ನನ್ನು ಸೇರಿಸುವ ಸಾಧ್ಯತೆಯಿದೆ ಎಂದು ಫ್ರಾನ್ಸ್ ಮೂಲದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನು ಈಗಾಗಲೇ ಪುಲ್ವಾಮ ಮೇಲಿನ ದಾಳಿಯನ್ನು ಜಗತ್ತಿನ ಹಲವು ದೇಶಗಳು ಕಟುವಾಗಿ ಖಂಡಿಸಿವೆ. ಅಮೆರಿಕ, ರಷ್ಯಾ, ಭೂತಾನ್, ನೇಪಾಳ, ಶ್ರೀಲಂಕಾ ಈ ದಾಳಿಯನ್ನು ಬಲವಾಗಿ ಖಂಡಿಸಿದ್ದು, ವೀರ ಯೋಧರ ಬಲಿದಾನಕ್ಕೆ ಕಂಬನಿ ಮಿಡಿದಿವೆ.